Saturday, 23rd November 2024

MS Dhoni: ವಿಶೇಷ ಪೂಜೆ ನಡೆಸಿ ದೀಪಾವಳಿ ಆಚರಿಸಿದ ಧೋನಿ; ವಿಡಿಯೊ ವೈರಲ್‌

ರಾಂಚಿ: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ತಮ್ಮ ನಿವಾಸದಲ್ಲಿ ಕುಟುಂಬ ಸಮೇತರಾಗಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಪತ್ನಿ ಸಾಕ್ಷಿ ಸಿಂಗ್‌ ಜತೆಗೆ ಧೋನಿ ದೇವರಿಗೆ ಆರತಿ ಬೆಳಗುವ ವಿಡಿಯೊ ವೈರಲ್‌ ಆಗಿದೆ.

ಕಳೆದ ವರ್ಷ ಧೋನಿ ಕುಟುಂಬದೊಂದಿಗೆ ರಿಷಭ್‌ ಪಂತ್​ ದೀಪಾವಳಿ(Diwali 2023) ಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಬಾರಿ ನ್ಯೂಜಿಲ್ಯಾಂಡ್‌ ಟೆಸ್ಟ್‌ ಸರಣಿ ಆಡುತ್ತಿರುವ ಕಾರಣ ಪಂತ್‌ಗೆ ಧೋನಿ ಮನೆಯಲ್ಲಿ ಸೇರುವ ಅವಕಾಶ ಕೈತಪ್ಪಿದೆ. ಪಂತ್‌ ಡೆಲ್ಲಿ ತಂಡ ತೊರೆದಿರುವ ಕಾರಣ ಚೆನ್ನೈ ತಂಡ ಸೇರಲಿದ್ದಾರೆ ಎನ್ನಲಾಗಿದೆ.

ಧೋನಿ ಮಾತ್ರವಲ್ಲದೆ, ಟೀಮ್‌ ಇಂಡಿಯಾದ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ಮಯಾಂಕ್‌ ಅಗರ್ವಾಲ್‌, ಇಶಾಂತ್‌ ಶರ್ಮ, ಸುರೇಶ್‌ ರೈನಾ, ವೀರೇಂದ್ರ ಸೆಹವಾಗ್‌, ಉಮೇಶ್‌ ಯಾದವ್‌, ಭವನೇಶ್ವರ್‌ ಕುಮಾರ್ ಸೇರಿ ಹಲವು ಹಾಲಿ ಮತ್ತು ಮಾಜಿ ಆಟಗಾರರು ತಮ್ಮ ನಿವಾಸದಲ್ಲಿ ಕುಟುಂಬ ಸಮೇತರಾಗಿ‌ ಸಡಗರದಿಂದ ದೀಪಾವಳಿ ಆಚರಿಸಿಕೊಂಡಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ IPL 2025 Retention: ರಿಟೇನ್‌ನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು

ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರನ್ನು ಈ ಬಾರಿ ಅನ್‌ಕ್ಯಾಪ್ಡ್‌ ಆಟಗಾರನನ್ನಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ರಿಟೇನ್‌ ಮಾಡಿಕೊಂಡಿದೆ. ಅಲ್ಲಿಗೆ ಧೋನಿ ಅಭಿಮಾನಿಗಳ ಆತಂಕ ದೂರವಾಗಿದೆ. ಮತ್ತೊಮ್ಮೆ ಅವರ ಆಟವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ. ಆದರೆ, ಧೋನಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಮೂಲಗಳ ಪ್ರಕಾರ ಧೋನಿ ಈ ಇಂಪ್ಯಾಕ್ಟ್‌ ಆಟಗಾರನಾಗಿ ಬ್ಯಾಟ್‌ ಬೀಸಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ 2 ಆವೃತ್ತಿಯಲ್ಲಿ ಧೋನಿ ತಂಡಕ್ಕೆ ಪರ್ಯಾಯ ವಿಕೆಟ್‌ ಕೀಪರ್‌ ಇಲ್ಲದ ಕಾರಣ ಮೊಣಕಾಲಿಗೆ ನೋವು ನಿವಾರಕ ಪ್ಲಾಸ್ಟರ್‌ ಕಟ್ಟಿಕೊಂಡು ಕೀಪಿಂಗ್‌ ನಡೆಸಿದ್ದರು. ಗಾಯದ ಕಾರಣ ಐಪಿಎಲ್‌ಗೂ ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಈ ಬಾರಿ ಧೋನಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪಂತ್‌ಗೆ ಬಲೆ ಬೀಸಲು ಫ್ರಾಂಚೈಸಿ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.