Sunday, 24th November 2024

Viral Video: ಪತಿ ಪ್ರಾಣ ಬಿಟ್ಟಿದ್ದ ಹಾಸಿಗೆಯನ್ನು ಗರ್ಭಿಣಿ ಪತ್ನಿಯಿಂದ ಕ್ಲೀನ್‌ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ; ಶಾಕಿಂಗ್‌ ವಿಡಿಯೋ ವೈರಲ್‌

ಭೋಪಾಲ್: 5 ತಿಂಗಳ ಗರ್ಭಿಣಿಯಿಂದ (pregnant women) ಆಸ್ಪತ್ರೆಯ ಬೆಡ್ ಸ್ವಚ್ಛಗೊಳಿಸಿದ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯು ಹಾಸಿಗೆಯನ್ನು ಸ್ವಚ್ಛಗೊಳಿಸುವ ವೀಡಿಯೊ ವೈರಲ್(Viral Video) ಆಗಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಏನಿದು ಘಟನೆ?

ಗರ್ಭಿಣಿ ಮಹಿಳೆಯ ಪತಿ ಗುಂಡೇಟಿಂದ ಮೃತಪಟ್ಟಿದ್ದು, ಆಸ್ಪತ್ರೆಯ ಬೆಡ್ ನಲ್ಲಿದ್ದ ರಕ್ತವನ್ನು 5 ತಿಂಗಳ ಗರ್ಭಿಣಿಯ ಕೈಯಲ್ಲಿ ಸ್ವಚ್ಛಗೊಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ಆಡಳಿತವು, ಸಾಕ್ಷ್ಯವನ್ನು ಸಂಗ್ರಹಿಸಲು ರಕ್ತವನ್ನು ಬಟ್ಟೆಯಿಂದ ಒರೆಸಲು ಅವಕಾಶ ನೀಡಬೇಕೆಂದು ಮಹಿಳೆ ಕೇಳಿಕೊಂಡಿದ್ದರು ಎಂದು ಹೇಳಿಕೊಂಡಿದೆ.

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ಘಟನೆಯೊಂದರಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ದಿಂಡೋರಿ ಜಿಲ್ಲೆಯ ಲಾಲ್‌ಪುರ್ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಅವರ ಮೂವರು ಪುತ್ರರ ಮೇಲೆ ಗುಂಡು ಹಾರಿಸಲಾಗಿತ್ತು. ತಂದೆ ಮತ್ತು ಒಬ್ಬ ಮಗ ಸ್ಥಳದಲ್ಲೇ ಮೃತಪಟ್ಟರು. ಇಬ್ಬರು ಮಕ್ಕಳಾದ ಶಿವರಾಜ್ ಮತ್ತು ರಾಮರಾಜ್ ಅವರನ್ನು ಗಡಸರಾಯ್ ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಆತ ಮಲಗಿದ್ದ ಬೆಡ್‌ನಲ್ಲಿ ರಕ್ತದ ಕಲೆಗಳಾಗಿದ್ದವು. ಅದನ್ನು ಆತನ ಗರ್ಭಿಣಿ ಪತ್ನಿ ಒರೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕೆಲವು ದಿನಗಳ ಹಿಂದೆ ಒಡಿಶಾದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಒಡಿಶಾದ ಕೇಂದ್ರ ಪಾರಾ ಜಿಲ್ಲೆಯ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡರೂ ಅಲ್ಲಿನ ಅಧಿಕಾರಿ ಗರ್ಭಿಣಿಗೆ ರಜೆ ನೀಡದ ಕಾರಣ ಗರ್ಭದಲ್ಲೇ ಮಗು ಸಾವನ್ನಪ್ಪಿದ ಅಮಾನುಷ ಘಟನೆ ವರದಿಯಾಗಿತ್ತು.

ದೇರಾಬಿಶ್ ಬ್ಲಾಕ್‍ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿ ಬಾರ್ಷಾ ಅವರಿಗೆ ಕೆಲಸದ ಸಮಯದಲ್ಲಿ ಅವಧಿಗೂ ಮೊದಲೇ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತಂತೆ. ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಸ್ನೇಹಲತಾ ಸಾಹೂ ಮತ್ತು ಇತರ ಅಧಿಕಾರಿಗಳ ಬಳಿ ವಿನಂತಿಸಿದ್ದಾರೆ. ಆದರೆ ಅವರು ಮಹಿಳೆಯ ಮನವಿಯನ್ನು ನಿರ್ಲಕ್ಷಿಸಿ , ಕೆಟ್ಟದಾಗಿ ವರ್ತಿಸಿದ್ದರು. ನಂತರ, ಬಾರ್ಷಾ ಅವರ ಸಂಬಂಧಿಕರು ಅವರನ್ನು ಕೇಂದ್ರಪಾರಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರಿಗೆ ಅಲ್ಟ್ರಾಸೌಂಡ್ ಮಾಡಿಸಿದಾಗ ಅವರ ಹೊಟ್ಟೆಯಲ್ಲಿ ಮಗು ಸತ್ತಿದೆ ಎಂಬುದಾಗಿ ತಿಳಿದುಬಂದಿತ್ತು.

ಸಿಡಿಪಿಒ ಅವರ ಮಾನಸಿಕ ಕಿರುಕುಳ ಮತ್ತು ಸಂಪೂರ್ಣ ನಿರ್ಲಕ್ಷ್ಯ ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಸಾಹೂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಕೇಂದ್ರಪಾರಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ನೀಲು ಮೊಹಾಪಾತ್ರ ಅವರು “ದೂರು ಸ್ವೀಕರಿಸಿ ಜಿಲ್ಲಾಡಳಿತವು ಈ ಬಗ್ಗೆ ತನಿಖೆ ನಡೆಸಿದ ನಂತರ ವರದಿ ಸಲ್ಲಿಸುವಂತೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ (ಡಿಎಸ್‍ಡಬ್ಲ್ಯೂಒ) ನಿರ್ದೇಶನ ನೀಡಿತ್ತು.

ಈ ಸುದ್ದಿಯನ್ನೂ ಓದಿ: Viral Video: ವಡಾ ಪಾವ್‌ಗೆ ಕೊರಿಯಾ ಯುವತಿ ಕೊಟ್ಟ ಹೊಗಳಿಕೆ, ರೇಟಿಂಗ್ಸ್‌ ಫುಲ್ ವೈರಲ್‌!