Sunday, 24th November 2024

Viral News: ನೀನು ಪ್ಯಾಂಟ್‌ನಲ್ಲೇ ಮೂತ್ರ ಮಾಡ್ಕೋತೀಯಾ… ಸಿನಿಮಾವನ್ನು ಟೀಕಿಸಿದ ನೆಟ್ಟಿಗನಿಗೆ ಖ್ಯಾತ ನಟನಿಂದ ಬೆದರಿಕೆ

Viral video

ತಿರುವನಂತಪುರಂ: ಸಾಮಾಜಿಕ ಜಾಲತಾಣ ಎಂಬುದು ಕಾಡ್ಗಿಚ್ಚಿನಂತೆ. ಯಾವುದೇ ಒಂದು ಸುದ್ದಿ ಅಲ್ಲಿ ಶೇರ್‌ ಆದರೆ ಕ್ಷಣಾರ್ಧದಲ್ಲಿ ಪ್ರಪಂಚದ ಮೂಲೆ ಮೂಲೆಗೂ ಹಬ್ಬಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾ ಎಲ್ಲಾ ಕ್ಷೇತ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಸಿನಿಮಾ ಅಥವಾ ಮನೋರಂಜನಾ ಕ್ಷೇತ್ರದ ಅವಿಭಾಜ್ಯ ಅಂಗವಾಗಿಯೇ ಬೆಳೆದು ನಿಂತಿದೆ. ಯಾವುದೇ ಸಿನಿಮಾ ಬಂದರೂ ನೆಟ್ಟಿಗರು ಕೊಡುವ ರಿಯಾಕ್ಷನ್‌ ಬಹಳ ಬೇಗ ಜನರನ್ನು ತಲುಪುತ್ತದೆ. ಇದೀಗ ಇಂತಹದ್ದೇ ಒಂದು ಸಾಮಾಜಿಕ ಜಾಲತಾಣದ ವಿಮರ್ಶೆ ಖ್ಯಾತ ನಟರೊಬ್ಬ(Joju George) ತಾಳ್ಮೆ ಕೆಡಿಸಿದೆ. ತೀರ ತಾಳ್ಮೆ ಕೆಟ್ಟ ನೆಟ್ಟಿಗನೊಬ್ಬನನ್ನು ಹೀನಾಯಮಾನವಾಗಿ ಜಾಡಿಸಿದ್ದಾರೆ. ಇದೀಗ ಅವರ ಕಾಲ್‌ ರೆಕಾರ್ಡಿಂಗ್‌ ಎಲ್ಲೆಡೆ ವೈರಲ್‌(Viral News) ಆಗುತ್ತಿದೆ.

ಏನಿದು ಘಟನೆ?

ಇತ್ತೀಚೆಗೆ ಪಾನಿ ಚಿತ್ರದಲ್ಲಿ ನಟಿಸಿದ ಮಲಯಾಳಂ ನಟ ಜೋಜು ಜಾರ್ಜ್ ಅವರು ನೆಟಿಜನ್‌ನೊಂದಿಗೆ ಮಾಡಿದ ಕರೆಯ ರೆಕಾರ್ಡಿಂಗ್ ಆನ್‌ಲೈನ್‌ನಲ್ಲಿ ವೈರಲ್ ಆಗೊದೆ. ಆಡಿಯೋ ಕ್ಲಿಪ್‌ನಲ್ಲಿ, ಪಾಣಿಗೆ ನಕಾರಾತ್ಮಕ ವಿಮರ್ಶೆಯನ್ನು ನೀಡಿದ್ದಕ್ಕಾಗಿ ಜಾರ್ಜ್‌ ನೆಟಿಜನ್‌ಗೆ ಬೆದರಿಕೆ ಹಾಕುವುದನ್ನು ಕೇಳಬಹುದು. ಇನ್ನು ಈ ಸಿನಿಮಾವನ್ನು ಸ್ವತಃ ಜಾರ್ಜ್ ನಿರ್ದೇಶಿಸಿದ್ದಾರೆ.

ಆದರ್ಶ್ ಎಚ್‌ಎಸ್ ಎಂಬ ನೆಟ್ಟಿಗ ತನ್ನ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಅತ್ಯಂತ ಕಳಪೆಯಾಗಿ ತೋರಿಸಿರುವುದಕ್ಕೆ ಪಾನಿ ಸಿನಿಮಾವನ್ನು ಟೀಕಿಸಿದ್ದಾರೆ. ಇದರಿಂದ ಕೆಂಡಾಮಂಡಲರಾದ ಜಾರ್ಜ್‌ಗೆ ಆತನ ಫೋನ್‌ಗೆ ಕರೆ ಮಾಡಿದರು ಮತ್ತು ವಿಮರ್ಶೆಯ ಬಗ್ಗೆ ಅವರನ್ನು ಪ್ರಶ್ನಿಸಿದರು. “ನನ್ನನ್ನು ಎದುರಿಸುವ ಧೈರ್ಯವಿದೆಯೇ?” ಎಂದು ಆದರ್ಶನನ್ನು ಕೇಳಿದರು.

ಚಿತ್ರದಲ್ಲಿನ ಅತ್ಯಾಚಾರದ ದೃಶ್ಯವನ್ನು ಆ ರೀತಿಯಲ್ಲಿ ಚಿತ್ರಿಸಬಾರದಿತ್ತು ಎಂದು ಆದರ್ಶ್ ಪ್ರತಿಕ್ರಿಯಿಸಿದಾಗ, ಜಾರ್ಜ್ ಪ್ರತಿಕ್ರಿಯಿಸಿದರು, “ದಯವಿಟ್ಟು ನನಗೆ ಕಲಿಸಿ. ನಾನು ನಿಮ್ಮ ಬಳಿಗೆ ಬರುತ್ತೇನೆ. ನೀವು ನಾಳೆ ಎಲ್ಲಿರುತ್ತೀರಿ? ನಾನೇ ಅಲ್ಲಿಗೆ ಬರುತ್ತೇನೆ ಎಂದಿದ್ದಾರೆ. ಆದರ್ಶ್ ನಂತರ ಜಾರ್ಜ್ ಅವರಿಗೆ ಇಷ್ಟು ಆತ್ಮವಿಶ್ವಾಸವಿದ್ದರೆ ತಮ್ಮ ಚಿತ್ರದ ಬಗ್ಗೆ ಒಂದು ನಕಾರಾತ್ಮಕ ವಿಮರ್ಶೆ ಬಗ್ಗೆ ಏಕೆ ಇಷ್ಟೊಂದು ತಲೆಗೆಡಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸಿದ ಜಾರ್ಜ್‌ “ಮಗು, ನಾನು ನಿಜವಾಗಿಯೂ ನಿನ್ನ ಟೀಕೆಗೆ ತಲೆಗೆಡಿಸಿಕೊಂಡಿದ್ದರೆ ನೀನು ಇಷ್ಟು ಹೊತ್ತಿಗೆ ನಿನ್ನ ಪ್ಯಾಂಟ್‌ನಲ್ಲಿ ಮೂರ್ತ ಮಾಡಿಕೊಳ್ಳುವಂತೆ ಮಾಡುತ್ತಿದೆ ಎಂದು ಬೆದರಿಕೆವೊಡ್ಡುತ್ತಿರುವುದು ಆಡಿಯೋ ಕ್ಲಿಪ್‌ನಲ್ಲಿ ಕೇಳಬಹುದಾಗಿದೆ.

ಆಡಿಯೋ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ಜಾರ್ಜ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಂದು ಚಿತ್ರದ ಬಗ್ಗೆ ತಮ್ಮ ವಿಮರ್ಶೆಯನ್ನು ಹಂಚಿಕೊಳ್ಳಲು ನೆಟ್ಟಿಗರಿಗೆ ಎಲ್ಲಾ ರೀತಿಯ ಹಕ್ಕು ಇದೆ ಎಂದು ಬುದ್ದಿ ಹೇಳಿದ್ದಾರೆ. ಟೀಕಿಸಿದರು. ಇದಾದ ಬಳಿಕ ಸ್ಪಷ್ಟನೆ ಕೊಟ್ಟ ಜಾರ್ಜ್‌, ಆದರ್ಶ್ ಅವರನ್ನು ವೈಯಕ್ತಿಕವಾಗಿ ತಿಳಿದಿಲ್ಲ ಮತ್ತು ಅವರ ವಿರುದ್ಧ ಯಾವುದೇ ದ್ವೇಷವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Director Guruprasad: ‘ಮಠ’, ‘ಎದ್ದೇಳು ಮಂಜುನಾಥ’; ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದ ಗುರುಪ್ರಸಾದ್‌-ಜಗ್ಗೇಶ್‌