Friday, 22nd November 2024

Tumkur News: ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Shivamogga News

ತುಮಕೂರು: ಬಾವಿಯಲ್ಲಿ ಈಜಾಡಲು ಹೋದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ (Tumkur News) ತುಮಕೂರು ಹೊರವಲಯದ ಬೆಳಗುಂಬ ಗ್ರಾಮದಲ್ಲಿ ನಡೆದಿದೆ. ತುಮಕೂರು ಹೊರವಲಯದ ಬೆಳಗುಂಬ ತಾಂಡ್ಯದ ಶ್ರೀನಿವಾಸ್‌ ಎಂಬುವವರ ಮಗ ಯಶವಂತ್ (17), ವಡ್ಡರಹಳ್ಳಿಯ ಬಾಬಾ ಜಾನ್‌ ಎಂಬುವವರ ಮಗ ಮೊಹಮ್ಮದ್ ಸುಹೇಲ್ (17) ಮೃತರು.

ಬೆಳಗುಂಬ ಗ್ರಾಮದ ಕೃಷ್ಣಪ್ಪ ಅವರ ಬಾವಿಯಲ್ಲಿ ಈಜಾಡಲು ಹೋಗಿದ್ದಾಗ ಬಾಲಕರು ನೀರುಪಾಲಾಗಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೃತ ದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Viral Video: ಸೈಕಲ್ ಸ್ಟಂಟ್ ತಂದ ಆಪತ್ತು; ಮನೆ ಗೋಡೆಗೆ ಅಪ್ಪಳಿಸಿ ಬಾಲಕ ದುರ್ಮರಣ: ದುರಂತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ವ್ಯಕ್ತಿಯ ಬರ್ಬರ ಕೊಲೆ; ಐವರು ವಶಕ್ಕೆ

ರಾಯಚೂರು: ಪಟಾಕಿ ಹೊಡೆಯುವ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ (Murder Case) ಅಂತ್ಯವಾಗಿರುವ ಘಟನೆ ರಾಯಚೂರು ನಗರದ ರಾಗಿಮಾನಗಡ್ಡದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನರಸಿಂಹಲು (32) ಕೊಲೆಯಾದವರು. ಕೊಲೆಯಾದ ನರಸಿಂಹಲು ಮನೆಯ ಮುಂದೆ ಯುವಕರು ಪಟಾಕಿ ಸಿಡಿಸುತ್ತಿದ್ದರು. ಇದಕ್ಕೆ ವಿರೋಧಿಸಿದ್ದ ನರಸಿಂಹಲು ಮನೆಯಲ್ಲಿ ಮಕ್ಕಳಿದ್ದಾರೆ, ಮನೆ ಮುಂದೆ ಪಟಾಕಿ ಸಿಡಿಸಬೇಡಿ ಎಂದು ಹೇಳಿದ್ದರು. ಇದರಿಂದಾಗಿ ಕೆರಳಿದ್ದ ಹಂತಕರು ನರಸಿಂಹಲು ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ವ್ಯಕ್ತಿ ಹಲ್ಲೆ ಮಾಡಿದ್ದಾರೆ. ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯ ಯುವಕರೊಂದಿಗೆ ಬಂದು ನರಸಿಂಹನ ಹತ್ಯೆ ಮಾಡಿದ್ದಾರೆ.

ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿಲ್ಲ. ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಳಗಾದ ಕಡೆಯವರು ನರಸಿಂಹಲುನನ್ನು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಅಲ್ಲದೇ ಮೃತನ ವಿರುದ್ಧವೂ ಹಲ್ಲೆಗೊಳಗಾದವರು ಕೌಂಟರ್ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.