ಚಿಂಚೋಳಿ: ಚಿಂಚೋಳಿ ಸಿದ್ದಸಿರಿ ಕಬ್ಬಿನ ಕಾರ್ಖಾನೆಯ ವಿರುದ್ದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿಯನ್ನು ರಾಜ್ಯ ಸರಕಾರ ಹಿಂಪಡೆದು ಈ ಕಾರ್ಖಾನೆಯ ಪುನಃ ಪ್ರಾರಂಭಕ್ಕೆ ಸಹಕರಿಸುವಂತೆ ರೈತರು ಮಾಡಿಕೊಂಡ ಮನವಿಗೆ ಸಾಕಾರಾತ್ಮಕವಾಗಿ ಸ್ಪಂದನೆ ಸಿಗದಿದ್ದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಮೌನ ಸತ್ಯಾಗ್ರಹಕ್ಕೆ ತಾಲೂಕ ಅಖಿಲ ಭಾರತ ರೈತ ಹಿತ ರಕ್ಷಣಾ ಸಂಘದ ಪ್ರಧಾನ ಕಾರ್ಯದರ್ಶಿ ನಂದಿಕುಮಾರ ಪಾಟೀಲ್ ಅವರು ಸತ್ಯಾಗ್ರಹದ ಕಪ್ಪು ಬಟ್ಟೆಯ ಮೇಲೆ ಬ್ಯಾನರ್ ಅಳವಡಿಸಿ ಪಟ್ಟಣ ಬಸವೇಶ್ವರ ಪುತ್ತಳ್ಳಿ ಕಟ್ಟೆಯ ಮೇಲೆ ಕುಳಿತು ಮೌನ ಸತ್ಯಾಗ್ರಹ ನಡೆಸಿದ್ದಾರೆ.
ಕಳೆದ ವರ್ಷ ಪ್ರಾರಂಭವಾಗಿದ್ದ ಸಿದ್ದಸಿರಿ ಇಥೆನಾಲ್ ಮತ್ತು ಪವರ್ ಕಂಪನಿ ಕಬ್ಬಿನ ಕಾರ್ಖಾನೆಯನ್ನು ಪರಿಸರ ಮಾಲಿನ್ಯ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ ರಾಜ್ಯ ಸರಕಾರವು ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಬ್ಬು ಬೆಳೆಗಾರರಿಗೆ ಯಾವೊಂದು ಎಚ್ಚರಿಕೆಯ ಮುನ್ಸೂಚನೆ ನೀಡದೇ ಇದ್ದಕ್ಕಿದ್ದಂತೆ ಬಂದ್ ಮಾಡಿ, ಬೀಗ ಹಾಕಿದ್ದರಿಂದಾಗಿ ಸಾವಿರಾರು ರೈತರು ಕಂಗಲಾಗಿ ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ ಎಂದು ಅ. 19 ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಸಲ್ಲಿಸಿದ್ಧ ಮನವಿಯಲ್ಲಿ ತಿಳಿಸಿದ್ದಾರೆ.
ಸಲ್ಲಿಕೆಯಾಗಿರುವ ಪ್ರಕರಣವನ್ನು ವಿಚಾರಣೆ ಮಾಡಿದ ರಾಜ್ಯ ಉಚ್ಚನ್ಯಾಯಾಲಯವು ಈ ಕಬ್ಬಿನ ಕಾರ್ಖಾನೆ ಪುನ್ಹ ಪ್ರಾರಂಭವಾಗಲು ಅನುಕೂಲ ಕಲ್ಪಿಸಿಕೊಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ್ದರೂ ಅನುಮತಿ ನೀಡದೇ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಕಾನೂನು ಸಮರ ನಡೆಸುತ್ತಿದೆ. ಈ ನಡೆಗೆ ಅಸಮಾಧಾನಗೊಂಡ ರೈತರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೇಲ್ಮನವಿಯನ್ನು ರಾಜ್ಯ ಸರಕಾರ ಹಿಂಪಡೆದು ಸಿದ್ದಸಿರಿ ಇಥೆನಾಲ್ ಕಾರ್ಖಾನೆ ಪುನ್ಹ ಪ್ರಾರಂಭಕ್ಕೆ ಅನುವು ಮಾಡಿಕೊಡುವಂತೆ ಸೆ. 17 ರಂದು ಕಲಬುರಗಿ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಈ ಭಾಗದ ರೈತರ ಬದುಕು ಮತ್ತು ಭವಿಷ್ಯದ ಅತ್ಯಂತ ಮಹತ್ವದ ಗಂಭೀರ ಸಮಸ್ಯೆಯಾಗಿರುವ ಇದನ್ನು ಈ ಭಾಗದ ಕಬ್ಬು ಬೆಳೆ ಕಟಾವಿಗೆ ಬರುವುದಕ್ಕೂ ಮುಂಚೆ ಪರಿಹರಿಸಲು ಪ್ರೇಯತ್ನಿಸಬೇಕು. ರೈತ ಪರ ಕಾಳಜಿ ಯುಳ್ಳವರು ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಚಿಂತಕರೂ ಆಗಿರುವ ರಾಜ್ಯ ಸರಕಾರ ಮತ್ತು ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ಸಂಬಂಧಿತ ಮಂತ್ರಿಗಳು ಹಾಗೂ ಸಂಬಂಧೀತ ಎಲ್ಲ ಸಂಸದರು, ಶಾಸಕರು ಜನಪ್ರತಿನಿಧಿಗಳು ಸೇರಿ, ರೈತರ ಮೇಲೆ ಎಸಗಿದ ಈ ದಮನಕಾರಿ ಪ್ರವೃತ್ತಿಯನ್ನು ಮತ್ತು ರೈತರ ಬದುಕಿನೊಂದಿಗೆ ನಡೆದುಕೊಂಡಿರುವ ರೀತಿಯನ್ನು ನಾವು ಸಹಿಸುವುದಿಲ್ಲ ಎಂದು ಆರೋಪಿಸಿದ್ದಾರೆ. ಬದಲಾಗಿ, ತಿವೃವಾಗಿ ವಿರೋಧಿಸಿ ಖಂಡಿಸುತ್ತೇವೆ ಮತ್ತು ಮರಣವೇ ಮಹಾನವಮಿ! ಎಂದು ಪ್ರಾಣ ತ್ಯಾಗಕ್ಕೂ ಸಿದ್ದರಾಗಿದ್ದೇವೆ. ಯಾವುದೇ ಅಹಿತಕರ ಪರಿಣಾಮಗಳಿಗೆ ರಾಜ್ಯ ಸರಕಾರ ಮತ್ತು ಸಂಬಂಧಿತ ಶಾಸಕರು, ಮಂತ್ರಿಗಳು, ಸಂಸದರೇ ಹೊಣೆಗಾರರೆಂದು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಕಾರ್ಖಾನೆ ಏಕಾಏಕಿ ಬಂದ್ ಮಾಡಿ ಸಿದ್ದಸಿರಿ ಎಥಿನಾಲ್ ಮತ್ತು ಪವರ್ ಕಂಪನಿ ಕಬ್ಬಿನ ಪ್ರಾರಂಭಕ್ಕೆ ಅಡ್ಡಿಯಾಗಿರುವ ನಿಯಮಗಳನ್ನು ಸರಲೀಕರಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Kalaburagi Breaking: ಅ. 29 ರಂದು ತಾಲೂಕ ರೈತ ಹಿತರಕ್ಷಣೆ ಸಮಿತಿ ಕೈಗೊಂಡಿರುವ ಪ್ರತಿಭಟನೆ ಮುಂದೂಡಿಕೆ