Friday, 22nd November 2024

Yunus Chaudhary: ಮಹಿಳೆಗೆ ಖಾಸಗಿ ಅಂಗ ತೋರಿಸಿ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ನಾಯಕ; ವಿಡಿಯೊ ವೈರಲ್‌

Yunus Chaudhary

ಲಖನೌ: ರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಅಶ್ಲೀಲ ವಿಡಿಯೊ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಕಾಂಗ್ರೆಸ್‌ ನಾಯಕ ಯುನುಸ್ ಚೌಧರಿ (Yunus Chaudhary) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ (Viral Video). ಉತ್ತರ ಪ್ರದೇಶದ ಬಾಗ್ಪತ್‌ನ (Baghpat) ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಯುನುಸ್ ಚೌಧರಿ ತಮ್ಮ ಖಾಸಗಿ ಅಂಗವನ್ನು ಮಹಿಳೆಯ ಮುಂದೆ ಪ್ರದರ್ಶಿಸಿ ಆಕೆಗೆ ಕಿರುಕುಳ ನೀಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸದ್ಯ ಈ ವಿಚಾರ ದೇಶಾದ್ಯಂತ ಸಂಚಲವನ್ನೇ ಸೃಷ್ಟಿಸಿದೆ.

ಸಚಿನ್ ಗುಪ್ತಾ ಎನ್ನುವವರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼಇವರು ಯುನುಸ್ ಚೌಧರಿ. ಉತ್ತರ ಪ್ರದೇಶದ ಬಾಗ್ಪತ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ. ಮೊದಲು ಇವರು ತಮ್ಮ ಖಾಸಗಿ ಅಂಗವನ್ನು ಮಹಿಳೆ ಮುಂದೆ ಪ್ರದರ್ಶಿಸುತ್ತಾರೆ. ಬಳಿಕ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಆಂಟಿ ಬರುತ್ತಾರೆ, ಬಿಟ್ಟು ಬಿಡಿ ಎಂದು ಆಕೆ ಅಂಗಲಾಚುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ಮೊದಲು ಮಹಿಳೆಗೆ ತನ್ನ ಮರ್ಮಾಂಗವನ್ನು ತೋರಿಸಿ, ನಂತರ ಆಕೆ ಜತೆ ಅಸಭ್ಯವಾಗಿ ನಡೆದುಕೊಂಡಿರುವುದು, ಮಹಿಳೆ ತನ್ನನ್ನು ಹೋಗಲು ಬಿಡುವಂತೆ ಕೇಳಿದರೂ ಯುನುಸ್ ಚೌಧರಿ ಆಕೆಯನ್ನು ತಡೆಯುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಯುನುಸ್ ಚೌಧರಿ ಹೇಳಿದ್ದೇನು?

ಈ ವಿಡಿಯೊ ವೈರಲ್‌ ಆಗಿದ್ದು ಕಾಂಗ್ರೆಸ್‌ಗೆ ಮುಜುಗರ ತಂದಿದೆ. ಈ ಬಗ್ಗೆ ಯುನುಸ್ ಚೌಧರಿ ಪ್ರತಿಕ್ರಿಯಿಸಿ, ಇದು ರಾಜಕೀಯ ವಿರೋಧಿಗಳ ಪಿತೂರಿ ಎಂದು ದೂರಿದ್ದಾರೆ. ಎಡಿಟ್ ಮಾಡಿರುವ ವಿಡಿಯೊ ಇದಾಗಿದ್ದು ತನ್ನನ್ನು ರಾಜಕೀಯವಾಗಿ ಮುಗಿಸಲು ವಿರೋಧಿಗಳು ನಡೆಸಿದ ಪಿತೂರಿ ಇದು ಎಂದು ಆರೋಪಿಸಿದ್ದಾರೆ. ಇನ್ನೂ ಅಧಿಕೃತವಾಗಿ ದೂರು ದಾಖಲಿಸದಿದ್ದರೂ ವಿಡಿಯೊವನ್ನು ಪ್ರಸಾರ ಮಾಡಿದವರನ್ನು ಗುರುತಿಸುವಂತೆ ಪೊಲೀಸರಿಗೆ ಮೌಖಿಕವಾಗಿ ವಿನಂತಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿ, ತನಿಖೆ ನಡೆಸಲಾಗುವುದು ಮತ್ತು ಅದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದಾಗ್ಯೂ ಪಕ್ಷದ ಹೈಕಮಾಂಡ್ ತ್ವರಿತ ಕ್ರಮ ಕೈಗೊಂಡು ಜಿಲ್ಲಾಧ್ಯಕ್ಷ ಯೂನುಸ್ ಚೌಧರಿ ಅವರನ್ನು ಹುದ್ದೆಯಿಂದ ಕೆಳಗಿಳಿಸಿದೆ.

ನೆಟ್ಟಿಗರು ಏನಂದ್ರು?

ಸದ್ಯ ವಿಡಿಯೊ ನೋಡಿದ ನೆಟ್ಟಿಗರು ಯುನುಸ್ ಚೌಧರಿ ವಿರುದ್ಧ ಕಿಡಿ ಕಾರಿದ್ದಾರೆ. ʼʼಅತ್ಯಂತ ನಾಚಿಗೇಡಿನ ಸಂಗತಿ. ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಒಬ್ಬರು ಆಗ್ರಹಿಸಿದ್ದಾರೆ. ʼʼಇದು ಅತ್ಯಂತ ಗಂಭೀರ ವಿಷಯವಾಗಿದೆ. ಇಂತಹ ಘಟನೆಗಳು ಸಾಮಾಜಿಕ ನೈತಿಕತೆಯನ್ನು ಉಲ್ಲಂಘಿಸುವುದಲ್ಲದೆ ನಮ್ಮ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಘನತೆಗೆ ದೊಡ್ಡ ಬೆದರಿಕೆ. ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ಅಥವಾ ಕಿರುಕುಳವನ್ನು ಸಹಿಸಬಾರದು. ಕಠಿಣ ಕ್ರಮ ತೆಗೆದುಕೊಳ್ಳಬೇಕುʼʼ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಬಾಗ್ಪತ್‌ ಪೊಲೀಸರು ಪ್ರತಿಕ್ರಿಯಿಸಿ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೂಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಜೀವ ಕಸಿದ ‘ಯಮಸ್ವರೂಪಿ’ ಕಾರು – ಅಪ್ರಾಪ್ತನಿಂದ ನಡೆಯಿತೇ ಈ ಅಪಘಾತ..!?