Sunday, 24th November 2024

Viral Video: ದೀಪಾವಳಿ ವಿಶೇಷ ರೆಸಿಪಿ ಜಿಲೇಬಿ ಕಾಕ್‌ಟೈಲ್!

Viral Video

ಜಿಲೇಬಿಯ ಕಾಕ್ ಟೈಲ್ ರುಚಿ ನೋಡಿದ್ದೀರಾ? ಇಲ್ಲವಾದರೆ ಈ ಬಾರಿ ದೀಪಾವಳಿ ವಿಶೇಷವಾಗಿ ಇದನ್ನು ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ (Social media) ಇನ್‌ಫ್ಲುಯೆನ್ಸರ್ ಒಬ್ಬರು ದೀಪಾವಳಿ (deepavali) ವಿಶೇಷ ಕಾಕ್‌ಟೈಲ್ (Jalebi cocktail) ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಶಿಪ್ರಾ ಹಟ್ಟಂಗಡಿ ಅವರು ಸ್ವಲ್ಪ ರಮ್ ಅಥವಾ ಸೋಡಾ ಮತ್ತು ಜಿಲೇಬಿ ಬಳಸಿ ಈ ಪಾನೀಯವನ್ನು ತಯಾರಿಸಿದ್ದಾರೆ. ಪಾನೀಯ ತಯಾರಿಸಲು ಬೇಕಾದ ಸಾಮಗ್ರಿಗಳೊಂದಿಗೆ ವಿಡಿಯೋವನ್ನು ಅಪ್ಲೋಡ್ ಮಾಡಿರುವ ಇದು ಸಾಮಾನ್ಯ ಪಾಕವಿಧಾನಕ್ಕಿಂತ ಭಿನ್ನವಾಗಿದೆ. ಹಬ್ಬದ ಋತುವನ್ನು ಆನಂದಿಸಲು ಇದು ವಿಶೇಷ ಪಾನೀಯ ಎಂದು ಹೇಳಿಕೊಂಡಿದ್ದಾರೆ. ಇದನ್ನು ಅವರು “ಜಲೇಬಿ ಕೋಲಾಡಾ” ಎಂದು ಕರೆದಿದ್ದಾರೆ.

ಇತ್ತೀಚೆಗೆ ಶಿಪ್ರಾ ಅವರು ಭಾರತೀಯ ಮಿಠಾಯಿ ಸೋನ್ ಪಾಪ್ಡಿ ಅನ್ನು ಬಳಸಿಕೊಂಡು ಕಾಕ್ ಟೈಲ್ ಮಾಡಿದ್ದರು. ಬಳಿಕ ಮೋತಿಚೋರ್ ಲಡ್ಡು ಅಥವಾ ಕ್ಯಾರೆಟ್ ಹಲ್ವದಿಂದ ಕಾಕ್ ಟೈಲ್ ತಯಾರಿಸುವುದನ್ನು ಹೇಳಿಕೊಟ್ಟಿದ್ದರು. ಇದೀಗ ಜಲೇಬಿಯೊಂದಿಗೆ ಹೊಸ ದೀಪಾವಳಿ ವಿಶೇಷ ಪಾನೀಯವನ್ನು ತಯಾರಿಸುವುದು ಹೇಗೆ ಎಂದು ತೋರಿಸಿದ್ದಾರೆ. ಇವರು ಸ್ವಲ್ಪ ರಮ್ ಅಥವಾ ಸೋಡಾ ಬಳಸಿ ಜಿಲೇಬಿಯನ್ನು ಸೇರಿಸಿ ಈ ಪೇಯವನ್ನು ತಯಾರಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಜಿಲೇಬಿ ಸ್ವೀಟ್ ಬಾಕ್ಸ್ ತೆರೆಯುವ ಮೂಲಕ ವಿಡಿಯೋವನ್ನು ಪ್ರಾರಂಭಿಸಿರುವ ಅವರು ಇದರಲ್ಲಿ ಸಂಪೂರ್ಣ ಕಾಕ್ ಟೈಲ್ ಅನ್ನು ತಯಾರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಹಬ್ಬದಲ್ಲಿ ಜಿಲೇಬಿಯನ್ನು ಕಾಕ್‌ಟೈಲ್ ಪಂಚ್‌ನೊಂದಿಗೆ ಆನಂದಿಸುತ್ತಿದ್ದೇನೆ. ಇದು “ಜಿಲೇಬಿ ಕೋಲಾಡಾ” ಎಂದು ಹೇಳಿ ಸಂಪೂರ್ಣ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಕ್‌ಟೈಲ್ ರೆಸಿಪಿ ವಿಡಿಯೋದಲ್ಲಿ ಶಿಪ್ರಾ ಅವರು ಕೆಲವು ಜಿಲೇಬಿ ತುಂಡುಗಳನ್ನು ಬ್ಲೆಂಡರ್‌ಗೆ ಸ್ವಲ್ಪ ನೀರನ್ನು ಸೇರಿಸಿ ಪಾನೀಯವನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಬಳಿಕ 60 ಮಿಲಿ ಬಕಾರ್ಡಿ ಶುಂಠಿ ರಮ್ ಅನ್ನು ಸೇರಿಸುತ್ತಾರೆ. ಬಳಿಕ ಸ್ವಲ್ಪ ತೆಂಗಿನ ಹಾಲು, ನಿಂಬೆ ರಸ, ಕೇಸರಿಯನ್ನು ಬೆರೆಸಿ ಜಲೇಬಿಯನ್ನು ಕಾಕ್ ಟೈಲ್ ಅನ್ನು ತಯಾರಿಸಿದ್ದಾರೆ.

Viral Video: ಪೆಟ್ರೋಲ್‌ ಪಂಪ್‌ನಲ್ಲಿ ಪ್ರಿಯತಮೆಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಿಯಕರ; ವಿಡಿಯೊ ಇದೆ

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಈ ತಿಂಗಳ ಆರಂಭದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇನ್ ಸ್ಟಾಗ್ರಾಮ್ ನಲ್ಲಿ ಇದನ್ನು 28,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.