Sunday, 24th November 2024

Bhupinder Singh of Patiala: ಪಟಿಯಾಲದ ಈ ಮಹಾರಾಜರಿಗೆ 350 ಪತ್ನಿಯರು, 88 ಮಕ್ಕಳಂತೆ!

Bhupinder Singh of Patiala

ಪಟಿಯಾಲ ಮಹಾರಾಜ ಭೂಪಿಂದರ್ ಸಿಂಗ್(Bhupinder Singh of Patiala) ದುಂದುವೆಚ್ಚ ಮತ್ತು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದರು. ಅವರು ಹತ್ತು ಬಾರಿ ವಿವಾಹವಾಗಿದ್ದು, 350 ಉಪಪತ್ನಿಯರನ್ನು ಹೊಂದಿದ್ದರಂತೆ. ಹಾಗೆಯೇ 88 ಮಕ್ಕಳಿಗೆ ತಂದೆಯಾಗಿದ್ದರಂತೆ!

Bhupinder Singh of Patiala

ಪಟಿಯಾಲ ರಾಜ್ಯದ ಮಹಾರಾಜ ಭೂಪಿಂದರ್ ಸಿಂಗ್ ಅತ್ಯಂತ ಶ್ರೀಮಂತ ರಾಜರಾಗಿದ್ದರು. 1891ರಲ್ಲಿ ಜಾಟ್ ಸಿಖ್ ಫುಲ್ಕಿಯನ್ ರಾಜವಂಶದಲ್ಲಿ ಜನಿಸಿದ ಭೂಪಿಂದರ್ ಸಿಂಗ್ ಒಂಬತ್ತನೇ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿದ್ದಾರು. ಇನ್ನು ಆಹಾರದ ಬಗ್ಗೆ ಇವರಿಗೆ ವಿಪರೀತ ವ್ಯಾಮೋಹವಿದ್ದ ಇವರು ಬಗೆ ಬಗೆಯ ಆಹಾರಗಳನ್ನು ಸೇವಿಸುತ್ತಿದ್ದರಂತೆ. ಅದೂ ಅಲ್ಲದೇ ಎಷ್ಟೇ ತಿಂದರೂ ಅವರ ಹಸಿವು ನೀಗುತ್ತಿರಲಿಲ್ಲವಂತೆ.  ಹಾಗಾಗಿ ಮಹಾರಾಜರಿಗೆ ಆಹಾರದ ಮೇಲಿದ್ದ ಬಯಕೆಯ ಬಗ್ಗೆ ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ತಮ್ಮ ಪುಸ್ತಕ ‘ಫ್ರೀಡಂ ಅಟ್ ಮಿಡ್‌ನೈಟ್‌’ನಲ್ಲಿ ಬರೆದಿದ್ದಾರೆ.

Bhupinder Singh of Patiala

ಇನ್ನು ಮಹಾರಾಜ ಭೂಪಿಂದರ್ ಸಿಂಗ್ ಟೀ ಕುಡಿಯುವಾಗ ಸ್ನ್ಯಾಕ್ಸ್‌ಗೆ  ಎರಡು ಕೋಳಿಗಳು ಸೇರಿದಂತೆ  20 ಪೌಂಡ್ ಆಹಾರವನ್ನು ತಿನ್ನುತ್ತಿದ್ದರು ಎಂಬುದಾಗಿ ಪುಸ್ತಕದಲ್ಲಿ ಬರೆಯಲಾಗಿದೆ. ಹಾಗೆಯೇ  ಅವರು 350 ಉಪಪತ್ನಿಯರನ್ನು ಹೊಂದಿದ್ದ ಕಾರಣ ತುಂಬಾ  ಪ್ರಸಿದ್ಧಿಯನ್ನು ಪಡೆದಿದ್ದರು. ಹತ್ತು ಬಾರಿ ವಿವಾಹವಾಗಿದ್ದರು ಮತ್ತು ಅವರ ನೆಚ್ಚಿನ ಪತ್ನಿಯಾದ ರಾಜಮಾತಾ ವಿಮಲಾ ಕೌರ್ ಅವರೊಂದಿಗೆ ಆಗಾಗ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದರಂತೆ.

ಅದೂ ಅಲ್ಲದೇ ಇವರ ಅಂತಃಪುರ ಕೂಡ ಸಿಕ್ಕಾಪಟ್ಟೆ ವೈಭವಪೂರಿತವಾಗಿತ್ತಂತೆ. ಇನ್ನು ತಮ್ಮ ಉಪಪತ್ನಿಯರ ಬಗ್ಗೆ ಅವರ ಸೌಂದರ್ಯದ ಬಗ್ಗೆ ವೈಯಕ್ತಿಕ ಆಸಕ್ತಿ ವಹಿಸುತ್ತಿದ್ದರು. ಅದಕ್ಕಾಗಿ  ಅವರ ಅಂತಃಪುರದಲ್ಲಿ ಸುಗಂಧ ದ್ರವ್ಯ ತಯಾರಕರು, ಕೇಶ ವಿನ್ಯಾಸಕರು ಮತ್ತು ಆಭರಣ ತಯಾರಕರನ್ನು ಇರಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಅವರ ಅಭಿರುಚಿಗೆ ಅನುಗುಣವಾಗಿ ಅವರ  ಉಪಪತ್ನಿಯರ ಸೌಂದರ್ಯವನ್ನು ಹೆಚ್ಚಿಸಲು ಫ್ರಾನ್ಸ್ ಮತ್ತು ಬ್ರಿಟನ್‍ನ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರ ತಂಡವನ್ನು ಸಹ ಹೊಂದಿದ್ದರು.

Bhupinder Singh of Patiala

ಇದನ್ನೂ ಓದಿ:ಸತ್ತವರ ಮೂಳೆಗಳಿಂದಲೇ ಸೂಪ್ ತಯಾರಿಸಿ ಕುಡಿಯುತ್ತಾರೆ! ಏನಿದು ವಿಚಿತ್ರ ಸಂಪ್ರದಾಯ?

“ಪಟಿಯಾಲದಲ್ಲಿ, ಮಹಾರಾಜರು ಈಜುಕೊಳದಲ್ಲಿ ಜಲಕ್ರೀಡೆ ಆಡುವಾಗ ತಮ್ಮ  ಸುತ್ತಲೂ ಅಂತಃಪುರದ ಸಖಿಯರಲ್ಲಿ ನೆಚ್ಚಿನವರನ್ನು ನಗ್ನರಾಗಿ ಇರಿಸುತ್ತಿದ್ದರಂತೆ. ಅವರಿಂದ ತಮಗೆ ವಿಸ್ಕಿಯನ್ನು ಕುಡಿಸಲು ಹೇಳುತ್ತಿದ್ದರು ಎಂದು ಹೆನ್ರಿ ಪೂಲ್ ಅಂಡ್ ಕೋನಲ್ಲಿ ಪ್ರಕಟವಾದ ಜೇಮ್ಸ್ ಶೆರ್ವುಡ್ ಬರೆದ ಲೇಖನದಲ್ಲಿ ಭೂಪಿಂದರ್ ಸಿಂಗ್ ಬಗ್ಗೆ ಬರೆಯಲಾಗಿದೆ. ಅಲ್ಲದೇ ಅವರ ಮಲಗುವ ಕೋಣೆಯ ಚಾವಣಿಯ ಮೇಲ್ಭಾಗವನ್ನು ಕಾಮಪ್ರಚೋದಕ ಶಿಲ್ಪಗಳಿಂದ ಅಲಂಕರಿಸಲಾಗಿತ್ತು. ಇದು ಮಹಾರಾಜರ ರಸಿಕತನವನ್ನು ಅನಾವರಣ ಮಾಡಿದೆ.