Wednesday, 30th October 2024

Viral Video: ಪಟಾಕಿ ಮಾರುವವಳ ಲುಕ್ ಸಂಪೂರ್ಣ ಬದಲಾಯಿಸಿದ ಮೇಕಪ್ ಆರ್ಟಿಸ್ಟ್!

Viral Video

ಪಟಾಕಿ ಮಾರುವವಳನ್ನು (firecracker seller) ಫ್ಯಾಶನ್ ಕಲಾವಿದೆಯನ್ನಾಗಿ (Fashion artist) ಮೇಕಪ್ ಆರ್ಟಿಸ್ಟ್ (Makeup Artist) ಒಬ್ಬರು ಬದಲಾಯಿಸಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಈ ವಿಡಿಯೋವನ್ನು ಐದು ದಶಲಕ್ಷಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ದೀಪಾವಳಿಗೆ ಮುಂಚಿತವಾಗಿ ಎಲ್ಲರೂ ಪಟಾಕಿ ಅಂಗಡಿಗೆ ಪಟಾಕಿ ಖರೀದಿ ಮಾಡಲು ಮುಗಿ ಬೀಳುತ್ತಾರೆ. ಆದರೆ ಇಲ್ಲಿ ಮೇಕಪ್ ಆರ್ಟಿಸ್ಟ್ ಒಬ್ಬರು ಪಟಾಕಿ ಮಾರುವವಳಿಗೆ ಮೇಕ್ ಓವರ್ ನೀಡಿದ್ದಾರೆ.

ಮೇಕಪ್ ಕಲಾವಿದೆ ಮಹಿಮಾ ಬಜಾಜ್ (Mahima Bajaj) ಅವರು ದೀಪಾವಳಿ ಹಬ್ಬದ ಪ್ರಯುಕ್ತ ರಸ್ತೆ ಬದಿ ಪಟಾಕಿ ಮಾರುವ ಮಹಿಳೆಯೊಬ್ಬರಿಗೆ ತ್ವಚೆ ಮತ್ತು ಕೂದಲ ಆರೈಕೆ ಮಾಡಿದ್ದು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಮಾ ಬಜಾಜ್ ಅವರು ಇತ್ತೀಚೆಗೆ ಮಣ್ಣಿನ ಮಡಕೆ ಮಾರಾಟಗಾರರೊಬ್ಬರನ್ನು ಫ್ಯಾಷನ್ ಮಾಡೆಲ್ ಆಗಿ ಪರಿವರ್ತಿಸುವ ವಿಡಿಯೋವನ್ನು ಮಾಡಿ ಹಂಚಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಹೃದಯ ಗೆದ್ದಿತ್ತು.

ಇದೀಗ ಬಜಾಜ್ ಅವರು ಮತ್ತೊಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು “ಫಾಟಕೆ ವಾಲಿ ಟ್ರಾನ್ಸ್‌ಫಾರ್ಮೇಷನ್” ಎಂಬ ಶೀರ್ಷಿಕೆ ನೀಡಿದ್ದಾರೆ.

ವಿಡಿಯೋದಲ್ಲಿ ಬಜಾಜ್ ಅವರು ಪಟಾಕಿ ಮಾರುವ ಮಹಿಳೆಗೆ ಕಿತ್ತಳೆ, ಜೇನುತುಪ್ಪ ಮತ್ತು ಹೈಡ್ರೇಟಿಂಗ್ ಫೇಶಿಯಲ್ ಕ್ಲೆನ್ಸರ್ ಬಳಸಿ ಮಾಡಿದ ಪೇಸ್ಟ್ ಅನ್ನು ತಯಾರಿಸಿ ಮುಖಕ್ಕೆ ಮೇಕ್ ಓವರ್ ಮಾಡಿದ್ದಾರೆ. ಬಳಿಕ ಮಹಿಳೆಯ ಸುಕ್ಕುಗಟ್ಟಿದ ಕೂದಲನ್ನು ನೆಲ್ಲಿಕಾಯಿ ಪೌಡರ್, ಕಿತ್ತಳೆ ರಸ, ಕಂಡಿಷನರ್ ಮತ್ತು ಕೂದಲಿನ ಸೀರಮ್‌ನಂತಹ ಪದಾರ್ಥಗಳಿಂದ ತಯಾರಿಸಿದ ದ್ರಾವಣವನ್ನು ಹಾಕಿದ್ದಾರೆ.

ಬಳಿಕ ಮೇಕಪ್ ನ ಸ್ಪರ್ಶ ನೀಡಿ ಪಟಾಕಿ ಮಾರುವವಳನ್ನು ಸಂಪೂರ್ಣವಾಗಿ ಮಾಡೆಲ್ ಆಗಿ ಬದಲಾಯಿಸಿದ್ದಾರೆ. ಮೇಕಪ್ ಕಲಾವಿದ ಮಹಿಳೆಗೆ ಕಿತ್ತಳೆ ಸಾಂಪ್ರದಾಯಿಕ ಉಡುಗೆ ತೊಡಿಸಿ ತೆಗೆದ ಫೋಟೋವನ್ನು ಕೂಡ ಅಪ್ಲೋಡ್ ಮಾಡಿದ್ದಾರೆ.

Viral Video: ಪೆಟ್ರೋಲ್‌ ಪಂಪ್‌ನಲ್ಲಿ ಪ್ರಿಯತಮೆಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಿಯಕರ; ವಿಡಿಯೊ ಇದೆ

ಅಕ್ಟೋಬರ್ 27 ರಂದು ಅಪ್‌ಲೋಡ್ ಮಾಡಿರುವ ಈ ವಿಡಿಯೋ 5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಭಾರಿ ವೈರಲ್ ಆಗುತ್ತಿದೆ. ಸಾಕಷ್ಟು ಮಂದಿ ಬಜಾಜ್ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.