Thursday, 31st October 2024

Chikkaballapur News: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ

ಬಾಗೇಪಲ್ಲಿ: ತಾಲ್ಲೂಕು ಸರ್ಕಾರಿ ನೌಕರರ ಸಂಘದ ೩ ಕ್ಷೇತ್ರಗಳ ೬ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಹಾಗೂ ಫಲಿತಾಂಶ ಸೋಮವಾರ ತಡರಾತ್ರಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ನಡೆಯಿತು.

ಪ್ರಾಥಮಿಕ ಶಾಲಾ ಮತಕ್ಷೇತ್ರದ ಪೈಕಿ ಎಂ.ವಿ. ರಂಗಾರೆಡ್ಡಿ ೨೫೩ ಮತಗಳು, ಕದಿರಪ್ಪ ೧೯೨ ಮತಗಳು, ಶಿವಣ್ಣ ೧೯೦ ಮತಗಳು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕ್ಷೇತ್ರದಿಂದ ಬಿಸಿಎಂನ ಅ.ಶಿವಪ್ಪ ೨೫ ಮತಗಳು ಗೋಪಿನಾಯಕ ೨೫ ಮತಗಳು ಹಾಗೂ ತಾಂತ್ರಿಕ ಶಿಕ್ಷಣ ಕ್ಷೇತ್ರದಿಂದ ಆರ್.ವೀಣಾಪಾಣಿ ೦೮ ಮತಗಳು ಪಡೆದು ಗೆಲುವು ಸಾಧಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಚುನಾವಣೆ ಅಧಿಕಾರಿಗಳಾದ ಆರ್.ವೆಂಕಟರಾಮಪ್ಪ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ೨೦೨೪-೨೦೨೯ ಅವಧಿಯ ಚುನಾವಣೆ ಹಾಗೂ ಫಲಿತಾಂಶ ಯಾವುದೇ ಗೊಂದಲಗಳು ಇಲ್ಲದೇ ಶಾಂತಿಯುತವಾಗಿ ಚುನಾವಣೆ ನಡೆದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹ ಚುನಾವಣೆ ಅಧಿಕಾರಿಗಳಾದ ಎಂ.ಎಲ್.ಮಂಜುನಾಥ್, ಮೆಹಬೂಬ್ ಬಾಷಾ, ನಸರುದ್ದೀನ್ ಅಧಿಕಾರಿಗಳು, ಚುನಾವಣಾ ಕಾರ್ಯ ಹಾಗೂ ಮತಗಳ ಏಣಿಕೆಗಳ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಜಯಗಳಿಸಿದ ಶಿಕ್ಷಕರು ಹೂವಿನ ಹಾರಗಳನ್ನು ಹಾಕಿ ಸಿಹಿ ತಿನ್ನಿಸಿ ಹಾಗೂ ಹಂಚಿ ಸಂಭ್ರಮಿಸಿ ದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ  ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.