Wednesday, 30th October 2024

Darshan Thoogudeepa Bail : ದರ್ಶನ್‌ ಬೇಲ್‌ ಕುರಿತು ವಕೀಲ ಸುನೀಲ್‌ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಬೇಲ್‌ ಸಿಕ್ಕಿದೆ (Darshan Thoogudeepa Bail). ಅವರ ಆಪ್ತರು ಹಾಗೂ ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಈ ನಡುವೆ ದರ್ಶನ್ ಪರ ವಕೀಲರಾದ ಸುನಿಲ್ ಅವರು ಟಿವಿ9 ಜತೆ ಮಾತನಾಡುತ್ತಾ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್​ಗೆ ಇರುವ ಆರೋಗ್ಯ ಸಮಸ್ಯೆ ಪರಿಗಣಿಸಿ ಮಾನ್ಯ ಹೈಕೋರ್ಟ್‌ ಮಧ್ಯಂತರ ಜಾಮೀನು ಕೊಟ್ಟಿದೆ. ಕಾನೂನು ಪ್ರಕ್ರಿಯೆಗಳು ಇಂದೇ ಮುಗಿದು ಇಂದೇ ದರ್ಶನ್ ಜೈಲಿನಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ ಸುನಿಲ್ ಅವರು ಹೇಳಿದ್ದಾರೆ.

ನಾವು ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಮಧ್ಯಂತರ ಜಾಮೀನು ನೀಡಬೇಕೆಂದು ನ್ಯಾಯಪೀಠದ ಮುಂದೆ ಮನವಿ ಮಾಡಿದ್ದೆವು. ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ಅವರ ಎಲ್​5 ಮತ್ತು ಎಸ್​1 ಅಲ್ಲಿ ಸಮಸ್ಯೆಯಿದ್ದು ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದರು.

ಬೆನ್ನು ನೋವಿನ ಸಮಸ್ಯೆ ದರ್ಶನ್​ಗೆ ಹಿಂದೆಯೂ ಇದೆ. ಪ್ರಕರಣ ದಾಖಲಾದ ಬಳಿಕ ಬೆನ್ನು ನೋವು ಬಂದಿದೆ ಎಂಬುದು ಸುಳ್ಳು. ಈ ಸಮಸ್ಯೆ 2022-23 ರಿಂದಲೂ ಇದೆ. ಅದಕ್ಕೆ ಅವರು ಚಿಕಿತ್ಸೆ ಪಡೆದಿದ್ದಾರೆ. ಆದರೆ ಸಮಸ್ಯೆ ಸರಿ ಹೋಗಿರಲಿಲ್ಲ. ಅದರ ವರದಿಗಳನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸಿದ್ದೆವು ಎಂದು ಹೇಳಿದ್ದಾರೆ ಸುನೀಲ್ ಹೇಳಿದ್ದಾರೆ.

ದರ್ಶನ್​ ಅವರನ್ನು ವೈದ್ಯಕೀಯ ತಪಾಸಣೆ ಮಾಡಿರುವ ವೈದ್ಯರು ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದ್ದರು. ಅವೆಲ್ಲವನ್ನೂ ಪರಿಗಣಿಸಿ ಈಗ ಮಧ್ಯಂತರ ಜಾಮೀನು ಮಝೂರು ಮಾಡಲಾಗಿದೆ. ದರ್ಶನ್ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಅವರು ಮತ್ತು ಅವರ ಕುಟುಂಬದವರು ನಿರ್ಧಾರ ಮಾಡುತ್ತಾರೆ. ಅವರು ನಿರ್ಧಾರ ಮಾಡಿದ ಬಳಿಕ ಅದರ ವಿವರವನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದೇವೆ’ ಎಂದು ವೈದ್ಯರು ಹೇಳಿದರು.

ಇದನ್ನೂ ಓದಿ: Darshan Thoogudeepa Bail : ಬೇಲ್‌ ಪಡೆದ ದರ್ಶನ್‌ ಜೈಲಿನಿಂದ ಹೊರಬರುವುದು ಯಾವಾಗ?

ಈಗ ದರ್ಶನ್​ಗೆ ಮಧ್ಯಂತರ ಜಾಮೀನು ಮಾತ್ರವೇ ಮಂಜೂರಾಗಿದೆ. ಆದರೆ ನಿಯಮಿತ ಜಾಮೀನು ಮಂಜೂರಾಗಿಲ್ಲ. ಮಧ್ಯಂತರ ಜಾಮೀನು ಅವಧಿ ಮುಗಿದ ಬಳಿಕ ನಿಯಮಿತ ಜಾಮೀನಿಗೆ ನಾವು ಅರ್ಜಿ ಹಾಕಲಿದ್ದೇವೆ. ಅದು ನಮ್ಮ ಜವಾಬ್ದಾರಿಯಾಗಿದ್ದು, ದರ್ಶನ್​ಗೆ ನಿಯಮಿತ ಜಾಮೀನು ಕೊಡಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ’ ಎಂದಿದ್ದಾರೆ ಸುನಿಲ್.