Wednesday, 30th October 2024

Waqf board: ಇಲ್ಲಿನ ಮುಸ್ಲಿಂರೆಲ್ಲ ಹಿಂದುಗಳೇ ಆಗಿದ್ದವರು, ವಕ್ಫ್‌ಗೆ ಹೇಗೆ ಲಕ್ಷ ಲಕ್ಷ ಎಕರೆ ಆಸ್ತಿ ಬಂತು: ಜೋಶಿ ಪ್ರಶ್ನೆ

ಹುಬ್ಬಳ್ಳಿ: ಇಲ್ಲಿರುವ ಮುಸ್ಲಿಂರೆಲ್ಲ ಹಿಂದುಗಳೇ ಆಗಿದ್ದವರು. ಆಮಿಷ, ಬೆದರಿಕೆಯೊಡ್ಡಿ ಅವರನ್ನು ಕನ್ವರ್ಟ್ ಮಾಡಿದ್ದರು. ಇಲ್ಲಿರುವ ಸಾಬರು ನಿಜವಾದ ಸಾಬರಲ್ಲ. ಬೆದರಿಕೆ, ಆಮಿಷಕ್ಕೆ ಬಲಿಯಾದವರು. ಹೀಗಿರುವಾಗ ವಕ್ಫ್‌ಗೆ (Waqf board) ಹೇಗೆ ಲಕ್ಷಾಂತರ ಎಕರೆ ಭೂಮಿ ಬರುತ್ತದೆ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು.

ವಕ್ಫ್ ಭೂ ಕಬಳಿಕೆ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಇದು ವಕ್ಫ್ ಭೂಮಿ ಎನ್ನುವುದೆಲ್ಲ ಸುಳ್ಳು. ಆದಿಲ್ ಶಾ ಬಂದಿದ್ದ, ಇನ್ನೊಬ್ಬ ಬಂದಿದ್ದ. ವಿಜಯಪುರದಲ್ಲಿ ಅವರು ಆಡಳಿತ ಮಾಡಿದ್ರು ಅಂತೆಲ್ಲಾ ಹೇಳ್ತಾರೆ. ಆದಿಲ್ ಶಾ ಏನು ಇಲ್ಲಿಯವನೇ? ಎಂದು ಪ್ರಶ್ನಿಸಿದ ಅವರು, ಇಲ್ಲಿರುವ ಸಾಬರು ನಿಜವಾದ ಸಾಬರಲ್ಲ. ಇಲ್ಲಿದ್ದವರೆಲ್ಲಾ ಹಿಂದುಗಳೇ ಆಗಿದ್ದವರು. ಬೆದರಿಕೆ, ಆಮಿಷಕ್ಕೆ ಬಲಿಯಾದವರು. ಹೀಗಿರುವಾಗ ವಕ್ಫ್‌ಗೆ ಹೇಗೆ ಲಕ್ಷಾಂತರ ಎಕರೆ ಭೂಮಿ ಬರುತ್ತದೆ? ಕಿಡಿಕಾರಿದ್ದಾರೆ.

ವಕ್ಫ್‌ಗೆ ಲಕ್ಷಗಟ್ಟಲೆ ಎಕರೆ ಆಸ್ತಿ ಯಾರೂ ದಾನ ಕೊಟ್ಟಿಲ್ಲ:

ವಕ್ಫ್‌ಗೆ ಎಲ್ಲಿಂದ ಬರುತ್ತದೆ ಆಸ್ತಿ. ಸುಮ್ ಸುಮ್ನೆ ದಾನ ಕೊಟ್ಟಿದ್ದು ಎನ್ನುತ್ತಾರೆ. ದಾನ ಕೊಡುವವರು ಲಕ್ಷ ಎಕರೆಗಟ್ಟಲೆ ದಾನ ಕೊಡುತ್ತಾರೆಯೇ ಯಾರಾದರೂ? ಅದ್ಯಾರು ದಾನ ಕೊಟ್ಟರು? ಎಂದು ಜೋಶಿ ಕಿಡಿ ಕಾರಿದರು.

ವಕ್ಫ್‌ಗೆ ಯಾರೂ ಲಕ್ಷಾಂತರ ಎಕರೆ ಭೂಮಿ ದಾನ ಕೊಡಲು ಸಾಧ್ಯವಿಲ್ಲ. ತಮ್ಮಲ್ಲಿ 1 ರೂಪಾಯಿ ಇದ್ರೆ 5 ಪೈಸೆ, 10 ಪೈಸೆ ಹೆಚ್ಚೆಂದರೆ 20 ಪೈಸೆಯಷ್ಟು ದಾನ ಮಾಡುವುದು ಸಹಜ. ಆದರೆ, ಅಷ್ಟನ್ನೂ ದಾನ ಬಂದಿದ್ದೆಂದು ಒಪ್ಪಲು ಸಾಧ್ಯವಿಲ್ಲ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.

ರೈತರಿಗೆ ವಕ್ಫ್ ನೋಟಿಸ್ ನೀಡುವುದರಲ್ಲಿ ಅನಧಿಕೃತ, ಅಧಿಕೃತ ಎನ್ನಲಾಗದು. ರೈತರ ಭೂಮಿ ಹೊಡೆಯಲು ಇವರ್ಯಾರು? ಎಂದು ವಕ್ಫ್ ಬೋರ್ಡ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಈ ಸುದ್ದಿಯನ್ನೂ ಓದಿ | Actor Darshan: ದರ್ಶನ್​ಗೆ ಜಾಮೀನು: ರೇಣುಕಾ ಸ್ವಾಮಿ ಮನೆಯವರು ಏನಂದ್ರು?

ಭೂಮಿ ಕಬಳಿಸಲು ವಕ್ಫ್‌ಗೆ ಕುಮ್ಮಕ್ಕು ಕೊಟ್ಟಿದ್ದೇ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್! ಜೋಶಿ ಆರೋಪ

ಹುಬ್ಬಳ್ಳಿ: ರಾಜ್ಯದಲ್ಲಿ ವಕ್ಫ್ ಬೋರ್ಡ್ “ಲ್ಯಾಂಡ್ ಜಿಹಾದ್” ನಡೆಸುತ್ತಿದ್ದು, ಕಾಂಗ್ರೆಸ್ ಸರ್ಕಾರದ (Congress Government) ಕುಮ್ಮಕ್ಕೂ ಇದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು, ಮುಸ್ಲಿಂ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈ ಮಟ್ಟಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.

ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ರೈತರನ್ನು, ಮಠ ಮಾನ್ಯಗಳನ್ನು ಮತ್ತು ಬಡ ಜನಸಾಮಾನ್ಯರನ್ನು ಹಿಂಸಿಸುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ವಕ್ಫ್ ಮೂಲಕ ಆಸ್ತಿ ಕಬಳಿಸಲು ಜಮೀರ್ ಅಹ್ಮದ್, ಕಾಂಗ್ರೆಸ್ ಕುಮ್ಮಕ್ಕು: ಜೋಶಿ ಆರೋಪ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇಸ್ಲಾಂ ಮೂಲಭೂತವಾದಿಗಳ ಬೆಂಬಲಕ್ಕೆ ನಿಂತಿದೆ. ಹೀಗಾಗಿಯೇ ವಕ್ಫ್ ಬೋರ್ಡ್ ಎಲ್ಲಿ ಬೇಕಲ್ಲಿ ರೈತರ ಜಮೀನು ಕಬಳಿಸುತ್ತಿದೆ. 40-50 ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು ನಮಾಜ್ ಮಾಡುತ್ತಿದ್ದ ಸ್ಥಳವೆಂದು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದೆ. ಇದಕ್ಕೆಲ್ಲ ಅಧಿಕಾರ ಕೊಟ್ಟವರೇ ಕಾಂಗ್ರೆಸ್ಸಿಗರು ಎಂದು ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ಡಿಸಿ ಮೂರ್ಖತನ

ತಲತಲಾಂತರದಿಂದ ಇರುವ ರೈತರ ಜಮೀನು, ಮಠದ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವಲ್ಲಿ ವಿಜಯಪುರ ಜಿಲ್ಲಾಧಿಕಾರಿ ಮೂರ್ಖತನ ತೋರಿದ್ದಾರೆ. ಈಗ ಸರಿಪಡಿಸಲು ದಾಖಲೆ ಕೊಡಿ ಎನ್ನುತ್ತಿದ್ದಾರೆ. ರೈತರೇಕೆ ದಾಖಲೆ ಕೊಡಬೇಕು? ಲೋಪ ಮಾಡಿರುವುದು ನೀವು. ನೀವೇ ಸರಿಪಡಿಸಿ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದರು.

ಇದರಲ್ಲಿ ಜಿಲ್ಲಾಧಿಕಾರಿ ಪಾತ್ರಕ್ಕಿಂತ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಸೇರಿದಂತೆ ಪ್ರಮುಖ ಸಚಿವರದ್ದೇ ಪಾತ್ರವಿದೆ. ಹಾಗಾಗಿ ತಹಸೀಲ್ದಾರ್ ಮತ್ತು ಅಧಿಕಾರಿಗಳು ರೈತರ ಪಹಣಿ ತಿದ್ದುಪಡಿ ಮಾಡಿದ್ದಾರೆ ಎಂದು ದೂರಿದರು.

ತಹಸೀಲ್ದಾರ್ ತಮ್ಮ ಮನೆ ನೀಡಲಿ ನೋಡೋಣ: ವಕ್ಫ್‌ಗೆ ರೈತರ ಜಮೀನು ನೀಡಿದ ತಹಸೀಲ್ದಾರ್ ಮತ್ತು ಅಧಿಕಾರಿಗಳು ವಕ್ಫ್‌ಗೆ ತಮ್ಮ ಮನೆ, ಜಮೀನನ್ನು ಹೀಗೆ ಪರಿವರ್ತಿಸಿ ಕೊಡಲಿ ನೋಡೋಣ!? ಎಂದು ಸಚಿವ ಪ್ರಲ್ಹಾದ್‌ ಜೋಶಿ ಕಿಡಿಕಾರಿದರು.

ಸುಪ್ರೀಂ ಪವರ್ ಕೊಟ್ಟ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್

ದೇಶಾದ್ಯಂತ ಮುಸ್ಲಿಂ ಸಮುದಾಯವನ್ನು ತಮ್ಮ ಪಕ್ಷದ ಮತ ಬ್ಯಾಂಕ್ ಆಗಿ ಹಿಡಿದಿಟ್ಟುಕೊಳ್ಳಲೆಂದು 2013ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ವಕ್ಫ್ ಬೋರ್ಡ್‌ಗೆ ಸುಪ್ರೀಂ ಪವರ್ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಕಾಂಗ್ರೆಸ್ ಸರ್ಕಾರ ಇರುವೆಡೆ ಆಸ್ತಿ ಕಬಳಿಸಲು ವಕ್ಫ್ ಸಂಚು: ಜೋಶಿ ಆರೋಪ

ಒಳ ಮೀಸಲಾತಿ; ಸುಪ್ರೀಂ ಆದೇಶ ಪಾಲನೆ

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದರು.