Friday, 22nd November 2024

BS Yediyurappa: ಸಿಎಂ ಆಗಿದ್ದಾಗ ಸಾವಿರಾರು ಕೋಟಿ ಹೊಡೆದಿದ್ದರು ಯಡಿಯೂರಪ್ಪ: ಯತ್ನಾಳ್ ಆರೋಪ!

bs yediyurappa

ವಿಜಯಪುರ: ಬಿಎಸ್‌ ಯಡಿಯೂರಪ್ಪ (BS Yediyurappa) ಅವರು ಮುಖ್ಯಮಂತ್ರಿ (Chief minister) ಆಗಿದ್ದಾಗ ಸಾವಿರಾರು ಕೋಟಿ ರೂಪಾಯಿ ದುಡ್ಡು ತಿಂದಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸ್ಫೋಟಕ ಆರೋಪ ಮಾಡಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಯತ್ನಾಳ್‌, ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಇದನ್ನು ಹೇಳಿದ್ದಾರೆ. ಬಿಎಸ್‌ವೈ ಸಿಎಂ ಆಗಿದ್ದಾಗ ಮಂತ್ರಿಯಾಗು ಎಂದಿದ್ದರು. ಆದರೆ ನಾನು ಆಗಿರಲಿಲ್ಲ. ಅವರು ಸಿಎಂ ಇದ್ದಾಗ ಸಾವಿರಾರು ಕೋಟಿ ರೂ. ಹಣ ತಿಂದಿದ್ದಾರೆ. ಭ್ರಷ್ಟ ಸಿಎಂ ಮಂತ್ರಿಮಂಡಲದಲ್ಲಿ ನಾನು ಇರಲ್ಲ ಎಂದು ತಿರಸ್ಕರಿಸಿದ್ದೇನೆ. ಪ್ರತಿ ನಿತ್ಯ ಅಪ್ಪ, ಮಗ ನಡ್ಡಾ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ತೆಗೆಯಿರಿ. ವಿಜಯೇಂದ್ರನನ್ನು ಸಿಎಂ ಮಾಡಿ ಎಂದು ಗೋಳಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ವಿಜಯೇಂದ್ರ ನನ್ನನ್ನು ಸ್ಟಾರ್ ಮಾಡುವ ಅವಶ್ಯಕತೆಯಿಲ್ಲ. ಈ ರಾಜ್ಯದ ಜನ ನಮ್ಮನ್ನು ಒಪ್ಪಿಕೊಂಡಿದ್ದಾರೆ. ನೀವು ಹೀರೋ ಆಗಬೇಕು ಅಂದರೆ ಖರ್ಚು ಮಾಡಿ.ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದ್ರೆ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರನನ್ನು ತೆರವುಗೊಳಿಸಬೇಕು. ಬಿ.ಎಸ್ ಯಡಿಯೂರಪ್ಪ ಅವರನ್ನು ಯಾವುದೇ ವೇದಿಕೆಗಳಲ್ಲಿ ಕೂರಿಸಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ Xನಲ್ಲಿ ಬಿಜೆಪಿ ಕರ್ನಾಟಕ ಎಂದು ಒಂದು ಎಕ್ಸ್ ಖಾತೆ ಇದೆ. ಅದನ್ನು ಬಿವೈವಿ ಕರ್ನಾಟಕ ಮಾಡಿದರೆ ಒಳ್ಳೆಯದು. ಯಾಕೆಂದರೆ ಅದರಲ್ಲಿ ಯಡಿಯೂರಪ್ಪನವರ ಗುಣಗಾನ ಬಿಟ್ಟರೆ ಬೇರೇನೂ ಇಲ್ಲ. ಅಭ್ಯರ್ಥಿಗಳಿಗೆ ಹಿಂದೂಗಳ ವೋಟು ಎಂದು ಕರೆಯಲಿ. ಆದರೆ ಸಾಬ್ರೂ ನಿಮಗೆ ವೋಟು ಹಾಕುತ್ತಾರೆ ಎಂದು ಮಾತ್ರ ಹೇಳಬೇಡಿ ಎಂದರು.

ಇದನ್ನೂ ಓದಿ: Basanagouda Patil Yatnal: ನಾನು ಹೇಳಿದ್ದು ಹಾಗಲ್ಲ: ತಮ್ಮ ಹೇಳಿಕೆಯ ಕಾವು ತಗ್ಗಿಸಲು ಯತ್ನಿಸಿದ ಯತ್ನಾಳ್