-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದ ಸೀರೆಯಲ್ಲಿ (Deepavali Saree Fashion 2024) ನೀವೂ ಕೂಡ ಸೆಲೆಬ್ರಿಟಿಯಂತೆ ಕಾಣಿಸಬಹುದು. ಸೂಕ್ತವಾದ ಸೀರೆಯ ಆಯ್ಕೆ ಹಾಗೂ ಸ್ಟೈಲಿಂಗ್ ಸಾಮಾನ್ಯ ಮಹಿಳೆಯರನ್ನು ಸೆಲೆಬ್ರಿಟಿಯಂತೆ ಬಿಂಬಿಸಬಹುದು. ಹಾಗಾಗಿ ಹಬ್ಬದ ಸೀರೆಗಳಲ್ಲಿ ಆಕರ್ಷಕವಾಗಿ ಕಾಣಿಸಲು ಬಯಸುವವರು ಆಯ್ಕೆ ಹಾಗೂ ಸ್ಟೈಲಿಂಗ್ನಲ್ಲಿ ಜಾಣತನ ತೋರಬೇಕು ಎನ್ನುತ್ತಾರೆ ಮಾಡೆಲ್ & ನಟಿ ದೀಪ್ತಿ ಮೋಹನ್. ಅವರು ನೀಡಿರುವ ಸಿಂಪಲ್ ಸಲಹೆಗಳು ಇಲ್ಲಿವೆ.
ಗ್ರ್ಯಾಂಡ್ ಡಿಸೈನರ್ ಅಥವಾ ರೇಷ್ಮೆ ಸೀರೆ ಆಯ್ಕೆ ಮಾಡಿ
ಹಬ್ಬಕ್ಕೆ ನಿಮ್ಮನ್ನು ಹೈಲೈಟ್ ಮಾಡುವಂತಹ ಗ್ರ್ಯಾಂಡ್ ಡಿಸೈನರ್ ಸೀರೆ ಆಯ್ಕೆ ಮಾಡಿ, ಉಟ್ಟುಕೊಳ್ಳಿ. ಸಾಟಿನ್, ಟಿಶ್ಯೂ, ಅರ್ಗಾನ್ಜಾ, ಸಿಕ್ವೀನ್ಸ್, ಶಿಮ್ಮರ್, ಕ್ರಶ್, ಎಂಬಾಲಿಶ್ಡ್, ಎಂಬ್ರಾಯ್ಡರಿ, ನೆಟ್ಟೆಡ್, ಜಾರ್ಜೆಟ್, ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್ನ ಡಿಸೈನರ್ ಗ್ರ್ಯಾಂಡ್ ಸೀರೆಗಳು ಹಾಗೂ ರೇಷ್ಮೆ ಸೀರೆಗಳು ಟ್ರೆಂಡಿಯಾಗಿವೆ. ಆದರೆ, ನೀವು ಸೆಲೆಬ್ರಿಟಿಗಳು ಉಡುವಂತಹ ಟ್ರೆಂಡಿಯಾಗಿರುವ ಫ್ಯಾಬ್ರಿಕ್ನ ಸೀರೆಯ ಆಯ್ಕೆ ಮಾಡಿದಲ್ಲಿ, ನೀವು ಕೂಡ ಸೆಲೆಬ್ರಿಟಿಯಂತೆ ಕಾಣಬಹುದು.
ಬಿಎಂಐ ಗೆ ತಕ್ಕಂತೆ ಫ್ಯಾಬ್ರಿಕ್ ಆಯ್ಕೆ
ನಿಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ತಕ್ಕಂತೆ ಸೀರೆ ಫ್ಯಾಬ್ರಿಕ್ ಆಯ್ಕೆ ಮಾಡಿ. ನೀವು ಪ್ಲಂಪಿಯಾಗಿದ್ದಲ್ಲಿ ಸಾಫ್ಟ್ ಫ್ಯಾಬ್ರಿಕ್ನಲ್ಲಿ ಲಭ್ಯವಿರುವಂತಹ ಡಿಸೈನರ್ ಸೀರೆಗಳನ್ನು ಆಯ್ಕೆ ಮಾಡಿ. ಆಗ ಬಳುಕುವ ಬಳ್ಳಿಯಂತೆ ಕಾಣಿಸಬಹುದು. ತೆಳ್ಳಗಿದ್ದಲ್ಲಿ ಯಾವುದಾದರೂ ಸರಿಯೇ ಉಟ್ಟುಕೊಳ್ಳಬಹುದು. ಇನ್ನು, ಹವರ್ ಗ್ಲಾಸ್ ಬಾಡಿ ಶೇಪ್ನವರು ಆದಷ್ಟೂ ಫ್ಲೋ ಆಗುವಂತಹ ಸೀರೆ ಉಡಬೇಕು.
ನಿಮ್ಮ ಸ್ಕಿನ್ ಟೋನ್ಗೆ ಮ್ಯಾಚ್ ಆಗುವ ಬಣ್ಣದ ಆಯ್ಕೆ
ನಿಮ್ಮ ಸ್ಕಿನ್ ಟೋನ್ಗೆ ಹೊಂದುವಂತಹ ಬಣ್ಣದ ಸೀರೆಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ., ಇತ್ತೀಚೆಗೆ ಟ್ರೆಂಡ್ನಲ್ಲಿರುವ ಡಿಸೈನರ್ ರೇಷ್ಮೆ ಸೀರೆಗಳು, ತಿಳಿ ಬಣ್ಣದ ಸೀರೆಗಳು. ಡಾರ್ಕ್ ಸ್ಕಿನ್ ಟೋನ್ನವರು ಒಮ್ಮೆ, ಮೈ ಮೇಲೆ ಸೆರಗು ಹಾಕಿ, ಮುಖಕ್ಕೆ ಈ ಬಣ್ಣ ಹೊಂದುವುದೇ ಎಂಬುದನ್ನು ಚೆಕ್ ಮಾಡಿ ಆಯ್ಕೆ ಮಾಡಿ, ಉಟ್ಟುಕೊಳ್ಳಿ.
ಡಿಸೈನರ್ ಬ್ಲೌಸ್ ಕಮಾಲ್
ಇಡೀ ಸೀರೆಯ ಲುಕ್ಕನ್ನು ಕೆಲವೊಮ್ಮೆ ಬ್ಲೌಸ್ಗಳು ನಿರ್ಧರಿಸುತ್ತವೆ. ಹಾಗಾಗಿ ಡಿಸೈನರ್ ಬ್ಲೌಸ್ ಧರಿಸಿ. ಇಂಡೋ-ವೆಸ್ಟರ್ನ್ ಸೀರೆಗಾದಲ್ಲಿ ಗ್ಲಾಮರಸ್ ಲುಕ್ ನೀಡುವ ಬ್ಲೌಸ್ಗಳನ್ನು ಧರಿಸಬಹುದು.
ಈ ಸುದ್ದಿಯನ್ನೂ ಓದಿ | Deepavali Sky Lanters: ದೀಪಾವಳಿ ಸಂಭ್ರಮ ಹೆಚ್ಚಿಸುವ ಆಕಾಶ ದೀಪಗಳು ಹೀಗಿರಲಿ…
ಮೇಕಪ್ & ಆಭರಣಗಳು
ಉಡುವ ಸೀರೆಯನ್ನು ಹೈಲೈಟ್ ಮಾಡುವಂತಹ ಗ್ರ್ಯಾಂಡ್ ಮೇಕಪ್ಗೆ ಸೈ ಎನ್ನಿ. ಹೇರ್ಸ್ಟೈಲ್ ಸೀರೆಯ ಲುಕ್ಗೆ ಸಾಥ್ ನೀಡಲಿ. ಇನ್ನು ಜ್ಯುವೆಲರಿಗಳು ಸೀರೆಯ ಫ್ಯಾಬ್ರಿಕ್ಗೆ ಮ್ಯಾಚ್ ಆಗಬೇಕು. ಜರ್ಕೋನ್ ಹಾಗೂ ಆಂಟಿಕ್ ಜ್ಯುವೆಲರಿಗಳನ್ನು ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)