Thursday, 31st October 2024

Viral Video: ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಇಟ್ಟ ದುಷ್ಕರ್ಮಿಗಳು; ಎಲ್ಲೆಡೆಯಿಂದ ಛೀಮಾರಿ

Viral Video

ದೀಪಾವಳಿ (Deepavali) ಸಂದರ್ಭದಲ್ಲಿ ಪಟಾಕಿಯಿಂದ ಪ್ರಾಣಿ ಪಕ್ಷಿಗಳು ಸಾಕಷ್ಟು ತೊಂದರೆ ಅನುಭವಿಸುತ್ತವೆ. ಅದರಲ್ಲೂ ಹೆಚ್ಚಿನ ಸಾಕು ಪ್ರಾಣಿಗಳು ಭಯಪಟ್ಟು ಮನೆ ಬಿಟ್ಟು ಓಡಿ ಹೋಗುವ ಪ್ರಸಂಗಗಳೂ ಇವೆ. ಆದರೆ ಕೆಲವರು ಈ ಸಾಕು ಪ್ರಾಣಿಗಳ ಭಯವನ್ನು ಸಂಭ್ರಮಿಸುವ ಕ್ರೂರ ಮನಸ್ಸಿನವರಾಗಿರುತ್ತಾರೆ ಎಂಬುದಕ್ಕೆ ಸಾಕ್ಷಿ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿರುವ ಈ ವಿಡಿಯೊ.

ಯುವಕನೊಬ್ಬ ದೀಪಾವಳಿ ಆಚರಿಸುವ ನೆಪದಲ್ಲಿ ನಾಯಿಯ ಬಾಲಕ್ಕೆ ಪಟಾಕಿಗಳನ್ನು ಕಟ್ಟಿ ಬೆಂಕಿ ಕೊಟ್ಟಿದ್ದಾನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಎಕ್ಸ್‌ನಲ್ಲಿ ವೈರಲ್ ಆಗಿರುವ ಆಘಾತಕಾರಿ ಈ ವಿಡಿಯೊಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಅನೇಕರು ಈ ದುಷ್ಕೃತ್ಯ ಎಸಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದೀಪಾವಳಿ ಆಚರಿಸುವ ಸೋಗಿನಲ್ಲಿ ಕೆಲವು ಯುವಕರು ಮೂಕ ಪ್ರಾಣಿಗೆ ಭಯ ಉಂಟು ಮಾಡುವಂತೆ ಮಾಡಿದರು. ನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಅದು ಉರಿಯಲು ಪ್ರಾರಂಭಿಸುತ್ತಿದ್ದಂತೆ ನಾಯಿ ಭಯಭೀತವಾಗಿ ಎಲ್ಲೆಂದರಲ್ಲಿ ಓದಲಾರಂಭಿಸಿದೆ. ಈ ಘಟನೆಯಲ್ಲಿ ನಾಯಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ಈ ಘಟನೆ ಎಲ್ಲಿ ನಡೆದಿರುವುದು ಎನ್ನುವುದು ತಿಳಿದು ಬಂದಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಯುವಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಒಬ್ಬ ವ್ಯಕ್ತಿ ನಾಯಿಯ ಕಿವಿಯಲ್ಲಿ ಹಿಡಿದಿರುವುದು ಇನ್ನೊಬ್ಬ ಅದರ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿದ್ದು, ಪಟಾಕಿಯಿಂದ ಬೆಂಕಿಯ ಕಿಡಿ ಹೊರಬರುತ್ತಿದ್ದಂತೆ ನಾಯಿ ಜೀವ ಭಯದಿಂದ ಓಡಲು ಪ್ರಾರಂಭಿಸಿತ್ತು. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ಚಿಕನ್ ಬಿರಿಯಾನಿ ಆರ್ಡರ್ ಮಾಡಿದ ವ್ಯಕ್ತಿಗೆ ಗದರಿದ ಡೆಲಿವರಿ ಬಾಯ್; ಕಾರಣವೇನು?

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅನೇಕರು ಪ್ರಾಣಿಗಳ ನೋವನ್ನು ಅರಿತುಕೊಳ್ಳಲಿ. ಆತನನ್ನು ಕಟ್ಟಿ ಹಾಕಿ ಎಂದು ಆಗ್ರಹಿಸಿದ್ದಾರೆ. ನೆಟ್ಟಿಗರೊಬ್ಬರು ಕಾಮೆಂಟ್ ವಿಭಾಗದಲ್ಲಿ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.