Sunday, 24th November 2024

Viral Video: ಅಬ್ಬಾ ಎಂಥಾ ಅಮಾನುಷ ಕೃತ್ಯ! ಕೋರ್ಟ್‌ ಆವರಣದಲ್ಲಿಯೇ ಮಹಿಳೆಗೆ ಹಿಗ್ಗಾ ಮುಗ್ಗಾ ಥಳಿಸಿದ ಲಾಯರ್‌- ವಿಡಿಯೋ ಇದೆ

Viral Video

ಪಾಟ್ನಾ: ಕೋರ್ಟ್‌ ಆವರಣದಲ್ಲೇ ಮಹಿಳೆಯನ್ನು ಹಿಡಿದು ವಕೀಲನೊಬ್ಬ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ. ಬಿಹಾರದ (Bihar) ಕತಿಹಾರ್ ಡಿಸಿಎಲ್‌ಆರ್ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರ ಮೇಲೆ ವಕೀಲ ಹಲ್ಲೆ ನಡೆಸುತ್ತಿರುವ ವಿಡಿಯೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ(Viral Video). ಹಲ್ಲೆ ಮಾಡಿದ ವ್ಯಕ್ತಿಯನ್ನು ವಕೀಲ ಕುಂದನ್‌ ಯಾದವ್‌ ಎಂದು ಗುರುತಿಸಲಾಗಿದೆ. ವಕೀಲ ಕುಂದನ್ ಯಾದವ್ ಮಹಿಳೆಯನ್ನು ಕೋಲಿನಿಂದ ಥಳಿಸಿದ್ದಾರೆ. ನೊಂದ ಮಹಿಳೆ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದರೆ ಅಲ್ಲಿದ್ದ ಯಾರೊಬ್ಬರೂ ಆಕೆಯ ಸಹಾಯಕ್ಕೆ ಮುಂದಾಗಲಿಲ್ಲ.

ಬಿಹಾರದ ಕೋರ್ಟ್‌ ಆವರಣದಲ್ಲಿಯೇ ಇಂತಹದೊಂದು ಅಮಾನುಷ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಮಹಿಳೆ ಈ ವರೆಗೆ ಯಾವುದೇ ದೂರನ್ನು ನೀಡಿಲ್ಲ, ಆದರೆ ವಿಡಿಯೋ ಆಧಾರಿತವಾಗಿ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಬಿಹಾರದಲ್ಲಿ ಕೆಲ ದಿನಗಳ ಹಿಂದೆ ಯುವಕರ ಗುಂಪೊಂದು ಯುವ ಜೋಡಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ವರದಿಗಳ ಪ್ರಕಾರ, ಬಿಹಾರದ ಜಮುಯಿ ಜಿಲ್ಲೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ದೌಲತ್‌ಪುರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. , ಯುವಕ ಮತ್ತು ಯುವತಿ ಕುಳಿತು ಮಾತನಾಡುತ್ತಿದ್ದಾಗ ಯುವಕರ ಗುಂಪು ಆಗಮಿಸಿ ಹಲ್ಲೆಯನ್ನು ಪ್ರಾರಂಭಿಸುತ್ತಾರೆ. ನಂತರ ಆ ಜೋಡಿಯನ್ನು ನಿಂದಿಸಿದ ಯುವಕರ ಗುಂಪು ಅವಾಚ್ಯ ಶಬ್ದಗಳಿಂದ ಅವರಿಗೆ ನಿಂದಿಸಿದ್ದಾರೆ.

ಇದನ್ನೂ ಓದಿ : Judge V/S Lawyer: ಕೋರ್ಟ್‌ ಹಾಲ್‌ನಲ್ಲೇ ಪರಸ್ಪರ ಕಿತ್ತಾಡಿಕೊಂಡ ನ್ಯಾಯಾಧೀಶರು, ವಕೀಲರು; ವೈರಲ್‌ ವಿಡಿಯೊ ಇಲ್ಲಿದೆ

ಯುವಕರ ಗುಂಪು ಇಟ್ಟಿಗೆಗಳಿಂದ ಯುವಕನ ಮೇಲೆ ಹಲ್ಲೆ ನಡೆಸಿದೆ. ಆ ಜೋಡಿ ರಕ್ಷಣೆಗಾಗಿ ಬೇಡಿಕೊಂಡಿದ್ದಾರೆ ಆದರೂ ಬಿಡದ ಯುವಕರು ದಾಳಿಯನ್ನು ಮುಂದುವರಿಸಿದ್ದಾರೆ. ಸುಮಾರು ಒಂದು ವಾರದ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವತಿ ಉಜಾಂಡಿ ಪ್ರದೇಶದವಳಾಗಿದ್ದು, ಯುವಕ ಬೋದ್ವಾನ್ ತಲಾಬ್‌ನವನಾಗಿದ್ದಾನೆ ಎಂದು ಹೇಳಲಾಗಿದೆ. ಇಬ್ಬರೂ ವಯಸ್ಕರಾಗಿದ್ದು, ಏಕಾಂತ ಪ್ರದೇಶದಲ್ಲಿ ಭೇಟಿಯಾಗುತ್ತಿದ್ದಾಗ ಅವರನ್ನು ಗಮನಿಸಿದ ಸ್ಥಳೀಯರು, ನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.