ಬೆಂಗಳೂರು ; ದರ್ಶನ್ ಅಭಿಮಾನಿಗಳೆಂದೆರ ಬೆಂಕಿ ಚೆಂಡುಗಳು. ಖುಷಿ ಮತ್ತು ಕೋಪವನ್ನು ಒಂದೆ ರೀತಿಯಲ್ಲಿ ವ್ಯಕ್ತಪಡಿಸುವವರು. ಹೀಗಾಗಿ ದರ್ಶನ್ ಅಭಿಮಾನಿಗಳೆಂದರೆ ಕೆಲವರಿಗೆ ಇಷ್ಟ ಇನ್ನಲವರಿಗೆ ಕಷ್ಟ. ಇದೀಗ ಆರು ವಾರಗಳ ಬೇಲ್ ಮೇಲೆ ದರ್ಶನ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ಈ ಖುಷಿಯಲ್ಲಿ ಅವರೇನು ಮಾಡುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳ ಫ್ಯಾನ್ಸ್‌ಗ್ರೂಪ್ ಒಂದು ಏನೂ ಮಾಡದಂತೆ ಹಾಗೂ ಇತರರನ್ನು ಹಳಿಯದಂತೆ ಮನವಿಯೊಂದನ್ನು ಮಾಡಿದೆ.
ನಟ ದರ್ಶನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಪಡೆದಿದ್ದಾರೆ. ಹೈಕೋರ್ಟ್ ದರ್ಶನ್‌ಗೆ ಜಾಮೀನು ಕೊಟ್ಟಿದೆ. ಈ ಮಧ್ಯೆ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ ಕಡೆಯಿಂದ ಮನವಿ ಒಂದು ಬಂದಿದೆ.
ದರ್ಶನ್ ಬಂಧನಕ್ಕೆ ಒಳಗಾದಾಗಿನಿಂದಲೂ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬೇರೆ ನಟರು, ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಂಡು ಬರುತ್ತಿದ್ದಾರೆ. ಇತರ ಕಲಾವಿದರ ಬಗ್ಗೆ ಮಾನಹಾನಿಕರ ಪೋಸ್ಟ್ ಮಾಡುತ್ತಾ ಬರುತ್ತಿದ್ದಾರೆ. ಬೇರೆ ಕಲಾವಿದರನ್ನು, ಮಾಧ್ಯಮದವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕೆಲಸ ಮುಂದುವರಿದಿದೆ. ಹೀಗಾಗಿ ಪ್ರಜ್ಞಾವಂತ ಅಭಿಮಾನಿಗಳ ಗುಂಪೊಂದು ಕಿಡಿಗೇಡಿತನ ಮಾಡದಂತೆ ಮನವಿ ಮಾಡಿದೆ.
ಇದನ್ನೂ ಓದಿ: Darshan Thoogudeepa Bail : ದರ್ಶನ್ ಬೇಲ್ ಕುರಿತು ವಕೀಲ ಸುನೀಲ್ ಹೇಳಿದ್ದೇನು?
ದರ್ಶನ್ ಅವರ ಅಧಿಕೃತ ಫ್ಯಾನ್ಪೇಜ್ ಆದ ‘ಡಿ ಕಂಪನಿ’ ಅಭಿಮಾನಿಗಳಿಗೆ ಮನವಿ ಮಾಡಿ ಪೋಸ್ಟ್ ಮಾಡಿದೆ. ‘ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ, ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರವರಿಗೆ ಜಾಮೀನು ಸಿಕ್ಕಿದೆ. ಈ ಸಂತೋಷದ ಸಂಭ್ರಮದಲ್ಲಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ಮಾಧ್ಯಮದವರು, ರಾಜಕಾರಣಿಗಳು, ಬೇರೆ ನಟರು ಹಾಗೂ ಕಾನೂನಿನ ಬಗ್ಗೆ ನಿಂದನೆ ಬೇಡ’ ಎಂದು ಕೋರಲಾಗಿದೆ.
ಸದ್ಯ ದರ್ಶನ್‌ಗೆ ಸಿಕ್ಕಿರುವುದು ಮಧ್ಯಂತರ ಜಾಮೀನು ಅಷ್ಟೇ. ಅನಾರೋಗ್ಯದ ಕಾರಣಕ್ಕೆ ಈ ಜಾಮೀನು ಕೊಡಲಾಗಿದೆ. ಅವರಿಗೆ ಕೋರ್ಟ್ ಕಡೆಯಿಂದ ಆರು ವಾರಗಳ ಸಮಾಯವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಅವರು ಚಿಕಿತ್ಸೆ ಪಡೆದು ಬರಬೇಕಿದೆ. ಕೋರ್ಟ್ ಷರತ್ತುಗಳನ್ನು ಉಲ್ಲಂಘಿಸುವಂತಿಲ್ಲ.