Wednesday, 30th October 2024

BBK 11: ಹನುಮಂತನ ಅಸಲಿ ಆಟ ಶುರು: ನಾಮಿನೇಷನ್ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ ಕ್ಯಾಪ್ಟನ್

Hanumantha Nomination

ಬಿಗ್ ಬಾಸ್ ಕನ್ನಡ ಸೀಸನ್ 11ರ ಐದನೇ ವಾರದ ಕ್ಯಾಪ್ಟನ್ ಆಗಿ ಹಳ್ಳೆ ಪ್ರತಿಭೆ ಸಿಂಗರ್ ಹನುಮಂತ (Hanumantha) ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಎಲ್ಲರ ಗೇಮ್ ಪ್ಲ್ಯಾನ್ ಅನ್ನು ಉಲ್ಟಾ ಮಾಡಿದ ಹನುಮ ಕೊನೆಯ ವರೆಗೂ ಹೋರಾಡಿ ಮನೆಯ ನಾಯಕನಾಗಿದ್ದಾರೆ. ಕ್ಯಾಪ್ಟನ್ ಆಗಿರುವ ಹನುಮಂತ ಅವರಿಗೆ ನಾಮಿನೇಷನ್ ಮಾಡುವ ಅಧಿಕಾರ ಸಿಕ್ಕಿದೆ. ಆದರೆ, ಇವರ ನಾಮಿನೇಷನ್‌ ಆಯ್ಕೆಗಳು ಕೆಲವರಿಗೆ ಕೋಪ ತರಿಸಿದೆ. ಇದಕ್ಕೆ ಸ್ವತಃ ಹನುಮಂತನೇ ತಕ್ಕ ಉತ್ತರ ಕೂಡ ಕೊಟ್ಟಿದ್ದಾರೆ.

ಹನುಮಂತು ಅವರು ತಮ್ಮ ಆಯ್ಕೆಯ ಮನೆಯ ಸದಸ್ಯರನ್ನು ನಾಮಿನೇಟ್‌ ಮಾಡಬಹುದು ಎಂದು ಬಿಗ್‌ ಬಾಸ್‌ ಆದೇಶಿಸಿದ್ದರು. ಅದರಂತೆ ಎಲ್ಲ ಸ್ಪರ್ಧಿಗಳ ಮುಂದೆಯೇ ಬಂದ ಹನುಮಂತು, ಮೊದಲಿಗೆ ಗೋಲ್ಡ್‌ ಸುರೇಶ್‌ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. “ಸುರೇಶ್‌ ಮಾವ ಹೆಸರನ್ನು ತಗೋತಿನಿ. ಅವ್ರು ಅಲ್ಲಲ್ಲೇ ಕೋಳಿ ಮಲಗಿದ ಹಾಗೆ ಮಲಗಿರ್ತಾನ” ಎಂದು ಅವರನ್ನು ನಾಮಿನೇಟ್‌ ಮಾಡುತ್ತಿದ್ದಂತೆ, “ಏನು ನಾನೊಬ್ಬನೇ ಮಲ್ಕೊಂಡಿದ್ನಾ?” ಎಂದು ಪ್ರತಿಯಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮರು ಉತ್ತರ ಕೊಟ್ಟ ಹನುಮಂತು, ‘ನಾನೂ ಮಲ್ಕೊಂಡಿದ್ದೀನಿ. ನನ್ನದು ಇದ್ದಾಗ ನೀನು ಹೇಳುವಂತಿ” ಎಂದು ಟಾಂಗ್ ಕೊಟ್ಟಿದ್ದಾರೆ.

ಇನ್ನೂ ಭವ್ಯಾ ಯಾವುದರಲ್ಲೂ ಜಾಸ್ತಿ ಭಾಗವಹಿಸಲಿಲ್ಲ ಮತ್ತು ಮಾನಸಕ್ಕ ಒಂಥರಾ ಬಾಂಬ್ ಇದ್ಹಂಗೆ. ಸೌಂಡ್ ಮಾಡೋದಕ್ಕೆ ಹೋದರೆ ಅಲ್ಲೇ ಠುಸ್‌ ಅನ್ನುತ್ತೆ ಎಂದಿದ್ದಾರೆ ಹನುಮಂತ. ಇದನ್ನ ಕೇಳಿ ನೀನು ಕೊಟ್ಟ ರೀಸನ್‌ ಚೆನ್ನಾಗಿರಲಿಲ್ಲ ಅಂತ ಭವ್ಯಾ ಗೌಡ ಕಿಡಿಕಾರಿದ್ದಾರೆ. ಅತ್ತ ಮಾನಸಾ ಅವರು ಕಣ್ಣೀರು ಹಾಕಿದ್ದು, ನಿನ್ನಂತ ಗೇಮ್​​ ಪ್ಲಾನರ್​ ನಮ್​ ತಾಯಾಣೆ ಈ ಮನೆಯಲ್ಲಿ ಯಾರು ಇಲ್ಲ ಕಣೋ ಎಂದು ಹೇಳಿದ್ದಾರೆ.

ನಾಮಿನೇಷನ್‌ ಪ್ರಕ್ರಿಯೆ ಮುಗಿದ ಬಳಿಕ ಗೋಲ್ಡ್‌ ಸುರೇಶ್‌ ಕೂಡ ಕಣ್ಣೀರು ಹಾಕಿದ್ದು, “ಅವನು ಸಾಮಾನ್ಯದವನಲ್ಲ, ಅವನು ನಾವು ಅಂದುಕೊಂಡಂಗಿಲ್ಲ” ಎಂದಿದ್ದಾರೆ. ಚೈತ್ರಾ ಕುಂದಾಪುರ ಸಹ ಹನುಮಂತು ಬಗ್ಗೆ ಕಾಮೆಂಟ್‌ ಮಾಡಿದ್ದಾರೆ. “ಗಳಿಗೆ ಸಿದ್ದ ಒಳಗೊಳಗೆ ಮೇಯ್ದ” ಎಂದು ಗೋಲ್ಡ್‌ ಸುರೇಶ್‌ ಬಳಿ ಬಂದು ಹೇಳಿಕೊಂಡಿದ್ದಾರೆ. ಸದ್ಯ ಹನುಮಂತ ನೀಡಿದ ಕಾರಣಕ್ಕೆ ಮೂವರು ಅಸಾಮಾಧಾನರಾಗಿದ್ದಾರೆ. ಆದರೆ, ಹೊರಗಿನ ಮಂದಿ ಹನುಮಂತನ ಅಸಲಿ ಆಟ ಶುರು ಆದಂತೆ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ ಮೋಕ್ಷಿತಾ ಆರ್ಭಟ: ಆಪ್ತ ಮಂಜು ಜೊತೆಗೇ ಜಗಳ