Tuesday, 5th November 2024

Aishwarya Rai: ಐಶ್ವರ್ಯ ಬರ್ತ್‌ ಡೇಗೆ ಬಚ್ಚನ್‌ ಫ್ಯಾಮಿಲಿಯಿಂದ ನೋ ವಿಶಸ್‌… ಬಿಗ್‌ ಬಿಯ ಹಳೆಯ ಟ್ವೀಟ್‌ ವೈರಲ್‌! ಈಗ ಏನೂ ಸರಿ ಇಲ್ಲ ಅಂತಿದ್ದಾರೆ ಫ್ಯಾನ್ಸ್

Aishwarya Rai

ಮುಂಬೈ: ಬಾಲಿವುಡ್‌ನ ಟಾಪ್‌ ನಟಿ ಐಶ್ವರ್ಯ ರೈ(Aishwarya Rai) ನವೆಂಬರ್‌ 1 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಐಶ್ವರ್ಯ ಹುಟ್ಟುಹಬ್ಬಕ್ಕೆ ಬಾಲಿವುಡ್‌ (Bollywood) ಮಂದಿ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯ ಹರಿದು ಬಂದಿದೆ. ಆದರೆ ಬಚ್ಚನ್‌ ಫ್ಯಾಮಿಲಿ ಮಾತ್ರ ಎಲ್ಲಿಯೂ ಐಶ್ವರ್ಯಗೆ ಶುಭಾಶಯ ಕೋರದಿರುವುದು ಎಲ್ಲರಿಗೂ ಅಭಿಷೇಕ್‌ ಬಚ್ಚನ್‌ ಜತೆಗಿನ ವಿಚ್ಛೇದನದ ವದಂತಿಗೆ ಮತ್ತಷ್ಟು ಪುಷ್ಟಿಕೊಟ್ಟಿದೆ. ಅಭಿಷೇಕ್‌ ಬಚ್ಚನ್‌ (Abhishek Bachchan) ಕೂಡ ಐಶ್ವರ್ಯ ವಿಶ್‌ ಮಾಡದೆ ಇರುವುದು ಐಶ್‌ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಇದರ ನಡುವೆ 2010ರಲ್ಲಿ ಅಮಿತಾಬ್ (Amitabh Bachchan) ಬಚ್ಚನ್ ಮಾಡಿದ್ದ ಟ್ವೀಟ್‌ ವೈರಲ್‌ ಆಗುತ್ತಿದ್ದು ಅಭಿಮಾನಿಗಳು ಎಲ್ಲೆಡೆ ಹಂಚಿಕೊಂಡಿದ್ದಾರೆ.

ಹತ್ತು ವರ್ಷ ಹಿಂದೆ ಹೇಗಿತ್ತು ಈಗ ಇವರ ಸಂಬಂಧ ಹೇಗಿದೆ ಎಂಬುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. 2010ರಲ್ಲಿ ಅಮಿತಾಬ್‌ ಬಚ್ಚನ್‌ ಐಶ್ವರ್ಯ ಹುಟ್ಟು ಹಬ್ಬದ ದಿನ ಟ್ವೀಟ್‌ ಮಾಡಿದ್ದು, “ಐಶ್ವರ್ಯಾ ಜನ್ಮದಿನದಂದು ಶುಭ ಕೋರಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಶುಭಾಶಗಳನ್ನು ಅವಳಿಗೆ ತಲುಪಿಸಿದ್ದೇವೆ ಅವಳು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾಳೆ” ಎಂದು ಹೇಳಿದ್ದರು. ನಂತರ ಮತ್ತೊಂದು ಟ್ವೀಟ್‌ ಮಾಡಿ ತಾಜ್‌ನಲ್ಲಿ ಫ್ಯಾಮಿಲಿ ಡಿನ್ನರ್‌ ನಡೆಯಿತು ಎಂದು ಹೇಳಿದ್ದರು. ಇಂತಹ ಆತ್ಮೀಯ ಸಂಬಂಧ ಇತ್ತೀಚಿನ ಕೆಲವು ದಿನಗಳಲ್ಲಿ ಕಣ್ಮರೆಯಾಗಿದೆ.

ಅಭಿಷೇಕ್‌ ಹಾಗೂ ಐಶ್ವರ್ಯ ಮದುವೆಯಾಗಿ 17 ವರ್ಷಗಳು ಕಳೆದಿವೆ. ಈ ಜೋಡಿಗೆ ಆರಾಧ್ಯ ಬಚ್ಚನ್ ಎಂಬ ಮಗಳಿದ್ದಾಳೆ. ಕಳೆದ ಎರಡು ವರ್ಷಗಳಿಂದ ದಂಪತಿಯ ನಡುವೆ ಏನೂ ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆದಯುತ್ತಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಿವೆ. ಅದಕ್ಕೆ ಪುಷ್ಟಿ ಎನ್ನುವಂತೆ ಇತ್ತೀಚೆಗೆ ನಡೆದ ಅನಂತ್‌ ಅಂಬಾನಿ ಮದುವೆಗೆ ಐಶ್ವರ್ಯ ಮಗಳ ಜೊತೆ ಬಂದಿದ್ದರೆ ಅಭಿಷೇಕ್‌ ತನ್ನ ಕುಟುಂಬದವರೊಂದಿಗೆ ಬಂದಿದ್ದರು. ಇನ್ಸ್ಟಾಗ್ರಾಂನಲ್ಲಿ ವಿಚ್ಛೇದನ ಸಂಬಂಧಿತ ಪೋಸ್ಟ್‌ ಒಂದಕ್ಕೆ ಅಭಿಷೇಕ್‌ ಲೈಕ್‌ ಮಾಡಿದ್ದು ಮತ್ತಷ್ಟು ಚರ್ಚೆ ಹುಟ್ಟು ಹಾಕಿತ್ತು.

ಇದನ್ನೂ ಓದಿ : Abhishek-Aishwarya Fight: ಸಾರ್ವಜನಿಕವಾಗಿಯೇ ಕಿತ್ತಾಡಿಕೊಂಡ ಅಭಿಷೇಕ್‌ ಬಚ್ಚನ್‌-ಐಶ್ವರ್ಯಾ ರೈ

ಇವರಿಬ್ಬರ ವಿಚ್ಛೇದನಕ್ಕೆ ಅಭಿಷೇಕ್ ಬಚ್ಚನ್ ತಾಯಿ ಜಯಾ ಬಚ್ಚನ್ ಕೂಡ ಒಂದು ರೀತಿ ಕಾರಣ ಎನ್ನುತ್ತಿದ್ದಾರೆ. ಆದರೆ, ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬೇರೆಯದ್ದೆ ಸುದ್ದಿ ಹರಿದಾಡುತ್ತಿದೆ. ಅಭಿಷೇಕ್ ಹಾಗೂ ನಿಮ್ರತ್ ಕೌರ್ ಜೊತೆಗಿನ ಸಂಬಂಧದಿಂದ ಐಶ್ ಕೋಪಗೊಂಡಿದ್ದು, ನಟಿ ಐಶ್ವರ್ಯಾ ಹಲವಾರು ತಿಂಗಳುಗಳಿಂದ ಅಭಿಷೇಕ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.