ಉತ್ತರಪ್ರದೇಶ: ಮದುವೆಮನೆಯಲ್ಲಿ ವಧು-ವರನ ಸಂಬಂಧಿಕರು ಕಾದಾಡುವಂತಹ ಸಾಕಷ್ಟು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೀಗ ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ಖರ್ಜೂರ ಹಂಚುವ ವಿಚಾರಕ್ಕೆ ಮದುವೆಮನೆಯಲ್ಲಿ ಗಲಾಟೆ ನಡೆದಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿವೆ.
ಈ ವೈರಲ್ ವಿಡಿಯೊದಲ್ಲಿ ಮದುವೆಯ ಮನೆಯಲ್ಲಿದ್ದ ಕುರ್ಚಿ, ಕೋಲುಗಳನ್ನು ಹಿಡಿದುಕೊಂಡು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಜಗಳವನ್ನು ತಡೆದಿದ್ದಾರಂತೆ.
ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ಮದುವೆಯ ಮನೆಯಲ್ಲಿ ಖರ್ಜೂರವನ್ನು ವಿತರಿಸಲಾಗಿತ್ತು. ಆ ವೇಳೆ ಕೆಲವು ಯುವಕರು ಖರ್ಜೂರದ ಪ್ಯಾಕೆಟ್‍ಗಳನ್ನು ಲೂಟಿ ಮಾಡಲು ಪ್ರಯತ್ನಿಸಿದ್ದಾರಂತೆ. ಇದಕ್ಕೆ ಹುಡುಗಿಯ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಜಗಳ ಶುರುವಾಗಿ ಎಲ್ಲರೂ ಹೊಡೆದಾಡಿಕೊಂಡಿದ್ದಾರೆ. ನಂತರ ಪೊಲೀಸರು ಬಂದು ಜಗಳವನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ವಿಡಿಯೊವನ್ನು ಹಂಚಿಕೊಂಡಿದಾಗಿನಿಂದ ಜನರಿಂದ 357 ಸಾವಿರ ವೀಕ್ಷಣೆಗಳನ್ನು ಪಡೆದಿದೆ. ಈ ವೀಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕೆಂದರೆ ಹೆಚ್ಚಿನ ನೆಟ್ಟಿಗರು ಈ ವಿಷಯವನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಅನೇಕರು ಈ ರೀತಿ ವರ್ತಿಸಿದ್ದಕ್ಕೆ ಕೋಪಗೊಂಡು ಈ ಪೋಸ್ಟ್‌ಗೆ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹೆರಿಗೆ ನೋವು ಕಾಣಿಸಿಕೊಂಡರೂ ರಜೆ ಕೊಡದ ಮೇಲಾಧಿಕಾರಿ; ಗರ್ಭದಲ್ಲೇ ಮಗು ಸಾವು
ಕಾಮೆಂಟ್ ವಿಭಾಗದಲ್ಲಿ, ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. “ಈ ಜನರು ಖರ್ಜೂರಕ್ಕಾಗಿ ಹೋರಾಡುತ್ತಿಲ್ಲ, ಯಾವುದೋ ಅಮೂಲ್ಯವಾದ ನಿಧಿಗಾಗಿ ಹೋರಾಡುತ್ತಿದ್ದಾರೆಂದು ತೋರುತ್ತದೆ!” ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. “@sambhalpolice @Uppolice ದಯವಿಟ್ಟು ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಿ” ಎಂದು ಮತ್ತೊಬ್ಬರು ತಿಳಿಸಿದ್ದಾರೆ.