Friday, 22nd November 2024

Medical: ವೈದ್ಯರ ಸಲಹೆ ಇಲ್ಲದೆ ಮೆಡಿಕಲ್‌ಗಳಲ್ಲಿ ಔಷಧಿ ನೀಡಬೇಡಿ; ಮಲ್ಲಿಕಾರ್ಜುನ ನಾಗೂರ್

ಶಿರಾ: ಸರಕಾರ ಡ್ರಗ್ಸ್ ಬಗ್ಗೆ ಬಹಳಷ್ಟು ಕಾನೂನುಗಳನ್ನು ಜಾರಿ ಮಾಡಿದ್ದು, ಮಕ್ಕಳು ಹಾಗೂ ಯುವಕ, ಯುವತಿಯರು, ಡ್ರಗ್ಸ್ ಗೆ ಸಂಬಂಧಪಟ್ಟ ಔಷದಿಗಳನ್ನು ಸೀರೆಂಜ್ ಮೂಲಕ ಇಂಜೆಕ್ಟ್ ಮಾಡಿಕೊಂಡು ದಾರಿ ತಪುö್ಪತಿದ್ದಾರೆ, ಮೆಡಿಕಲ್ ಸ್ಟೋರ್ ಮಾಲೀಕರು ಬಹಳ ಎಚ್ಚರಿಕೆಯಿಂದ ಔಷದಿಗಳನ್ನು ವೈದ್ಯರ ಸಲಹೆಯಿಲ್ಲದೆ ನೀಡಬಾರದು ಎಂದು ಔಷಧ ನಿಯಂತ್ರಣ ಹಿರಿಯ ಅಧಿಕಾರಿ ಮಲ್ಲಿಕಾರ್ಜುನ ನಾಗೂರ್ ಹೇಳಿದರು.

ಅವರು ನಗರದ ಮಂಜುಶ್ರೀ ಕನ್ವೆನ್ಷಲ್ ಹಾಲ್ ನಲ್ಲಿ ಸೋಮವಾರ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವರ್ಲ್ಡ್ ಫಾರ್ಮಸಿಸ್ಟ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಗಿಗಳು ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿ ಏನು ಅವಶ್ಯಕತೆ ಇದೆಯೋ ವೈದ್ಯರ ಸಲಹೆ ಮೇರೆಗೆ ಔಷದಿಗಳನ್ನು ತೆಗುದುಕೊಳ್ಳಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶಿರಾ ತಾಲೂಕಿನಲ್ಲಿರುವ ಔಷಧಿ ವ್ಯಾಪಾರಿಗಳು ತಮ್ಮ ಮೆಡಿಕಲ್‌ಗಳಲ್ಲಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಮೆಡಿಕಲ್ ನವರು ಹೆಚ್ಚು ಜಾಗರೂಕತೆಯಿಂದ ವೈದ್ಯರು ಸಲಹೆ ಮಾಡಿದ ಔಷಧಿಯನ್ನು ಮಾತ್ರ ರೋಗಿಗಳಿಗೆ ನೀಡಬೇಕು ಎಂದರು.

ಮೆಡಿಕಲ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹಲವರಿಗೆ ಸನ್ಮಾನಿಸಿ ಮಾತನಾಡಿದ ಔಷಧ ನಿಯಂತ್ರಣ ಕಿರಿಯ ಅಧಿಕಾರಿ ಚಂದ್ರಕಲಾ ಶಿಲ್ಪ ಅವರು ತಾಲ್ಲೂಕಿನಾದ್ಯಂತ ಬಹುತೇಕ ಮೆಡಿಕಲ್ ಸ್ಟೋರ್ ಗಳಿಗೆ ರೋಗಿಗಳು ಔಷಧಿಗಳ ಅಗತ್ಯಕ್ಕೆ ಭೇಟಿ ಕೊಟ್ಟಾಗ ವೈದ್ಯರಿಂದ ಪಡೆದ ಔಷಧ ಚೀಟಿ ಇಲ್ಲದೆ ಔಷಧ ಮಾರಾಟವನ್ನು ಔಷಧ ಅಂಗಡಿ ಮಾಲೀಕರು ನೀಡಬಾರದು, ಮತ್ತು ಯಾವುದೇ ಔಷಧ ಕೊಂಡ ಗ್ರಾಹಕರಿಗೆ ಬಿಲ್ ನೀಡುವುದರ ಜೊತೆಗೆ ದಿನ ನಿತ್ಯದ ಔಷಧ ನಿರ್ವಹಣೆ ಮಾಡುವ ಕಡೆ ಮೆಡಿಕಲ್ ಸ್ಟೋರ್ ಮಾಲೀಕರು ಹೆಚ್ಚು ಗಮನಹರಿಸಬೇಕು.

ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ನಿರ್ವಹಿಸುವವರು ರೋಗಿಗಳಿಗೆ ಸರಿಯಾದ ರೀತಿ ಮಾರ್ಗ ದರ್ಶನ ನೀಡಿ ಅವರಿಗೆ ಅವಶ್ಯಕತೆ ಇರುವಷ್ಟು ಔಷದಿಗಳನ್ನು ಮಾತ್ರ ನೀಡಿ, ಅದರ ಉಪಯೋಗದ ಬಗ್ಗೆ ಮಾಹಿತಿ ತಿಳಿಸುವುದು, ವೈದ್ಯರು ನೀಡಿದ ಹಳೆಯ ಚೀಟಿ ತಂದರೆ ಯಾರು ಕೂಡ ಔಷದಿಗಳನ್ನು ನೀಡಬೇಡಿ ಎಂದು ತಿಳಿಸಿದರು.

ಶಿರಾ ತಾಲೂಕು ಔಷಧ ವಿತರಕರ ಸಂಘ ಅಧ್ಯಕ್ಷ ದೀಪ್ತಿ ಮೆಡಿಕಲ್ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪಂಡಿತ್ ಜವಾಹರ್, ಶಿರಾ ತಾಲೂಕು ಔಷದ ವ್ಯಾಪಾರ ಸಂಘದ ಉಪಾಧ್ಯಕ್ಷ ನಂದಿನಿ ಮೆಡಿಕಲ್ ಮಾಲೀಕರಾದ ಶ್ರೀಧರ ಗುಪ್ತ ಕಾರ್ಯದರ್ಶಿ ಅಶ್ವತ್ಥ ನಾರಾಯಣ್, ಬಿ. ಹೆಚ್. ಅನಿಲ್ ಕುಮಾರ್, ನಾರಾಯಣಪ್ಪ ಡಿ., ಖಜಾಂಚಿ ಸುಧಾಕರ್. ಜಿ. ನಿರ್ದೇಶಕರುಗಳಾದ ರವಿಶಂಕರ್, ಅಬ್ದುಲ್ ರಹಮಾನ್, ತುಳಸಿ ರಾಮ್, ಶಾಂತಕುಮಾರ್, ಭರತ್ ಸಿಂಗ್, ಅಜ್ವಲ್ ಪಾಷ, ಅಶೋಕ್ ಕುಮಾರ್. ಪವನ್ , ಮಂಜುನಾಥ್ ಗುಪ್ತ , ಶ್ರೀನಿವಾಸ್, ದಿವಾಕರ್, ಗೋಪಿನಾಥ್, ಶ್ರೀನಿವಾಸ್, ಜಿ.ಚಂದ್ರಣ್ಣ, ಗಜೇಂದ್ರ ಚಂದಾವತ್, ಸೂರಿ, ಗೋಪಾಲಕೃಷ್ಣ, ಶಿವಶರಣ,ಎಸ್. ಮಂಜುನಾಥ್, ನಾರಾಯಣ್ ಮೂರ್ತಿ, ಮಂಜುನಾಥ್ ಬಿ., ಮಹೇಂದರ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.