ದೀಪಾವಳಿ ಸಂದರ್ಭದಲ್ಲಿ ಮನೆಗೆ ಬರುವ ಅತಿಥಿಗಳಿಗೆ ಏನಾದರೂ ಉಡುಗೊರೆಯನ್ನು (Deepavali Gift) ನೀಡಲೇಬೇಕು ಎನ್ನುವ ಸಂಪ್ರದಾಯವಿದೆ. ಸಿಹಿ ತಿನಿಸುಗಳು, ಒಣ ಹಣ್ಣುಗಳು, ಬಟ್ಟೆಬರೆಗಳನ್ನು ಉಡುಗೊರೆಯಾಗಿ ಕೊಡುವುದು ಸಾಮಾನ್ಯ. ಈ ಬಾರಿ ವಿಶೇಷವಾಗಿ ವಾಸ್ತು (Vastu Tips) ಸ್ನೇಹಿ ಸಸ್ಯಗಳನ್ನು (Deepavali Vastu Tips) ನೀಡಿ ನಮ್ಮ ಸ್ನೇಹಿತರು, ಬಂಧು ಬಾಂಧವರ ಮನೆಯಲ್ಲೂ ಸುಖ, ಶಾಂತಿ, ಸಮೃದ್ಧಿ ವೃದ್ಧಿಸುವಂತೆ ಮಾಡೋಣ.
ದೀಪಾವಳಿಯ ಸಮಯದಲ್ಲಿ ವಾಸ್ತು ಸ್ನೇಹಿ ಒಳಾಂಗಣ ಸಸ್ಯಗಳನ್ನು ಉಡುಗೊರೆಯಾಗಿ ನೀಡುವುದೆಂದರೆ ಅದನ್ನು ಸ್ವೀಕರಿಸುವವರ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಒಂದು ಸುಲಭ ದಾರಿಯಾಗಿದೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಕತ್ತಲೆ, ಅಜ್ಞಾನದ ಮೇಲೆ ಒಳ್ಳೆಯದು, ಜ್ಞಾನದ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ. ಹೀಗಾಗಿ ಈ ಹಬ್ಬವೆಂದರೆ ಮನೆಗೆ ಸಕಾರಾತ್ಮಕತೆಯನ್ನು ಸ್ವಾಗತಿಸುವ ಸಮಯವಾಗಿದೆ.
ದೀಪಾವಳಿಯ ಸಮಯದಲ್ಲಿ ಒಳಾಂಗಣ ಸಸ್ಯಗಳು ಹಸಿರಿನ ಸ್ಪರ್ಶವನ್ನು ನೀಡುತ್ತದೆ. ಇದು ಮನೆಯ ಅಲಂಕಾರಕ್ಕೂ ಸೂಕ್ತವಾಗಿರುತ್ತದೆ. ಹೀಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಅದೃಷ್ಟ ಮತ್ತು ಸಮೃದ್ಧಿ ತರುವ ಗಿಡಗಳನ್ನು ಉಡುಗೊರೆಯಾಗಿ ನೀಡಬಹುದು.
ಮನಿ ಪ್ಲಾಂಟ್
ಹಣದ ಸಸ್ಯ ಎಂದೇ ಕರೆಯಲ್ಪಡುವ ಮನಿ ಪ್ಲಾಂಟ್ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಈ ಸಸ್ಯವನ್ನು ಉಡುಗೊರೆಯಾಗಿ ಸ್ವೀಕರಿಸುವವರಿಗೆ ಗಿಡದ ಮಹತ್ವ ಮತ್ತು ಅದನ್ನು ನೋಡಿಕೊಳ್ಳುವ ಬಗ್ಗೆ ಒಂದು ಕಾರ್ಡ್ ಮಾಡಿ ಕೊಡಿ. ಇದು ಸದಾ ಅವರಿಗೆ ನಿಮ್ಮ ನೆನಪನ್ನು ತರುತ್ತದೆ. ಕಾರ್ಡ್ ನಲ್ಲಿ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲಿ ಇರಿಸಲು ತಿಳಿಸಿ. ಅಲ್ಲದೇ ಮಣ್ಣು ಒಣಗಿದಾಗ ನೀರು ಹಾಕಲು ಹೇಳಿ.
ಬಿದಿರು ಸಸ್ಯ
ಬಿದಿರಿನ ಸಸ್ಯಗಳು ಶಕ್ತಿಯನ್ನು ಪ್ರತಿನಿಧಿಸುತ್ತದೆ.ವಾಸ್ತು ಪ್ರಕಾರ ಇದು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಬಿದಿರಿನ ಸಸ್ಯವನ್ನು ನೀರಿನಲ್ಲಿ ಇಟ್ಟು ಕಾಂಡಗಳು ನೀರಿನ ಒಳಗೆ ಇರುವಂತೆ ಖಾತ್ರಿಪಡಿಸಿಕೊಳ್ಳಲು ಹೇಳಿ. ಸೂರ್ಯನ ಬೆಳಕಿನಲ್ಲಿ ಇರಿಸುವುದು ಸೂಕ್ತ. ಮಾತ್ರವಲ್ಲದೆ ಪ್ರತಿ ವಾರ ನೀರನ್ನು ಬದಲಾಯಿಸಲಿ ಮತ್ತು ಪರೋಕ್ಷ ಸೂರ್ಯನ ಬೆಳಕಿನಲ್ಲಿ ಇರಿಸಿ.
ಲಿಲ್ಲಿ
ಲಿಲ್ಲಿ ಗಿಡ ಗಾಳಿಯನ್ನು ಶುದ್ಧೀಕರಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಶಾಂತಿಯನ್ನು ಉತ್ತೇಜಿಸುತ್ತದೆ. ಕಡಿಮೆ ಬೆಳಕಿನಲ್ಲಿ ಬೆಳೆಯುವ ಈ ಗಿಡಗಳ ಮೇಲ್ಮಣ್ಣು ಒಣಗಿದಾಗ ನೀರುಣಿಸಬೇಕು. ಅತಿಯಾಗಿ ನೀರು ಹಾಕಬೇಡಿ.
ಅಲೋವೆರಾ
ಅಲೋವೆರಾ ಔಷಧದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಆರೋಗ್ಯ ಮತ್ತು ರಕ್ಷಣೆಯನ್ನು ಸಂಕೇತಿಸುತ್ತದೆ. ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ತರುವ ಈ ಗಿಡಕ್ಕೆ ಸೂರ್ಯನ ಬೆಳಕು ಅತ್ಯಗತ್ಯ. ಪ್ರತಿ ಎರಡು ಮೂರು ವಾರಗಳಿಗೊಮ್ಮೆ ನೀರು ಸಿಗುವಂತೆ ಮಾಡಿ. ಬುಡದಲ್ಲಿ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಿ.
ರಬ್ಬರ್ ಪ್ಲಾಂಟ್
ರಬ್ಬರ್ ಸಸ್ಯವು ಸಂಪತ್ತು ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಇದು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಶಕ್ತಿ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಸುಧಾರಿಸುತ್ತದೆ. ರಬ್ಬರ್ ಗಿಡವನ್ನು ಸೂರ್ಯನ ಬೆಳಕಿನಲ್ಲಿ ಇರಿಸಿ, ಮೇಲಿನ ಮಣ್ಣು ಒಣಗಿದಾಗ ನೀರು ಹಾಕಿ.
ಜೇಡ್ ಪ್ಲಾಂಟ್
ಜೇಡ್ ಸಸ್ಯವನ್ನು ಸಾಮಾನ್ಯವಾಗಿ “ಹಣದ ಮರ” ಎಂದು ಕರೆಯಲಾಗುತ್ತದೆ. ಅದೃಷ್ಟವನ್ನು ತರುವ ಈ ಗಿಡ ಸೂರ್ಯನ ಬೆಳಕನ್ನು ಬಯಸುತ್ತವೆ. ಮಣ್ಣು ಸಂಪೂರ್ಣವಾಗಿ ಒಣಗಿದಾಗ ನೀರುಣಿಸಿ. ಅತಿಯಾಗಿ ನೀರು ಹಾಕುವುದು ಬೇರು ಕೊಳೆಯುವಂತೆ ಮಾಡಬಹುದು.
ಸ್ನೇಕ್ ಪ್ಲಾಂಟ್
ಹಾವಿನ ಸಸ್ಯಗಳು ಸುತ್ತಮುತ್ತಲಿನ ಗಾಳಿಯನ್ನು ಶುದ್ದೀಕರಿಸುತ್ತವೆ. ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಈ ಗಿಡ ಬೆಳೆಯಲು ಕಡಿಮೆ ಬೆಳಕು ಸಾಕು. ಮಣ್ಣು ಒಣಗಿದಾಗ ನೀರುಣಿಸಿದರೆ ಸಾಕು.
ಅರೆಕಾ ಪಾಮ್
ಅರೆಕಾ ಪಾಮ್ ಗಾಳಿಯನ್ನು ಶುದ್ಧೀಕರಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಮನೆಗೆ ಶಾಂತಿಯನ್ನು ತರುತ್ತದೆ ಎಂದು ನಂಬಲಾಗುತ್ತದೆ. ಈ ಸಸ್ಯಗಳಿಗೆ ಸೂರ್ಯನ ಬೆಳಕು ಬೀಳಬೇಕು, ನಿರಂತರ ನೀರುಣಿಸಬೇಕು. ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
Deepavali Vastu Tips: ವಾಸ್ತು ಪ್ರಕಾರ ಮನೆಯೊಳಗಿನ ದೀಪಾವಳಿ ಅಲಂಕಾರ ಹೀಗಿರಬೇಕು
ತುಳಸಿ
ತುಳಸಿಯನ್ನು ಹಿಂದೂ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಶುದ್ಧತೆ ಮತ್ತು ರಕ್ಷಣೆಯನ್ನು ಇದು ಸಂಕೇತಿಸುತ್ತದೆ. ಆರೋಗ್ಯ ಮತ್ತು ಸಮೃದ್ಧಿಯನ್ನು ತರುವ ಈ ಗಿಡಕ್ಕೆ ಸಾಕಷ್ಟು ಸೂರ್ಯನ ಬೆಳಕು ಬೇಕು ಮತ್ತು ನಿಯಮಿತವಾಗಿ ನೀರುಣಿಸಬೇಕು.