Thursday, 31st October 2024

BBK 11: ನನ್ನ ಗುಣದ ಬಗ್ಗೆ ಮಾತಾಡ್ಬೇಡ: ಬಿಗ್ ಬಾಸ್ ಮನೆಯಲ್ಲಿ ಮಂಜು-ಭವ್ಯಾ ನಡುವೆ ಮಾತಿನ ವಾರ್

Ugramm Manju and Bhavya Gowda

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಐದು ವಾರ ಆಗಿದ್ದು, ಇನ್ನೂ ಕೂಡ ಪ್ರತಿದಿನ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳಗಳು ನಡೆಯುತ್ತಲೇ ಇದೆ. ಕಳೆದ ವೀಕೆಂಡ್ ಕಿಚ್ಚ ಸುದೀಪ್ ಬರದಿರುವ ಕಾರಣ ಅನೇಕ ವಿಚಾರಗಳಲ್ಲಿ ಸ್ಪರ್ಧಿಗಳಿಗೆ ಕ್ಲಾರಿಟಿ ಸಿಕ್ಕಿಲ್ಲ. ಹೀಗಾಗಿ ಹಿಂದಿನ ವಿಚಾರಗಳನ್ನು ಎತ್ತಿಕೊಂಡು ಈಗಲೂ ಮನೆಯೊಳಗೆ ಮನಸ್ತಾಪಗಳು ನಡೆಯುತ್ತಿದೆ. ಇಂದು ಬಿಗ್ ಬಾಸ್​ನಲ್ಲಿ ಉಗ್ರಂ ಮಂಜು ಮತ್ತು ಭವ್ಯಾ ಗೌಡ ನಡುವೆ ಮಾತಿನ ಸಮರ ನಡೆದಿದೆ.

ಲೆಕ್ಕಚಾರ ಇಲ್ಲದೆ ಆಡಿ ಎಂಬ ಸಲಹೆ ಭವ್ಯಾ ಗೌಡ ಅವರಿಗೆ ಬಂದಿದ್ದೆ ತಡ ಫಿಲ್ಟರ್ ಇಲ್ಲದೆ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಈಗ ಭವ್ಯಾ ಹಾಗೂ ಮಂಜು ಮಧ್ಯೆ ಕಿರಿಕ್ ಆಗಿದೆ. ಟಾಸ್ಕ್ ಸೋತ ಬಳಿಕ ಭವ್ಯಾ ಹಾಗೂ ಮಂಜು ಮಧ್ಯೆ ಮಾತುಕತೆ ನಡೆದಿದೆ. ನಿಮ್ಮ ಗುಣವೇ ಸರಿ ಇಲ್ಲ ಎಂದು ಭವ್ಯಾ ಹೇಳಿದ್ದಾರೆ. ನನ್ನ ಗುಣದ ಬಗ್ಗೆ ಮಾತನಾಡಬೇಡ ಎಂದು ಮಂಜು ಗರಂ ಆಗಿದ್ದಾರೆ.

ಮನೆ ಮಂದಿಗೆ ಲಕ್ಷುರಿ ಬಜೆಟ್​ ಗಳಿಸಲು ಬಿಗ್ ಬಾಸ್ ಒಂದು ಟಾಸ್ಕ್​​ ​ ನೀಡಿದ್ದಾರೆ. ಇದರ ಪ್ರಕಾರ ಸ್ಪರ್ಧಿಯೋರ್ವರು ಚಿತ್ರವೊಂದನ್ನು ಬಿಡಿಸಬೇಕು, ಅದನ್ನು ಇತರೆ ಸ್ಪರ್ಧಿಗಳು ಕಂಡು ಹಿಡಿಯಬೇಕು. ಇದರಲ್ಲಿ ಭವ್ಯಾ ಗೌಡ ತಂಡದ ವಿರುದ್ಧ ಗೌತಮಿ ಅವರ ತಂಡ ಗೆದ್ದಿದೆ. ಈ ಸಂದರ್ಭ ಜಗಳ ಶುರುವಾಗಿದೆ. ತ್ರಿವಿಕ್ರಮ್​​, ಭವ್ಯಾ ಅವರು ಮಂಜು ಬಳಿ ವಾದಕ್ಕಿಳಿದಿದ್ದಾರೆ.

ಎಲ್ಲರ ನಂಬಿಕೆಯನ್ನು ಹಾಳು ಮಾಡಿಕೊಂಡ್ರಿ ಎಂದು ಮಂಜು ಬಗ್ಗೆ ತ್ರಿವಿಕ್ರಮ್​​​ ಹೇಳಿದ್ದಾರೆ. ಅತ್ತ ರೊಚ್ಚಿಗೆದ್ದ ಭವ್ಯಾ ನಿಮ್ಮ ಗುಣಾನೆ ಇದು ಅಂತಾ ರೇಗಾಡಿದ್ದಾರೆ. ಗುಣದ ಬಗ್ಗೆ ಬಂದ ಹಿನ್ನೆಲೆ, ಮಂಜು ದನಿ ಏರಿಸಿದ್ದು, ನನ್ ಗುಣದ ಬಗ್ಗೆ ಮಾತನಾಡಬೇಡ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ದೊಡ್ಡ ಜಗಳ ನಡೆದಂತೆ ಕಾಣುತ್ತಿದೆ.

12 ಮಂದಿ ನಾಮಿನೇಟ್:

ಈ ವಾರ ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಸೇಫ್ ಆಗಿದ್ದಾರೆ. ಉಳಿದ 12 ಸದಸ್ಯರು ನಾಮಿನೇಟ್ ಆಗಿದ್ದು, ಇದರಲ್ಲಿ ಕ್ಯಾಪ್ಟನ್ ಹನುಮಂತ ಹೆಸರು ಕೂಡ ಇದೆ. ಗೌತಮಿ ಮತ್ತು ತ್ರಿವಿಕ್ರಮ್‌ ಬಿಟ್ಟು ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ,  ತುಕಾಲಿ ಮಾನಸ,  ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್, ಐಶ್ವರ್ಯಾ, ಧನರಾಜ್,‌ ಶಿಶರ್ ಶಾಸ್ತ್ರಿ ನಾಮಿನೇಟ್‌ ಆಗಿದ್ದಾರೆ. ಹಾಗೆಯೆ ಕ್ಯಾಪ್ಟನ್‌ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್‌ ಮಾಡಿದ್ದ ಕಾರಣಕ್ಕೆ ಅವರು ಕೂಡ ಈ ಲಿಸ್ಟ್​ನಲ್ಲಿ ಇದ್ದಾರೆ.

BBK 11: ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸಹಿತ ಬರೋಬ್ಬರಿ 12 ಮಂದಿ ನಾಮಿನೇಟ್: ಯಾರೆಲ್ಲ?