Saturday, 2nd November 2024

US imposes sanction: 15 ಭಾರತೀಯ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ; ಕಾರಣ ಏನು?

US sanctions

ವಾಷಿಂಗ್ಟನ್: ರಷ್ಯಾದ ಮಿಲಿಟರಿ-ಕೈಗಾರಿಕಾ ನೆಲೆಯನ್ನು ಬೆಂಬಲಿಸಿದ ಆರೋಪದಲ್ಲಿ ಭಾರತದ 15 ಕಂಪನಿಗಳ ಮೇಲೆ (Indian based firms) ಮೇಲೆ ಅಮೆರಿಕ ನಿರ್ಬಂಧ(US imposes sanction)ಗಳನ್ನು ವಿಧಿಸಿದೆ. ಒಟ್ಟು ಸೇರಿದಂತೆ 275 ವ್ಯಕ್ತಿಗಳು ಮತ್ತು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಚೀನಾ, ಸ್ವಿಟ್ಜರ್‌ಲ್ಯಾಂಡ್, ಥೈಲ್ಯಾಂಡ್ ಮತ್ತು ಟರ್ಕಿಯ ಕಂಪನಿಗಳು ರಷ್ಯಾಕ್ಕೆ ಸುಧಾರಿತ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಪೂರೈಸಿದ್ದಕ್ಕಾಗಿ ನಿರ್ಬಂಧ ವಿಧಿಸುವ ಮೂಲಕ ಕಿವಿ ಹಿಂಡಿದೆ.

ಇನ್ನು ಈ ಬಗ್ಗೆ ಅಮೆರಿಕದ ಖಜಾನೆ ಇಲಾಖೆ ಉಪ ಕಾರ್ಯದರ್ಶಿ ವಾಲಿ ಅಡೆಯೆಮೊ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ನಮ್ಮ ಮಿತ್ರರಾಷ್ಟ್ರಗಳು ಉಕ್ರೇನ್ ವಿರುದ್ಧ ತನ್ನ ಕಾನೂನುಬಾಹಿರ ಮತ್ತು ಅನೈತಿಕ ಯುದ್ಧವನ್ನು ನಡೆಸಲು ಅಗತ್ಯವಿರುವ ನಿರ್ಣಾಯಕ ಉಪಕರಣಗಳು ಮತ್ತು ತಂತ್ರಜ್ಞಾನಗಳ ಹರಿವನ್ನು ತಡೆಯಲು ಜಗತ್ತಿನಾದ್ಯಂತ ಕಠಿಣ ಕ್ರಮವನ್ನು ಮುಂದುವರಿಸಿದ್ದೇವೆ. ರಷ್ಯಾಕ್ಕೆ ಸಹಾಯ ಮಾಡುವ ಅಥವಾ ಅವರ ಅದರ ಜತೆ ಸಂಪರ್ಕ ಹೊಂದಿರುವ, ವ್ಯಾಪಾರ ನಂಟನ್ನು ಬೆಳೆಸಿರುವ ವ್ಯಕ್ತಿಗಳು ಮತ್ತು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ ಎಂದು ಅವರು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

ಯುಎಸ್ ಹಲವಾರು ಹಿರಿಯ ರಷ್ಯಾದ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮತ್ತು ರಕ್ಷಣಾ ಕಂಪನಿಗಳನ್ನು ಮತ್ತು ರಷ್ಯಾದ ಭವಿಷ್ಯದ ಇಂಧನ ಉತ್ಪಾದನೆ ಮತ್ತು ರಫ್ತುಗಳನ್ನು ಬೆಂಬಲಿಸುವವರನ್ನು ಗುರಿಯಾಗಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.

ಭಾರತದ ಯಾವೆಲ್ಲಾ ಕಂಪನಿಗಳ ಮೇಲೆ ನಿರ್ಬಂಧ?

ಖಜಾನೆ ಇಲಾಖೆ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಭಾರತ ಮೂಲದ ಕಂಪನಿಗಳು ಅಭರ್ ಟೆಕ್ನಾಲಜೀಸ್ ಮತ್ತು ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಡೆನ್ವಾಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಎಮ್ಸಿಸ್ಟೆಕ್, Galaxy Bearings Ltd, ಆರ್ಬಿಟ್ ಫಿಂಟ್ರೇಡ್ LLP, ಇನ್ನೋವಿಯೊ ವೆಂಚರ್ಸ್, KDG ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಖುಷ್ಬು ಹೋನಿಂಗ್ ಪ್ರೈವೇಟ್ ಲಿಮಿಟೆಡ್.

ಭಾರತೀಯ ಕಂಪನಿಗಳು ಲೋಕೇಶ್ ಮೆಷಿನ್ಸ್ ಲಿಮಿಟೆಡ್, ಪಾಯಿಂಟರ್ ಎಲೆಕ್ಟ್ರಾನಿಕ್ಸ್, RRG ಇಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಶಾರ್ಪ್ಲೈನ್ ​​ಆಟೋಮೇಷನ್ ಪ್ರೈವೇಟ್ ಲಿಮಿಟೆಡ್, ಶೌರ್ಯ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್, ಶ್ರೀಗಿ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೇಯಾ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್.

ಕೆಲವು ತಿಂಗಳ ಹಿಂದೆ ಇರಾನಿಯನ್‌ ಸೇನೆ ಜೊತೆ ಅಕ್ರಮ ವ್ಯಾಪಾರ ವಹಿವಾಟು ಹೊಂದಿರುವ 12ಕ್ಕೂ ಅಧಿಕ ಕಂಪನಿಗಳು, ಹಡುಗುಗಳು ಮತ್ತು ಉದ್ಯಮಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು. ಇದರಲ್ಲಿ ಭಾರತ ಮೂರು ಕಂಪನಿಗಳು ಸೇರಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಷ್ಯಾ-ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಈ ಕಂಪನಿಗಳು, ಹಡಗುಗಳು ಮತ್ತು ವ್ಯಕ್ತಿಗಳು ಇರಾನ್‌ನ ಮಾನವ ರಹಿತ ವೈಮಾನಿಕ ವಾಹನ- ಡ್ರೋನ್‌(UAVs) ಗಳನ್ನು ರಷ್ಯಾಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅಮೆರಿಕದ ಹೇಳಿತ್ತು.

ಇನ್ನು ಇರಾನ್‌ನ ಸಾಗರೋತ್ತರ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿರುವ ಕಂಪನಿಗಳಲ್ಲಿ ಸಹರಾ ಥಂಡರ್‌ ಪ್ರಮುಖವಾಗಿದೆ. ಈ ಕಂಪನಿಗೆ ಭಾರತೀಯ ಮೂಲದ ಮೂರು ಕಂಪನಿಗಳು ಸಹಾಯ ನೀಡುತ್ತಿವೆ. ಹೀಗಾಗಿ ಭಾರತೀಯ ಮೂಲದ ಜೆನ್‌ ಶಿಪ್ಪಿಂಗ್‌, ಪೋರ್ಟ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಮತ್ತು ಸೀ ಆರ್ಟ್‌ ಶಿಪ್‌ ಮ್ಯಾನೇಜ್‌ಮೆಂಟ್‌(OPC) ಪ್ರೈವೆಟ್‌ ಲಿಮಿಟೆಡ್‌ಗೆ ಅಮೆರಿಕ ನಿರ್ಬಂಧ ವಿಧಿಸಿತ್ತು.

ಸಹಾರಾ ಥಂಡರ್‌ ಕಂಪನಿ ಇರಾನ್‌ ಸೇನೆಯ ಪರವಾಗಿ ಇರಾನಿಯನ್‌ ಸರಕುಗಳನ್ನು ಚೀನಾ, ರಷ್ಯಾ ಮತ್ತು ವೆನೆಜುವೆಲಾಗಳಿಗೆ ಸಾಗಾಟ ಮಾಡುತ್ತಿದೆ. ಇದೀಗ ಈ ಕಂಪನಿ ಯುಎಇ ಮೂಲದ ಸೇಫ್ ಸೀಸ್ ಶಿಪ್ ಮ್ಯಾನೇಜ್‌ಮೆಂಟ್ ಎಫ್‌ಜೆಇನ ಕುಕ್ ಐಲ್ಯಾಂಡ್ಸ್-ಫ್ಲ್ಯಾಗ್ಡ್ ನೌಕೆ CHEM (IMO 9240914) ಗಾಗಿ ಭಾರತ ಮೂಲದ ಝೆನ್ ಶಿಪ್ಪಿಂಗ್ ಮತ್ತು ಪೋರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತ ಮೂಲದ ಸೀ ಆರ್ಟ್ ಶಿಪ್ ಮ್ಯಾನೇಜ್‌ಮೆಂಟ್ (OPC) ಪ್ರೈವೇಟ್ ಲಿಮಿಟೆಡ್ ಮತ್ತು ಯುಎಇ ಮೂಲದ ಕಂಪನಿ ಟ್ರಾನ್ಸ್ ಗಲ್ಫ್ ಏಜೆನ್ಸಿ LLC ಸಹಾರಾ ಥಂಡರ್‌ಗೆ ಬೆಂಬಲವಾಗಿ ಹಡಗು ನಿರ್ವಹಣಾ ಸೇವೆಗಳನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡಿದೆ ಎಂದು ಅಮೆರಿಕ ಹೇಳಿದೆ.

ಈ ಸುದ್ದಿಯನ್ನೂ ಓದಿ: Anmol Boshnoi: ಅಮೆರಿಕದಲ್ಲಿ ತಲೆಮರೆಸಿಕೊಂಡಿರುವ ಲಾರೆನ್ಸ್‌ ಬಿಷ್ಣೋಯ್‌ ಸಹೋದರನಿಗೆ ಭಾರೀ ಸಂಕಷ್ಟ- ಶುರುವಾಯ್ತು ಹಸ್ತಾಂತರ ಪ್ರಕ್ರಿಯೆ