ಜೋಧ್‌ಪುರ: ಎರಡು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 50 ವರ್ಷದ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ರಾಜಸ್ಥಾನದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಪತ್ತೆಯಾಗಿವೆ. ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅನಿತಾ ಚೌಧರಿ ಕೊಲೆಯಾದ ದುರ್ದೈವಿ(Murder Case). ಆಕೆಯನ್ನು ಆರೋಪಿ ಗುಲಾಮುದ್ದೀನ್ ಅಲಿಯಾಸ್ ಗುಲ್ ಮೊಹಮ್ಮದ್ ಎಂಬಾತ ಬರ್ಬರವಾಗಿ ಕೊಲೆಗೈದು ಮೃತದೇಹವನ್ನು ಕತ್ತರಿಸಿ ತನ್ನ ಮನೆ ಬಳಿ ಹೂತು ಹಾಕಿದ್ದಾನೆ(Viral News).
ಏನಿದು ಘಟನೆ?
ಅಕ್ಟೋಬರ್ 28 ರಂದು ಸಂತ್ರಸ್ತೆ ಅನಿತಾ ಚೌಧರಿ ಮಧ್ಯಾಹ್ನ ತನ್ನ ಬ್ಯೂಟಿ ಪಾರ್ಲರ್ ಅನ್ನು ಮುಚ್ಚಿ ರಾತ್ರಿಯಾದರೂ ಹಿಂತಿರುಗಿರಲಿಲ್ಲ. ಮರುದಿನ, ಅವರ ಪತಿ ಮನಮೋಹನ್ ಚೌಧರಿ ಅವರು ಜೋಧ್‌ಪುರದ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದರು. ಆರೋಪಿ ಗುಲಾಮುದ್ದೀನ್ ಅಲಿಯಾಸ್ ಗುಲ್ ಮೊಹಮ್ಮದ್ ಎಂಬಾತ ಅನಿತಾ ಅವರ ಬ್ಯೂಟಿ ಪಾರ್ಲರ್ ಇರುವ ಕಟ್ಟಡದಲ್ಲೇ ಅಂಗಡಿ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇಬ್ಬರಿಗೂ ಪರಿಚಯವಿದ್ದು, ಪರಸ್ಪರ ಸಲಿಗೆ ಹೊಂದಿದ್ದರು ಎನ್ನಲಾಗಿದೆ. ಸಂತ್ರಸ್ತೆಯ ಫೋನ್‌ನಲ್ಲಿನ ಕರೆ ವಿವರಗಳ ಪ್ರಕಾರ ಗುಲ್ ಮೊಹಮ್ಮದ್ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ.
ಅನಿತಾ ನಾಪತ್ತೆಯಾಗುವ ಮೊದಲು ಆಟೋದಲ್ಲಿ ಸ್ಥಳದಿಂದ ತೆರಳಿದ್ದರು ಎಂದು ಸರ್ದಾರ್‌ಪುರ ಪೊಲೀಸ್ ಠಾಣಾಧಿಕಾರಿ ದಿಲೀಪ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ಅನಿತಾಳನ್ನು ಕರೆದೊಯ್ದ ಆಟೋ ಚಾಲಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದರು ಮತ್ತು ಆರೋಪಿಯು ತಂಗಿರುವ ಗಂಗನಾಳ ಬಳಿಗೆ ಆಕೆಯನ್ನು ಕರೆದೊಯ್ದಿದ್ದಾನೆ ಎಂದು ಹೇಳಿದರು.
ಆರೋಪಿಗೆ ಗುಲ್ ಮೊಹಮ್ಮದ್ ಮನೆಗೆ ದಾಳಿ ನಡೆಸಿದ ಪೊಲೀಸರಿ ಆತನ ಕುಕೃತ್ಯ ಬಯಲಾಗಿದೆ. ಮನೆಯಲ್ಲಿದ್ದ ಆತನ ಪತ್ನಿ ಎಲ್ಲಾ ವಿಚಾರವನ್ನು ಪೊಲೀಸರಿಗೆ ಬಾಯ್ಬಿಟ್ಟಿದ್ದಾಳೆ. ತಾನು ಸಹೋದರಿ ಮನೆಗೆ ತೆರಳಿದ್ದೆ. ಅಲ್ಲಿಂದ ವಾಪಾಸಾದಾಗ ಪತಿ ತಾನು ಅನಿತಾಳನ್ನು ಕೊಲೆಗೈದು ಮನೆಯ ಹಿತ್ತಲಲ್ಲಿ ಹೂತಿರುವ ಬಗ್ಗೆ ಹೇಳಿದ್ದ ಎಂಬುದನ್ನು ಆರೋಪಿ ಪತ್ನಿ ಪೊಲೀಸರಿಗೆ ಮಾಹತಿ ನೀಡಿದ್ದಾರೆ.
ಪೊಲೀಸರು ಬುಲ್ಡೋಜರ್ ಸಹಾಯದಿಂದ 12 ಅಡಿ ಹೊಂಡವನ್ನು ತೋಡಿದಾಗ ಮಹಿಳೆಯ ದೇಹದ ಮುಂಡ, ಕೈ ಮತ್ತು ಕಾಲುಗಳು ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ರತ್ಯೇಕವಾಗಿ ಸುತ್ತಿರುವುದು ಕಂಡುಬಂದಿದೆ. ಇನ್ನು ತನ್ನ ತಾಯಿಯನ್ನು ವಂಚಿಸಿ ಹತ್ಯೆಗೈದಿದ್ದಾರೆ ಎಂದು ಅನಿತಾ ಅವರ ಪುತ್ರ ಆರೋಪಿಸಿದ್ದಾರೆ. ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್‌ಗೆ ಕಳುಹಿಸಲಾಗಿದೆ. ಆರೋಪಿಯ ಪತ್ನಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಎಸ್ಕೇಪ್ ಆಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ: Ekta Diwas celebration: ದೇಶದೆಲ್ಲೆಡೆ ಏಕತಾ ದಿವಸ ಆಚರಣೆ; ಉಕ್ಕಿನ ಮನುಷ್ಯನಿಗೆ ಪ್ರಧಾನಿ ಮೋದಿಯಿಂದ ಗೌರವಾರ್ಪಣೆ