ಲಕ್ನೋ: ದೀಪಾವಳಿ(Deepawali Festival) ಸಂದರ್ಭದಲ್ಲಿ ಜೂಜು ಅಡ್ಡೆಯ ಬಳಿ ಸಶಸ್ತ್ರಧಾರಿಗಳ ಗುಂಪೊಂದು ಪೊಲೀಸರ ಮೇಲೆ ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ನಡೆದಿದೆ. ಈ ಭೀಕರ ದಾಳಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ಇಲ್ಲಿನ ಪ್ರೇಮ್ ನಗರ (Prem Nagar) ಪ್ರದೇಶದಲ್ಲಿ ಅನಧಿಕೃತ ಜೂಜು ನಡೆಯುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಗುಂಪು ಉದ್ರಿಕ್ತಗೊಂಡು ಪೊಲೀಸ್ ಅಧಿಕಾರಿಗಳ ಮೇಲೆ ದೊಣ್ಣೆ ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಸ್ಥಳೀಯ ಮೂಲಗಳಿಂದ ಲಭ್ಯವಾಗಿದೆ. ಈ ದಾಳಿಯ ವಿಡಿಯೋಗಳು ಇದೀಗ ಸೊಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಕಾಣುವಂತೆ ದೊಣ್ಣೆ ಹಿಡಿದುಕೊಂಡಿರುವ ಜನರ ಗುಂಪು ಪೊಲೀಸರನ್ನು ಹಿಡಿದು ಥಳಿಸುತ್ತಿರುವ ಆತಂಕಕಾರಿ ದೃಶ್ಯ ಸೆರೆಯಾಗಿದೆ. ದಾಳಿಕೋರರಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರು ಹತ್ತಿರದಲ್ಲೇ ಇದ್ದ ಗುಡಿಯೊಂದರೊಳಗೆ ನುಗ್ಗಿ ರಕ್ಷಣೆ ಪಡೆದುಕೊಳ‍್ಳುವ ದೃಶ್ಯ ಇದರಲ್ಲಿ ದಾಖಲಾಗಿದೆ.
⚠️Trigger Warning: Disturbing Visuals.
— Hate Detector 🔍 (@HateDetectors) November 1, 2024
In #UttarPradesh's #Bareilly, policemen acting on an illegal betting tip off were attacked by the suspects using stones and sticks. pic.twitter.com/ZxZvVzlsQM
ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡ ಪೊಲೀಸ್ ಅಧಿಕಾರಿಗಳನ್ನು ಸಬ್ ಇನ್ಸ್ಪೆಕ್ಟರ್ ಶುಭಮ್ ಚೌಧರಿ ಮತ್ತು ಕಾನ್ಸ್ಟೇಬಲ್ ಮನೀಶ್ ಎಂದು ಗುರುತಿಸಲಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಬಳಿಕ ಪೊಲೀಸರು ದಾಳಿಕೋರರ ಮೇಲೆ ಗಂಭೀರ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇನ್ನೊಂದೆಡೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಲ್ಲೆಕೋರರನ್ನು ಗುರುತಿಸಿ ಅವರನ್ನು ಬಂಧಿಸುವ ಕಾರ್ಯದಲ್ಲೂ ಸಹ ಪೊಲೀಸ್ ಪಡೆ ನಿರತವಾಗಿದೆ.
ಈ ಸುದ್ದಿಯನ್ನೂ ಓದಿ: AP Dhillon: ಸಲ್ಲು ಜತೆ ನಟಿಸಿದ್ದ ಪಂಜಾಬಿ ಗಾಯಕನ ಮೇಲೂ ಬಿಷ್ಣೋಯ್ ಗ್ಯಾಂಗ್‌ನಿಂದ ಡೆಡ್ಲಿ ಅಟ್ಯಾಕ್! 2 ತಿಂಗಳ ನಂತ್ರ ವಿಡಿಯೋ ವೈರಲ್