Friday, 22nd November 2024

Mohan Vishwa Column: ಭಾರತದ ಶ್ರೀಮಂತ ಧರ್ಮ ಇಸ್ಲಾಂ

ವೀಕೆಂಡ್‌ ವಿತ್‌ ಮೋಹನ್‌

ಮೋಹನ್‌ ವಿಶ್ವ

camohanbn@gmail.com

ಅಖಂಡ ಭಾರತದ ವಿಭಜನೆಯಾದ ನಂತರ ಪಾಕಿಸ್ತಾನಕ್ಕೆ ಹೋಗದೆ ಇಲ್ಲೇ ಉಳಿದುಕೊಂಡ ಮುಸಲ್ಮಾನರನ್ನು ಅಲ್ಪಸಂಖ್ಯಾತರೆಂದು ಕರೆಯ ಲಾಗುತ್ತಿದೆ. ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಮುಸಲ್ಮಾನರ ಪಾಲು ಕಡಿಮೆ ಯಿದ್ದ ಕಾರಣಕ್ಕೆ ಅವರನ್ನು ಅಲ್ಪ ಸಂಖ್ಯಾತರೆಂದು ಕರೆಯಲಾಗುತ್ತಿದೆಯೆಂದು ಹಿಂದೂಗಳು ಅಂದು ಕೊಂಡಿದ್ದರು.

ಆದರೆ ಅದರ ಹಿಂದಿನ ರಾಜಕೀಯ ಉದ್ದೇಶ ಬೇರೆಯದ್ದೇ ಆಗಿತ್ತು. ಮುಸಲ್ಮಾನರು ತನಗೆ ನಿಷ್ಠರೆಂಬ ಸಾಮಾನ್ಯ eನ ಕಾಂಗ್ರೆಸ್ಸಿಗಿತ್ತು. ಈ ಮತಬ್ಯಾಂಕಿನ ಮೂಲಕ ಅಧಿಕಾರಕ್ಕೆ ಬರುವುದು ಸುಲಭವೆಂಬುದು ಕಾಂಗ್ರೆಸ್ಸಿಗರಿಗೆ ಚೆನ್ನಾಗಿ ತಿಳಿದಿದೆ. ಬಹುತೇಕ ಮುಸಲ್ಮಾನರಿಗೆ ಅಭಿವೃದ್ಧಿಗಿಂತಲೂ ತಮ್ಮ ಧಾರ್ಮಿಕ ಆಚರಣೆಗಳನ್ನು ಬೆಂಬಲಿಸುವ ಪಕ್ಷ ಬೇಕು.

ಬಾಬಾಸಾಹೇಬರ ಸಂವಿಧಾನಕ್ಕಿಂತಲೂ ತಮ್ಮ ಧರ್ಮವೇ ಮುಖ್ಯವೆಂದು ಅನೇಕ ಮುಸಲ್ಮಾನರು ಹೇಳುತ್ತಾರೆ, ಆದರೆ ಭಾರತದ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಸದಾ ಪ್ರತಿಪಾದಿಸುತ್ತಿರುತ್ತಾರೆ. ಮುಸಲ್ಮಾನರ ಓಲೈಕೆಯ ಮತಬ್ಯಾಂಕ್ ರಾಜಕಾರಣ ಅನೇಕ ಪ್ರಾದೇಶಿಕ ಪಕ್ಷಗಳ ಹುಟ್ಟಿಗೂ ಕಾರಣವಾಯಿತು. ಮುಸಲ್ಮಾನರ ಓಲೈಕೆ
ಗಾಗಿ ತಮ್ಮ ಪಕ್ಷ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ ಯೆಂದು ಮಮತಾ ಬ್ಯಾನರ್ಜಿ ತೋರಿಸಿಕೊಟ್ಟಿದ್ದಾರೆ.

ದೇಶದ ಜನಸಂಖ್ಯೆಯಲ್ಲಿ ಶೇ.೧೨ರಷ್ಟು ಇರುವ ಮುಸಲ್ಮಾನರನ್ನು ಇಂದಿಗೂ ಅಲ್ಪಸಂಖ್ಯಾತರೆಂದೇ ಕರೆಯ ಲಾಗುತ್ತದೆ. ಅಲ್ಪಸಂಖ್ಯಾತರೆಂಬ ಕೋಟಾದಲ್ಲಿ ಮುಸಲ್ಮಾನರು ಸರಕಾರದ ಅನೇಕ ಸವಲತ್ತುಗಳ ಮೊದಲ ಫಲಾನುಭವಿಗಳಾಗಿದ್ದಾರೆ. ಕಾಂಗ್ರೆಸ್ ಸರಕಾರ ನೆಹರು ಕಾಲದಿಂದಲೂ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿದೆ. ಅದು ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡಿ ತ್ರಿವಳಿ ತಲಾಕ್ ರದ್ದತಿಯನ್ನು ವಿರೋಧಿಸಿತ್ತು.

ರಾಜೀವ್ ಗಾಂಧಿ ಶಾಬಾನು ಪ್ರಕರಣದ ತೀರ್ಪಿನ ನಂತರ, ಮುಸ್ಲಿಂ ಗಂಡಸರ ಒತ್ತಡಕ್ಕೆ ಮಣಿದು ನ್ಯಾಯಾಲಯದ ವಿರುದ್ಧ ಕಾನೂನಿಗೆ ತಿದ್ದುಪಡಿ ತಂದರು. ಮುಸಲ್ಮಾನರನ್ನು ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಲ್ಲಿರಿಸಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿಯನ್ನು ‘ವಕ್ಫ್‌ʼ ಕಾಯ್ದೆಯಡಿಯಲ್ಲಿ ವಕ್ ಮಂಡಳಿಯ ಸುಪರ್ದಿಗೆ ತರಲಾಗಿದೆ. ಅಖಂಡ ಭಾರತದ ವಿಭಜನೆಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳ ಆಸ್ತಿಗಳನ್ನು ಅಲ್ಲಿನ ಮುಸ್ಲಿಂ ಸಮುದಾಯ ಮತ್ತು ಪಾಕಿಸ್ತಾನ ಸರಕಾರ ಆಕ್ರಮಿಸಿಕೊಂಡಿವೆ.

ಆದರೆ ಭಾರತದಿಂದ ಪಾಕಿಸ್ತಾನಕ್ಕೆ ಹೋದ ಮುಸ್ಲಿಮರ ಭೂಮಿಯನ್ನು ಅಂದಿನ ಭಾರತ ಸರಕಾರ ವಕ್ಫ್
ಬೋರ್ಡ್‌ಗಳಿಗೆ ನೀಡಿತು. ನಂತರ 1954ರಲ್ಲಿ ವಕ್ಫ್ ಬೋರ್ಡ್ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಆದರೆ 1995ರಲ್ಲಿ ವಕ್ಫ್ ಕಾಯ್ದೆಯನ್ನು ಬದಲಾಯಿಸುವ ಮೂಲಕ ವಕ್ಫ್ ಮಂಡಳಿಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನಿಯಮಿತ ಹಕ್ಕುಗಳನ್ನು ನೀಡಲಾಯಿತು. ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ವಕ್ ಬೋರ್ಡ್‌ಗಳು ಹೊಂದಿರುವ ಒಟ್ಟು 654509 ಆಸ್ತಿಗಳು ಎಂಟು ಲಕ್ಷ ಎಕರೆಗೂ ಹೆಚ್ಚಿನ ಭೂಮಿಯಲ್ಲಿ ಹರಡಿ ಕೊಂಡಿವೆ. ಭಾರತೀಯ ಸೇನೆ ಮತ್ತು ಭಾರತೀಯ ರೇಲ್ವೆಗಳ ನಂತರ ಅತಿ ಹೆಚ್ಚಿನ ಭೂಮಿ ವಕ್ಫ್ ಮಂಡಳಿ ಬಳಿ ಇದೆ. 2009ರಲ್ಲಿ ವಕ್ಫ್ ಮಂಡಳಿಯ ಆಸ್ತಿಗಳು ನಾಲ್ಕು ಲಕ್ಷ ಎಕರೆಯಷ್ಟು ಇದ್ದವು. ಅದು 2022ರ ವೇಳೆಗೆ ದುಪ್ಪಟ್ಟಾಗಿದೆ.

ವಕ್ಫ್ ಮಂಡಳಿಯು ದೇಶದ ಯಾವುದೇ ಮೂಲೆಯಲ್ಲಿ ಸ್ಮಶಾನದ ಗಡಿ ಗೋಡೆಯನ್ನು ನಿರ್ಮಾಣ ಮಾಡಿದರೂ,
ಅದರ ಸುತ್ತಲಿನ ಭೂಮಿಯನ್ನು ತನ್ನ ಆಸ್ತಿ ಎಂದು ಪರಿಗಣಿಸುತ್ತದೆ. ಕರ್ನಾಟಕದಲ್ಲಿ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಜಿಲ್ಲೆ ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ನಡೆಸಲಾಗುತ್ತಿದ್ದು, ರೈತರಿಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ವಕ್ಫ್ ಮಂಡಳಿಗೆ ಸೇರಿಸುವ ಕೆಲಸ ನಡೆಯುತ್ತಿದೆ.

ಚಿತ್ರದುರ್ಗದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಆಸ್ತಿಯನ್ನೂ ವಕ್ ಮಂಡಳಿ ಬಿಟ್ಟಿಲ್ಲ. ಆಸ್ತಿಗಳಿಗೆ ಬೇಲಿ ಹಾಕುವಂತೆ ಸಚಿವ ಜಮೀರ್ ಸಭೆಯಲ್ಲಿ ಬಹಿರಂಗವಾಗಿ ಕರೆ ಕೊಡುತ್ತಿದ್ದಾರೆ. ಅನ್ನದಾತನು ತನ್ನ ತಾತ,
ಮುತ್ತಾತನ ಕಾಲದಿಂದಲೂ ವ್ಯವಸಾಯ ಮಾಡಿಕೊಂಡು ಬಂದಿರುವ ಜಮೀನಿನ ಒಡೆತನವನ್ನು ವಕ್ಫ್ ಮಂಡಳಿಯ ಮುಂದೆ ದಾಖಲೆಗಳ ಮೂಲಕ ಸಾಬೀತುಪಡಿಸಬೇಕಾದ ಪರಿಸ್ಥಿತಿ ಎದುರಾಗಿದೆ.

1995ರ ವಕ್ಫ್ ಕಾಯ್ದೆ ಪ್ರಕಾರ, ವಕ್ಫ್ ಮಂಡಳಿ ಭೂಮಿಯೊಂದು ಮುಸಲ್ಮಾನರಿಗೆ ಸೇರಿದ್ದು ಎಂದು ‘ಯೋಚಿಸಿದರೆ’ ಸಾಕು, ಅದು ವಕ್ಫ್ʼನ ಆಸ್ತಿ ಎಂದು ಪರಿಗಣಿಸಬಹುದು. ಅದರ ಮಾಲೀಕತ್ವವನ್ನು ಸಾಬೀತು ಪಡಿಸಲು ಪುರಾವೆ ನೀಡಬೇಕಾದ ಅಗತ್ಯವಿಲ್ಲ. ನಿಮ್ಮ ಆಸ್ತಿ ನಿಮ್ಮದಲ್ಲ, ಮಂಡಳಿಯದ್ದು ಎಂದು ವಕ್ಫ್ ತೀರ್ಮಾನಿಸಿದರೆ, ನೀವು ನ್ಯಾಯಾಲಯದ ಮೊರೆ ಹೋಗುವಂತಿಲ್ಲ.

ವಕ್ಫ್ ಕಾಯ್ದೆಯಡಿಯಲ್ಲಿರುವ ಟ್ರಿಬ್ಯೂನಲ್ ನ್ಯಾಯಾಲಯವನ್ನು ಮಾತ್ರ ಸಂಪರ್ಕಿಸಬಹುದು. 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಂದಾಜು 1.67 ಕೋಟಿ ಮತಗಳು ಬಂದಿದ್ದವು. ಕರ್ನಾಟಕದ ಒಟ್ಟಾರೆ ಜನಸಂಖ್ಯೆ ಸುಮಾರು 7 ಕೋಟಿಯ ಆಸುಪಾಸಿನಲ್ಲಿದೆ. ಇದರಲ್ಲಿ ಮುಸಲ್ಮಾನರ ಪಾಲು ಸುಮಾರು ಶೇ.10ರಷ್ಟು ಅಂದುಕೊಂಡರೂ, ಅವರ ಸಂಖ್ಯೆ ಸುಮಾರು 70 ಲಕ್ಷಕ್ಕೆ ಮಟ್ಟುತ್ತದೆ. ಈ ಪೈಕಿ ಶೇ.60ರಷ್ಟು ಮತದಾನಕ್ಕೆ ಅರ್ಹರೆಂದುಕೊಂಡರೆ, ಅಂದಾಜು 42 ಲಕ್ಷ ಮುಸ್ಲಿಮರ ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್‌ನ ಚುನಾವಣಾ ಪೂರ್ವ ಓಲೈಕೆಯ ರಾಜಕಾರಣದ ಪರಿಣಾಮ ಶೇ.95ರಷ್ಟು ಮುಸಲ್ಮಾನರು 2023ರಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆಂದು ಹೇಳಲಾಗುತ್ತಿದೆ.

ಅಂದರೆ ಸುಮಾರು 40 ಲಕ್ಷ ಮುಸಲ್ಮಾನರ ಮತಗಳು ಕಾಂಗ್ರೆಸ್‌ಗೆ ಬಿದ್ದಿವೆ. ಹೀಗೆ, ಕಾಂಗ್ರೆಸ್‌ನ ಒಟ್ಟಾರೆ ಮತಗಳಿಕೆ ಯಲ್ಲಿ ಮುಸಲ್ಮಾನರ ಮತಗಳು ಹೆಚ್ಚಾಗಿರುವ ಕಾರಣ ಅವರ ಋಣಸಂದಾಯ ಮಾಡುವ ಕೆಲಸವನ್ನು ಸರಕಾರ ತಾನು ಅಸ್ತಿತ್ವಕ್ಕೆ ಬಂದ ದಿನದಿಂದಲೂ ಮಾಡುತ್ತಲೇ ಇದೆ. ರೈತರಿಗೆ ಸೇರಿದ ಜಮೀನನ್ನು ವಕ್ಫ್ ಮಂಡಳಿಗೆ ಸೇರಿಸಿ ತಮಗೆ ಮತನೀಡಿದ ಸಮುದಾಯದ ತುಷ್ಟೀಕರಣ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ತನಗೆ ನೀಡಿರುವ ಅಪರಿಮಿತ ಅಧಿಕಾರದ ಮೂಲಕ ವಕ್ಫ್ ಮಂಡಳಿಯು ಆಸ್ತಿಗಳ ಮೇಲೆ ಹಕ್ಕು ಸಾಧಿಸುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ತಮಿಳುನಾಡು ವಕ್ಫ್ ಮಂಡಳಿಯು 1500 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ ಸೇರಿದಂತೆ, ತಮಿಳುನಾಡಿನ 6 ಗ್ರಾಮಗಳನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸಿತ್ತು.

ಗುಜರಾತ್ ವಕ್ಫ್ ಮಂಡಳಿ ಸೂರತ್ ನಗರಪಾಲಿಕೆಯ ಕಟ್ಟಡ ತನಗೆ ಸೇರಬೇಕೆಂದು ಹೇಳಿತ್ತು. ಕಂದಾಯ ಇಲಾಖೆ ಯಲ್ಲಿನ ಕಡತಗಳಲ್ಲಿ ಯಾರ ಹೆಸರೂ ಇಲ್ಲದ ಕಾರಣ, ಹಿಂದೆ ಮೊಘಲರ ಕಾಲದಲ್ಲಿ ಆ ಜಾಗವು ಹಜ್ ಯಾತ್ರಿಗಳ ವಿಶ್ರಾಂತಿ ಸ್ಥಳವಾಗಿತ್ತಂತೆ. ಬ್ರಿಟಿಷರ ಆಡಳಿತದಲ್ಲಿ ಆ ಜಾಗವು ಬ್ರಿಟಿಷ್ ಸರಕಾರದ ವಶಕ್ಕೆ ಹೋಯಿತು.
ಸ್ವಾತಂತ್ರ್ಯಾ ನಂತರ ಆ ಜಾಗವು ಭಾರತ ಸರಕಾರಕ್ಕೆ ಸೇರಿತ್ತು. ತದನಂತರ ಕಂದಾಯ ಇಲಾಖೆಯ ದಾಖಲೆಗಳು
ತಿದ್ದುಪಡಿಯಾಗದ ಕಾರಣ, ಮೊಘಲರ ಕಾಲದಲ್ಲಿ ಆ ಜಾಗ ‘ವಕ್ಫ್’ ಆದ ಕಾರಣ, ಷರಿಯಾ ಕಾನೂನಿನಡಿಯಲ್ಲಿ ವಕ್ಫ್ ಮಂಡಳಿಗೆ ಸೇರಬೇಕೆಂದು ಹೇಳಲಾಗಿತ್ತು.

ಗುಜರಾತ್ ವಕ್ಫ್ ಮಂಡಳಿ ಉಚ್ಚ ನ್ಯಾಯಾಲಯದಲ್ಲಿ, ಶ್ರೀಕೃಷ್ಣನ ದ್ವಾರಕದಲ್ಲಿರುವ ದ್ವೀಪಗಳು ತನಗೆ ಸೇರಬೇಕೆಂದು ಅರ್ಜಿ ಹಾಕಿತ್ತು. ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಕೃಷ್ಣನಗರದಲ್ಲಿನ ದ್ವೀಪಕ್ಕೂ, ವಕ್ಫ್ ಮಂಡಳಿಗೂ ಎಲ್ಲಿಯ ಸಂಬಂಧವೆಂದು ಛೀಮಾರಿ ಹಾಕಿತ್ತು. ಅಪಾರ್ಟ್‌ಮೆಂಟ್ ಮಾಲೀಕರ ಸಂಘಕ್ಕೆ
ತಿಳಿಯದಂತೆ, ಅಪಾರ್ಟ್‌ಮೆಂಟಿನಲ್ಲಿರುವ ಮನೆಯನ್ನು ವ್ಯಕ್ತಿಯೊಬ್ಬ ವಕ್ಫ್ ಮಂಡಳಿಗೆ ನೀಡಬಹುದು. ಸೂರತ್
ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಇದೇ ರೀತಿಯ ಘಟನೆಯೊಂದು ನಡೆದು, ಮುಸಲ್ಮಾನರು ವಕ್ಫ್ ಮಂಡಳಿಗೆ
ಮಾಲೀಕ ನೀಡಿದ ಮನೆಯಲ್ಲಿ ನಿತ್ಯ ನಮಾಜ್ ಮಾಡುತ್ತಿದ್ದರು.

2013ರಲ್ಲಿ ಸಾರ್ವತ್ರಿಕ ಚುನಾವಣೆಗೂ ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ
ಪ್ರಧಾನಿ ಮನ್‌ಮೋಹನ್ ಸಿಂಗ್ ನೇತೃತ್ವದಲ್ಲಿ ದೆಹಲಿಯ ಪಾರ್ಲಿಮೆಂಟ್ ಹೌಸ್, ಕನಾಟ್ ಪ್ಲೇಸ್, ಕರೋಲ್ ಬಾಗ್, ದರಿಯಾಗಂಜ್, ಲೋಧಿ ರೋಡ್, ಜನಪಥ್, ಮಥುರಾ ಹೌಸ್, ಸದಾರ್ ಬಜಾರ್, ಮಾನ್‌ಸಿಂಗ್ ರಸ್ತೆಯಲ್ಲಿರುವ ಸುಮಾರು 123 ಸರಕಾರಿ ಆಸ್ತಿಗಳನ್ನು ಡಿನೋಟಿಫೈ ಮಾಡಿ ವಕ್ ಮಂಡಳಿಗೆ ನೀಡಲಾಗಿತ್ತು.

ದೆಹಲಿಯಲ್ಲಿ ವಕ್ಫ್ ಮಂಡಳಿಗೆ ನೀಡಿದ ಈ ಜಾಗಗಳ ಮಾರುಕಟ್ಟೆಯ ಮೌಲ್ಯ ಸಾವಿರಾರು ಕೋಟಿಯಷ್ಟಿದೆ. ತಿಂಗಳಿಗೆ ನೂರಾರು ಕೋಟಿಯ ಆದಾಯ ಮಂಡಳಿಗೆ ಬರುತ್ತಿದೆ. ದೆಹಲಿಯ ಪ್ರತಿಷ್ಠಿತ ಜಾಗಗಳಲ್ಲಿ ಕಾಂಗ್ರೆಸ್ ಸರಕಾರ ವಕ್ಫ್ ಮಂಡಳಿಗೆ ನೀಡಿರುವ ಜಾಗಗಳಲ್ಲಿ ಒಂದು ಚದರಡಿಗೆ ಸುಮಾರು 70000 ರು. ಮಾರುಕಟ್ಟೆ ಮೌಲ್ಯವಿದೆ.

ಅಸಾಂವಿಧಾನಿಕ ವಾಗಿರುವ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂಬ ಚರ್ಚೆ ಕೇಂದ್ರದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ, ಮುಸಲ್ಮಾನರನ್ನು ಅಲ್ಪಸಂಖ್ಯಾತರೆಂದು ಕರೆದು ಓಲೈಕೆಯ ಮೂಲಕ ಮತ್ತಷ್ಟು ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಧರ್ಮಗಳನ್ನೂ ಮೀರಿ ದೇಶಕ್ಕಾಗಿ ಹೋರಾಡಿದ ಸೈನಿಕರಿಗೆ ಉತ್ತರಾಖಂಡ್ ರಾಜ್ಯದಲ್ಲಿರುವ ವಕ್ಫ್ ಆಸ್ತಿಯನ್ನು ನೀಡಬೇಕೆಂಬ ಸಲಹೆಯು ಸಂಸತ್ತಿನ ಜಂಟಿ ಸದನ ಸಮಿತಿ ಯಲ್ಲಿ ಬಂದಾಗ, ಮುಸಲ್ಮಾನರನ್ನು ಓಲೈಸುವ ಸಲುವಾಗಿ ವಿರೋಧ ಪಕ್ಷಗಳು ಆ ಸಲಹೆಯನ್ನು
ವಿರೋಧಿಸಿವೆ.

ಧರ್ಮದ ಹೆಸರಿನಲ್ಲಿ ವಕ್ಫ್ ಮಂಡಳಿಯು ಅಸಾಂವಿಧಾನಿಕ ಕಾನೂನಿನ ಮೂಲಕ ವಶಪಡಿಸಿಕೊಂಡಿರುವ ಜಾಗ
ಗಳಿಂದ ಬರುತ್ತಿರುವ ಆದಾಯದಿಂದ ಮುಸಲ್ಮಾನರ ಅಭಿವೃದ್ಧಿಯಾಗಿದ್ದರೆ, ಇಂದಿಗೂ ಬಡ ಮುಸಲ್ಮಾನರು ಮೂಲಭೂತ ಸೌಕರ್ಯಗಳಿಗೆ ಸರಕಾರವನ್ನು ಯಾಕೆ ಅವಲಂಬಿಸಿದ್ದಾರೆ? ಸರಕಾರಗಳು ಯಾಕೆ ಸಾವಿರಾರು
ಕೋಟಿ ಹಣವನ್ನು ವರ್ಷದ ಆಯವ್ಯಯದಲ್ಲಿ ಮುಸಲ್ಮಾನರ ಅಭಿವೃದ್ಧಿಗೆ ಮೀಸಲಿಡಬೇಕು? ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮಂತ್ರಿ ಖಾತೆಯನ್ನು ರಚಿಸಲಾಗಿದೆ.

ವಕ್ಫ್ ಕಾನೂನಿನನ್ವಯ ವಶಪಡಿಸಿ ಕೊಂಡಿರುವ ಭೂಮಿಯಲ್ಲಿ, ವಕ್ಫ್ ಮಂಡಳಿಯಡಿಯಲ್ಲಿ ನಡೆದಿರುವ ಅಕ್ರಮ ಗಳ ಬಗ್ಗೆ ಅನ್ವರ್ ಮಾಣಿಪ್ಪಾಡಿ ಆಯೋಗ ತನ್ನ ವರದಿಯನ್ನು ನೀಡಿದೆ. ಕೇಂದ್ರದಲ್ಲಿ ನಡೆಯುತ್ತಿರುವ ವಕ್ ಕಾನೂನಿನ ತಿದ್ದುಪಡಿಯ ಸಭೆಗೆ ಅನ್ವರ್ ಮಾಣಿಪ್ಪಾಡಿ ಹಾಜರಾಗಿ ವಕ್ಫ್ ಮಂಡಳಿಯಲ್ಲಾಗಿರುವ ಅಕ್ರಮಗಳ ಕುರಿತು ವಿವರಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕರು ವಕ್ಫ್ ಮಂಡಳಿಯಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿಯಾಗಿರುವ ವಿಷಯವನ್ನು ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ. ಮುಸಲ್ಮಾನರ ಓಲೈಕೆಯ ಹೆಸರಿನಲ್ಲಿ ವಕ್ಫ್ ಮಂಡಳಿಗೆ ಹಿಂದೂಗಳ ಆಸ್ತಿಯನ್ನು ಸೇರಿಸಿ, ನಂತರ ಕೆಲವು ಮುಸ್ಲಿಂ ನಾಯಕರು ವಕ್ಫ್ ಮಂಡಳಿಗೆ ಸೇರಿದ ಆಸ್ತಿಗಳನ್ನು ಅನುಭವಿಸು ತ್ತಿದ್ದಾರೆ.

ವಕ್ಫ್ ಮಂಡಳಿ ಭಾರತದ ಮೂರನೇ ಶ್ರೀಮಂತ ಮಂಡಳಿಯಾಗಿದೆ. ಇಸ್ಲಾಂ ಧರ್ಮಕ್ಕೆ ಸೀಮಿತವಾಗಿರುವ ಶ್ರೀಮಂತ
ಧಾರ್ಮಿಕ ಮಂಡಳಿಯಿಂದ ಬಡ ಮುಸಲ್ಮಾನನಿಗೆ ಉಪಯೋಗವಾಗುತ್ತಿಲ್ಲ. ಕೇಂದ್ರ ಸರಕಾರ ಪ್ರಸ್ತಾಪಿಸಿರುವ
ತಿದ್ದುಪಡಿಯಲ್ಲಿ, ವಕ್ಫ್ ಮಂಡಳಿಯಲ್ಲಿ ಇತರ ಧರ್ಮದವರನ್ನು ಸೇರಿಸಬೇಕೆಂದಿದೆ. ಆದರೆ ಕಾಂಗ್ರೆಸ್‌ನ ಪ್ರಕಾರ
ಮುಸ್ಲಿಮರ ಮಂಡಳಿಯಲ್ಲಿ ಇತರರನ್ನು ಸೇರಿಸಿದರೆ ಅದು ‘ಕೋಮುವಾದ’, ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಇತರ ಧರ್ಮದವರು ಭಾಗಿಯಾದರೆ ಅದು ‘ಜಾತ್ಯತೀತತೆ’.

ಇಸ್ಲಾಂ ಧರ್ಮಕ್ಕೆ ಸೇರಿದ ಭಾರತದ ವಕ್ಫ್ ಮಂಡಳಿ ದೇಶದ ಮೂರನೇ ಶ್ರೀಮಂತ ಮಂಡಳಿಯಾಗಿದ್ದು, ಸುಮಾರು 3 ಲಕ್ಷ ಕೋಟಿ ರುಪಾಯಿಗೂ ಮೀರಿದ ಮಾರುಕಟ್ಟೆ ಮೌಲ್ಯವಿರುವ ಅಸ್ತಿಯನ್ನು ಹೊಂದಿದೆ. ಈ ಮಟ್ಟದ ಆಸ್ತಿ ಹೊಂದಿರುವ ವಕ್ಫ್ ಮಂಡಳಿ ಸಂಪೂರ್ಣವಾಗಿ ಇಸ್ಲಾಂ ಧರ್ಮಕ್ಕೆ ಸೇರಿರುವುದರಿಂದ, ಭಾರತದ ಶ್ರೀಮಂತ
ಧರ್ಮ ಇಸ್ಲಾಂ ಎಂದು ಖಂಡಿತವಾಗಿ ಹೇಳಬಹುದು. ದೇಶದ ಶ್ರೀಮಂತ ಧರ್ಮದವರನ್ನು ಅಲ್ಪ ಸಂಖ್ಯಾತರೆಂದು
ಕರೆಯುವುದು ಎಷ್ಟು ಸೂಕ್ತವೆಂಬ ಚರ್ಚೆಗಳು ಕೂಡ ಮತ್ತೊಂದೆಡೆ ಆರಂಭವಾಗಿವೆ.

ಇದನ್ನೂ ಓದಿ: Mohan Vishwa Column: ಪಶ್ಚಿಮ ಏಷ್ಯಾ ಜಾಗತಿಕ ಪಟ್ಟ !