Saturday, 23rd November 2024

Ekta Diwas celebration: ದೇಶದೆಲ್ಲೆಡೆ ಏಕತಾ ದಿವಸ ಆಚರಣೆ; ಉಕ್ಕಿನ ಮನುಷ್ಯನಿಗೆ ಪ್ರಧಾನಿ ಮೋದಿಯಿಂದ ಗೌರವಾರ್ಪಣೆ

Ekta Diwas celebration

ಅಹಮದಾಬಾದ್‌: ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel ) ಅವರ 149ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕತಾ ಪ್ರತಿಮೆಗೆ (Statue of Unity ) ಪ್ರಧಾನಿ ನರೇಂದ್ರ ಮೋದಿ (Narendra Modi ) ಗುರುವಾರ ಪುಷ್ಪ ನಮನ ಸಲ್ಲಿಸಿದರು. ಅಕ್ಟೋಬರ್‌ 31 ರಂದು ಸರ್ದಾರ್‌ ವಲ್ಲಭಭಾಯಿ ಪಟೇಲರ ಜನ್ಮ ದಿನವನ್ನು ಏಕತಾ ದಿವಸ್‌ (Ekta Diwas celebration) ಎಂದು ಆಚರಿಸಲಾಗುತ್ತದೆ.

ಗುಜರಾತ್‌ನ ( Gujarat) ಏಕತಾ ಪ್ರತಿಮೆಯ ಬಳಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಭಾಗವಹಿಸಿದ್ದಾರೆ. ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಮೋದಿ “ಪಟೇಲ್‌ ಒಬ್ಬ ಧೀಮಂತ ನಾಯಕರಾಗಿದ್ದರು. ಅವರ ಕಾರ್ಯಗಳು ಮುಂದಿನ ಪೀಳಿಗೆಗೆ ಮಾದರಿಯಾಗಿವೆ. ಭಾರತದ ಏಕತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಅವರ ಪಾತ್ರ ದೊಡ್ಡದು. ಅವರು ನಡೆದ ದಾರಿ ನಮಗೆಲ್ಲ ಸ್ಪೂರ್ತಿ” ಎಂದು ಹೇಳಿದರು.

ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಅವರು ಈ ಬಾರಿಯ ದೀಪಾವಳಿಯನ್ನು ಅಲ್ಲಿಯೇ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಕ್ಸ್‌ನಲ್ಲಿ ದೀಪಾವಳಿ ಶುಭಾಷಯವನ್ನುತಿಳಿಸಿರುವ ಪ್ರಧಾನಿ ” ದೇಶವಾಸಿಗಳಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು. ಈ ಬೆಳಕಿನ ಹಬ್ಬವು ನಿಮಗೆ ಸುಖ, ಸಮೃದ್ಧಿ ಹಾಗೂ ಆರೋಗ್ಯವನ್ನು ನೀಡಲಿ ದೇವಿ ಹಾಗೂ ಗಣೇಶನ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : HD Kumaraswamy: ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಮೋದಿ ಒತ್ತು; ಕುಮಾರಸ್ವಾಮಿ ಶ್ಲಾಘನೆ

ಪ್ರತಿ ವರ್ಷ ದೀಪಾಳಿಯನ್ನು ಯೋಧರೊಂದಿಗೆ ಆಚರಿಸುವ ಮೋದಿ ಈ ಬಾರಿಯೂ ಸೈನಿಕರ ಜೊತೆ ಆಚರಿಸುತ್ತಾರೆ ಎಂದು ಹೇಳಲಾಗಿದೆ. ಗುಜರಾತ್‌ನ ಕಛ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರ ಜೊತೆ ದೀಪಾವಳಿ ಆಚರಿಸುವ ಸಾಧ್ಯತೆ ಇದೆ. 2014 ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಕಛ್‌ನಲ್ಲಿ ಸೈನಿಕರ ಆಚರಿಸುತ್ತಿರುವ ಮೊದಲ ದೀಪಾವಳಿಯಾಗಿದೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಯೋಧರೊಂದಿಗೆ ಹಬ್ಬ ಆಚರಿಸಿದ್ದರು.