Thursday, 21st November 2024

BBK 11: ಧ್ಯಾನ ಮಾಡುವಾಗಲೂ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ ಕುಂದಾಪುರ: ಕಾರಣವೇನು?

Chaithra Kundapura Crying

ಬಿಗ್ ಬಾಸ್ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ಎಲ್ಲ ಸ್ಪರ್ಧಿಗಳಿಗೆ ಭಾವನಾತ್ಮಕವಾಗಿತ್ತು. ವಾರದ ಆರಂಭದಲ್ಲಿ ಬಿಗ್​ ಬಾಸ್ ಸ್ಪರ್ಧಿಗಳನ್ನು ಕನ್ಫೆಷನ್ ರೂಮ್ ಒಳಗೆ ಬರಲು ಹೇಳಿ ತಮ್ಮ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ, ಅದರಲ್ಲೂ ಯಾರ ಮುಂದಿಯೂ ಇಲ್ಲಿಯವರೆಗೆ ಹಂಚಿಕೊಳ್ಳದ ಒಂದು ವಿಚಾರವನ್ನು ಹೇಳಿ ಅಂತ ಹೇಳಿದ್ದರು. ಈ ಸಂದರ್ಭ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಉಗ್ರಂ ಮಂಜು, ಗೋಲ್ಡ್ ಸುರೇಶ್, ತ್ರಿವಿಕ್ರಮ್ ಮುಂತಾದವರು ಕಣ್ಣೀರು ಹಾಕಿದ್ದಾರೆ. ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಬಿಗ್ ಬಾಸ್ ಮತ್ತೊಂದು ಎಮೋಷನಲ್ ವಿಚಾರ ತಂದಿಟ್ಟರು. ಅದೆ ಮನೆಯವರಿಂದ ಪತ್ರದ ಮಾಹಿತಿ. ಬಿಗ್ ಬಾಸ್​ ಮನೆಮಂದಿಗೆ ದೀಪಾವಳಿ ಸರ್ಪೈಸ್​ ನೀಡಿದರು. ಮನೆಯೊಳಗೆ ಬಿಗ್​ ಬಾಸ್​ ಸಿಬ್ಬಂದಿಗಳು ಬರುತ್ತಾರೆ. ಅವರು ಸ್ಪರ್ಧಿಗಳ ಏಕಾಗ್ರತೆ ಬ್ರೇಕ್​ ಮಾಡುವ ಪ್ರಯತ್ನ ಮಾಡುತ್ತಾರೆ. ಬಿಗ್ ಬಾಸ್​​ ಕೊಟ್ಟ ನಿರ್ದಿಷ್ಟ ಸಮಯದವರೆಗೆ ಸ್ಪರ್ಧಿಗಳು ರಿಯಾಕ್ಟ್​​ ಮಾಡದೇ ಸುಮ್ಮನಿದ್ದರೆ, ಆಯ್ದ ಸ್ಪರ್ಧಿಗಳು ಮನೆಯಿಂದ ಬಂದ ಪತ್ರವನ್ನು ಓದಬಹುದು.

ಆದರೆ, ಈ ಚಟುವಟಿಕೆಯಲ್ಲಿ ಚೈತ್ರಾ ಕುಂದಾಪುರ ಅವರಿಗೆ ಹಿನ್ನಡೆ ಆಗಿದೆ. ಚೈತ್ರಾ ಅವರಿಗೆ ಪತ್ರ ಸಿಗಬೇಕೆಂದರೆ ಹೊರಗಿನಿಂದ ಬಂದವರ ಜೊತೆ ಯಾವುದೇ ಮನೆಯ ಸದಸ್ಯ ರಿಯಾಕ್ಷನ್ ನೀಡಬಾರದು. ಆದರೆ ಆಗ ಮನೆಗೆ ಬಂದಿದ್ದ ಅಪರಿಚಿತರಿಗೆ ಮೂರ್ನಾಲ್ಕು ಮಂದಿ ರಿಯಾಕ್ಷನ್ ನೀಡಿಬಿಟ್ಟರು. ಆಗ ಫೌಲ್ ಆಯಿತು. ಹಾಗಾಗಿ, ಚೈತ್ರಾಗೆ ಕುಟುಂಬ ಸದಸ್ಯರಿಂದ ಸಿಗಬೇಕಾಗಿದ್ದ ಪತ್ರ ಸಿಗಲಿಲ್ಲ. ಇದು ಅವರಿಗೆ ತೀವ್ರ ಬೇಸರವನ್ನು ಉಂಟು ಮಾಡಿತು.

ಚೈತ್ರಾ ಅವರು ಬಾತ್‌ ರೂಮ್‌ ಬಳಿ ಹೋಗಿ ಬಿಕ್ಕಿ ಬಿಕ್ಕಿ ಅತ್ತರು. ಈ ಘಟನೆಯನ್ನು ಮನರೆಯಲು ಧ್ಯಾನದ ಮೊರೆ ಕೂಡ ಹೋದರು. ಆದರೆ, ಧ್ಯಾನ ಮಾಡುತ್ತಿರುವಾಗ ಕೂಡ ಅವರ ಕಣ್ಣಿಂದ ನೀರು ಬಂತು. ಒಬ್ಬರೇ ಕುಳಿತು ಅವರು ಕಣ್ಣೀರು ಸುರಿಸಿದ್ದಾರೆ. ಇವರ ಜೊತೆಗೆ ತುಕಾಲಿ ಮಾನಸಾ ಹೆಸರು ಕೂಡ ಇತ್ತು. ಇವರಿಗೂ ಪತ್ರ ಸಿಗಲಿಲ್ಲ. ಹಾಗೆಗೆ ಪತ್ರ ಓದುವ ಅವಕಾಶವನ್ನು ಧನರಾಜ್ ಆಚಾರ್ ಕೂಡ ಕಳೆದುಕೊಂಡರು.

BBK 11: ಇಂದು ಕಿಚ್ಚನ ಮಹತ್ವದ ಪಂಚಾಯಿತಿ: ವಾರದ ಕತೆಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ?