Saturday, 23rd November 2024

Britan King : ಆಯುರ್ವದ ಚಿಕಿತ್ಸೆಗಾಗಿ ಬಂದ ಬ್ರಿಟನ್ ರಾಜ ಚಾರ್ಲ್ಸ್; ಎಲ್ಲಿದ್ದಾರೆ ಅವರು

Britan King

ಬೆಂಗಳೂರು: ಬ್ರಿಟನ್‌ನ ದೊರೆ 3 ನೇ ಚಾರ್ಲ್ಸ್ (King Charles ) ಮತ್ತು ಪತ್ನಿ ಕ್ಯಾಮಿಲ್ಲಾ(Camilla ) ಅವರು ಬೆಂಗಳೂರಿಗೆ (Bengaluru) ವಯಕ್ತಿಕ ಭೇಟಿ ನೀಡಿದ್ದು, ವೈಟ್‌ಫೀಲ್ಡ್‌ನಲ್ಲಿರುವ ಹೆಸರಾಂತ ಸೌಕ್ಯ ಇಂಟರ್‌ನ್ಯಾಶನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್‌ನಲ್ಲಿ (SIHHC) ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇ 6 ರಂದು ಬ್ರಿಟನ್‌ ದೊರೆಯಾಗಿ 3 ನೇ ಚಾರ್ಲ್ಸ್ ಅಧಿಕಾರ ವಹಿಸಿಕೊಂಡಿದ್ದರು. ಬ್ರಿಟನ್‌ ರಾಜನಾದ ನಂತರ ಭಾರತಕ್ಕೆ ಇದು ಅವರ ಮೊದಲ ಭೇಟಿ.

ಬೆಂಗಳೂರಿನ ಹೊರವಲಯದಲ್ಲಿರುವ ವಿಶಾಲವಾದ 30 ಎಕರೆ ಜಮೀನಿನೊಳಗೆ ಇರುವ ಸೌಕ್ಯ ಆರೋಗ್ಯ ಕೇಂದ್ರದಲ್ಲಿ ತಂಗಿರುವ ದಂಪತಿ ವಿಶ್ರಾಂತಿ ಹಾಗೂ ನೈಸರ್ಗಿಕ ಚಿಕಿತ್ಸಾ ಪದ್ಧತಿಗೆ ಒಳಗಾಗಲಿದೆ ಎಂದು ಹೇಳಲಾಗುತ್ತಿದೆ.

ಬ್ರಿಟನ್‌ ದೊರೆಗೆ ಕಾನ್ಸರ್‌!

ಬ್ರಿಟನ್ ರಾಜ 3ನೇ ಚಾರ್ಲ್ಸ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ಬಕಿಂಗ್ಹ್ಯಾಮ್ ಅರಮನೆ ಸ್ಪಷ್ಟಪಡಿಸಿದೆ. ಚಿಕಿತ್ಸೆಯಲ್ಲಿ ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಹೀಗಾಗಿ ಕಿಂಗ್ ಚಾರ್ಲ್ಸ್ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮದಲ್ಲಿ ತೊಡಗುವುದಕ್ಕೆ ವೈದ್ಯರು ನಿರಾಕರಿಸಿದ್ದಾರೆ. ಆದಾಗ್ಯೂ, ಈ ಅವಧಿಯಲ್ಲಿ ಅವರು ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ. ಎಂದು ಬಕಿಂಗ್ಹ್ಯಾಮ್ ಅರಮನೆ ಸ್ಪಷ್ಟನೆ ನೀಡಿದೆ. ರಾಣಿ 2 ನೇ ಎಲಿಜಬೆತ್ ರ ಮರಣದ ನಂತರ, ಕಿಂಗ್ ಚಾರ್ಲ್ಸ್ ಬ್ರಿಟನ್ನ ರಾಜನಾದರು. ಕಳೆದ ವರ್ಷ ಮೇ ತಿಂಗಳಲ್ಲಿ ಅವರು ಪಟ್ಟಾಭಿಷಿಕ್ತರಾದರು. 14 ನವೆಂಬರ್ 1948ರಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಜನಿಸಿದರು.

ಸೌಕ್ಯ ಎಂದರೇನು?

ಸೌಕ್ಯ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವು ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸಮಗ್ರ ಸ್ವಾಸ್ಥ್ಯ ಕೇಂದ್ರವಾಗಿದೆ. ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಮತ್ತು ಯೋಗದ ಸುತ್ತ ಕೇಂದ್ರೀಕೃತವಾದ ಚಿಕಿತ್ಸೆಗಳನ್ನು ಇಲ್ಲಿ ನೀಡಲಾಗುತ್ತದೆ . ಈ ಕೇಂದ್ರದಲ್ಲಿ ಅಕ್ಯುಪಂಕ್ಚರ್, ರಿಫ್ಲೆಕ್ಸೋಲಜಿ, ಆಕ್ಯುಪ್ರೆಶರ್ ಮತ್ತು ಹಲವಾರು ರೀತಿಯ ಮಸಾಜ್‌ಗಳನ್ನು ಮಾಡಲಾಗುತ್ತದೆ. ಹಾಗೂ ಸಂಪೂರ್ಣ ಹಸಿರಿನಿಂದ ಕೂಡಿರುವ ಉದ್ಯಾನಗಳೊಂದಿಗೆ 25 ವಿಶಾಲವಾದ ಕೊಠಡಿಗಳನ್ನು ಹೊಂದಿದೆ. ಯೋಗ ಹಾಲ್, ವಾಕಿಂಗ್ ಟ್ರ್ಯಾಕ್, ಲೈಬ್ರರಿ, ಈಜುಕೊಳ, ಒಳಾಂಗಣ ಆಟಗಳು, ಸೈಕ್ಲಿಂಗ್ ಇತ್ಯಾದಿಗಳು ಇತರ ಸೌಲಭ್ಯಗಳನ್ನು ಒಳಗೊಂಡಿವೆ.

ಬ್ರಿಟನ್‌ ರಾಜ ಕಳೆದ ಕೆಲ ವರ್ಷಗಳಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದು, ತಮ್ಮ71 ನೇ ಹುಟ್ಟು ಹಬ್ಬವನ್ನು ಇಲ್ಲಿಯೇ ಆಚರಿಸಿಕೊಂಡಿದ್ದರು.