Thursday, 31st October 2024

Maharashtra Assembly Election: ಮಹಿಳೆಯರಿಗೆ ಜ್ಯೂಸರ್‌ ಮಿಕ್ಸರ್‌ ಫ್ರೀ..ಫ್ರೀ.. ಆಮಿಷವೊಡ್ಡಿದ ಮಹಾರಾಷ್ಟ್ರ ಶಾಸಕನ ವಿರುದ್ಧ ECಗೆ ದೂರು

Maharashtra Assembly Election

ಮುಂಬೈ: ಮಹಾರಾಷ್ಟ್ರದಲ್ಲಿ ದಿನೇ ದಿನೆ ವಿಧಾನಸಭಾ ಚುನಾವಣೆಯ (Maharashtra Assembly Election) ಕಾವು ಜೋರಾಗಿದೆ. ಎಲ್ಲಾ ಪಕ್ಷದ ನಾಯಕರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿ ಮತ ಸೆಳೆಯುವ ಉದ್ದೇಶದಿಂದ ಮತದಾರರಿಗೆ ಆಮಿಷವೊಡ್ಡಿ, ನೀತಿ ಸಂಹಿತೆ ಉಲ್ಲಂಘನೆ (Code of conduct) ಮಾಡಿದ್ದಾರೆ ಎಂದು ಚಾಂಡವಾಲಿ ಶಾಸಕ ದಿಲೀಪ್‌ ಲಾಂಡೆ ( Dilip Lande) ವಿರುದ್ಧ ಚುನಾವಣಾ ಆಯೋಗಕ್ಕೆ (ಏlection commission of India) ದೂರು ಸಲ್ಲಿಸಲಾಗಿದೆ. ಈ ಹಿಂದೆ 12.50 ಕೋಟಿ ರೂ. ಪ್ರೆಶರ್ ಕುಕ್ಕರ್ ಹಗರಣದ ಆರೋಪ ಹೊತ್ತಿದ್ದ ಲಾಂಡೆ, ಇದೀಗ ತಮ್ಮ ಕ್ಷೇತ್ರ ಭೈದೂಜ್‌ನಲ್ಲಿ ಮಹಿಳೆಯರಿಗೆ ಜ್ಯೂಸರ್ ಮಿಕ್ಸರ್‌ಗಳನ್ನು ಕೊಡುವುದಾಗಿ ಸಾರ್ವಜನಿಕ ಸಭೆಯಲ್ಲಿ ಘೋಷಿಸುವ ಮೂಲಕ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಕ್ಟೋಬರ್‌ 5 ರಂದು ಭೈದೂಜ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ನಾವು ಕ್ಷೇತ್ರದ ಮಹಿಳೆಯರಿಗೆ ಜ್ಯೂಸರ್ ಮಿಕ್ಸರ್‌ಗಳನ್ನು ವಿತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಘಟನೆ ನಂತರ ವಕೀಲ ನಿಖಿಲ್‌ ಕಂಬಳೆ ಎನ್ನುವವರು  ಚುನಾವಣಾ ಆಯೋಗದ ಆಯುಕ್ತರು, ರಾಜ್ಯ ಚುನಾವಣಾ ಆಯುಕ್ತರು, ಸಾಮಾನ್ಯ ವೀಕ್ಷಕರು, ಹಾಗೂ ಪೊಲೀಸ್ ವೀಕ್ಷಕರು ಮತ್ತು ಚುನಾವಣಾಧಿಕಾರಿಗಳಿಗೆ ಶಾಸಕ ಲಾಂಡೆ ಅವರು ಚಾಂಡಿವಲಿ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ . ಲಾಂಡೆ ಕಳೆದ ವಾರ ತಮ್ಮ ಜನ್ಮದಿನದಂದು ಈ ಲೈವ್ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅದನ್ನು ಆಧರಿಸಿ ಇದೀಗ ದೂರನ್ನು ನೀಡಲಾಗಿದೆ.

ಇದನ್ನೂ ಓದಿ : Arvind Kejriwal : ಮಹಾರಾಷ್ಟ್ರದಲ್ಲಿ ಆಪ್‌ ಸ್ಪರ್ಧೆ ಇಲ್ಲ; ಮಿತ್ರ ಪಕ್ಷಕ್ಕಾಗಿ ಪ್ರಚಾರ ಮಾಡಲಿದ್ದಾರೆ ಕೇಜ್ರಿವಾಲ್‌

ಮಹಿಳಾ ಮತದಾರರಿಗೆ ಆಮಿಷವೊಡ್ಡಲು ಗೃಹೋಪಯೋಗಿ ಉಪಕರಣಗಳನ್ನು ವಿತರಿಸುವ ಭರವಸೆ ನೀಡುವ ಮೂಲಕ ಮತದಾರರ ಮೇಲೆ ಅನಗತ್ಯವಾಗಿ ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದು ಚುನಾವಣಾ ನೀತಿಯ ವಿರುದ್ಧವಾಗಿದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಲಾಂಡೆ ಈ ಹಿಂದೆ Rs12.50 ಕೋಟಿ ಪ್ರೆಶರ್ ಕುಕ್ಕರ್ ಹಗರಣದ ಆರೋಪವನ್ನು ಎದುರಿಸಿದ್ದರು. ಈಗ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.