Thursday, 31st October 2024

Viral Video: ಚಿಕನ್ ಬಿರಿಯಾನಿ ಆರ್ಡರ್ ಮಾಡಿದ ವ್ಯಕ್ತಿಗೆ ಗದರಿದ ಡೆಲಿವರಿ ಬಾಯ್; ಕಾರಣವೇನು?

Viral Video

ನವದೆಹಲಿ: ಹಬ್ಬದ ದಿನಗಳು ಹತ್ತಿರುವಿರುವಾಗ ಕೆಲವರು ಮಾಂಸಹಾರ ಸೇವಿಸುವುದನ್ನು ಬಿಟ್ಟುಬಿಡುತ್ತಾರೆ. ಆದರೆ ಎಲ್ಲರೂ ಈ ಆಚರಣೆ ಪಾಲಿಸುವುದಿಲ್ಲ. ಆದರೆ ಇತ್ತೀಚೆಗೆ ದೀಪಾವಳಿಗೆ ಮುಂಚಿತವಾಗಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ ದೆಹಲಿಯ ವ್ಯಕ್ತಿಯೊಬ್ಬರಿಗೆ ಡೆಲಿವರಿ ಬಾಯ್ ಬೈದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ವಿಚಾರವನ್ನು ವ್ಯಕ್ತಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು ಇದು ವೈರಲ್ (Viral Video)ಆಗಿದೆ.

ವ್ಯಕ್ತಿ ಪೋಸ್ಟ್‌ನಲ್ಲಿ ತಿಳಿಸಿದ ಪ್ರಕಾರ, ಆರ್ಡರ್ ಸ್ವೀಕರಿಸಿದ ವ್ಯಕ್ತಿಯ ಬಳಿ ಡೆಲಿವರಿ ಬಾಯ್ ಒಟಿಪಿಯನ್ನು ಕೇಳಿದ್ದಾರಂತೆ. ಕೋಡ್ ನಮೂದಿಸಿದ ನಂತರ, ಡೆಲಿವರಿ ಬಾಯ್ ಅಲ್ಲಿಂದ ಹೋಗದೆ ಆರ್ಡರ್‌ ಮಾಡಿದ ವ್ಯಕ್ತಿಗೆ ಸಿಕ್ಕಾಪಟ್ಟೆ ಬೈಯಲು ಶುರುಮಾಡಿದ್ದಾರಂತೆ. ಅದೂ ಅಲ್ಲದೇ, ಆರ್ಡರ್ ಮಾಡಿದ ಫುಡ್‍ ಬಗ್ಗೆ ಕಾಮೆಂಟ್ ಮಾಡಿದ್ದಾರಂತೆ. ನೀವು ತುಂಬಾ ದೊಡ್ಡ ತಪ್ಪು ಮಾಡಿದ್ದೀರಿ. ಇದು ಸರಿಯಲ್ಲ ಎಂದು ಡೆಲಿವರಿ ಬಾಯ್‌ ಹೇಳಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಹಾಗೇ ಡೆಲಿವರಿ ಬಾಯ್‍ ಮಾತಿನಿಂದ ಆಘಾತಗೊಂಡ ವ್ಯಕ್ತಿ ತನ್ನ ಆಹಾರದಲ್ಲಿ ಏನು ತಪ್ಪಾಗಿದೆ ಎಂದು ಡೆಲಿವರಿ ಬಾಯ್‌ ಬಳಿ ಕೇಳಿದಾಗ ಈ ಚಿಕನ್ ಅಥವಾ ಮಟನ್ ದೀಪಾವಳಿಯ ನಂತರ ತಿನ್ನಿ, ಹಬ್ಬದ ಋತುವಿನಲ್ಲಿ ಶುದ್ಧ ವಾದ ಏನನ್ನಾದರೂ ತಿನ್ನಬೇಕು ಎಂದು ಡೆಲಿವರಿ ಬಾಯ್‌ ಹೇಳಿದ್ದಾನಂತೆ. ಅವರ ಮಾತು ಕೇಳಿ ತುಂಬಾನೆ ಶಾಕ್ ಆಗಿದೆ ಮತ್ತು  ಏನು ಹೇಳಬೇಕೆಂದು ಕೂಡ ತಿಳಿಯಲಿಲ್ಲ. ಹಾಗಾಗಿ ಸುಮ್ಮನೇ ಮುಗುಳು ನಗುತ್ತಾ ನಿಂತೆ ಎಂದು ಅವರು ಬರೆದಿದ್ದಾರೆ. ಅಲ್ಲದೇ ಡೆಲಿವರಿ ಬಾಯ್‍ ಕೋಪಗೊಂಡಿದ್ದನ್ನು ಕಂಡು ಆರ್ಡರ್‌ ಮಾಡಿದ ವ್ಯಕ್ತಿ ತುಂಬಾ ಹೆದರಿದ್ದಾರಂತೆ.

ಇದನ್ನೂ ಓದಿ:ತಂದೆ-ಮಗಳ ಬೈಕ್‌ ರೈಡಿಂಗ್‌; ಆಕ್ರೋಶಗೊಂಡ ಜನ ವಿಡಿಯೊ ನೋಡಿ

ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ.  “ನೀವು ಈ ವಿಚಾರವನ್ನು ವರದಿ ಮಾಡಬೇಕು ಮತ್ತು ಇಮೇಲ್ ಅಥವಾ ಕರೆ ಮೂಲಕ ಅವರಿಗೆ ಮಾಹಿತಿ ನೀಡಬೇಕು.  ಈ ವ್ಯಕ್ತಿಯು ಮತ್ತೆ ನಿಮಗೆ ಡೆಲಿವರಿ ನೀಡಲು ಬರಬಾರದು ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಭಾರತ ಎತ್ತ ಸಾಗುತ್ತಿದೆ? ಈಗ ಜನರು ತಾವು ತಿನ್ನುವ ಆಹಾರದ ಬಗ್ಗೆ ಜಗಳವಾಡುತ್ತಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.