ನವದೆಹಲಿ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಪ್ರತಿಸ್ಪರ್ಧಿ ಬಾಂಬಿಹಾ ಗ್ಯಾಂಗ್ನ (Bambiha Gang) ಸದಸ್ಯರು ಇತ್ತೀಚೆಗೆ ದೆಹಲಿಯ (Delhi Firing) ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಉದ್ಯಮಿ ಮನೆ ಹೊರಗೆ ಬೈಕ್ ನಿಲ್ಲಿಸಿ ಕೆಲ ಕಾಲ ಅಲ್ಲೇ ನಿಂತ ದುಷ್ಕರ್ಮಿಗಳು ಬಾಂಬಿಹಾ ಗ್ಯಾಂಗ್ ಎಂದು ಚೀಟಿಯಲ್ಲಿ ಬರೆದು ಮನೆ ಒಳಗಡೆ ಎಸೆದಿದ್ದರು. ನಂತರ ಎಂಟು ಸುತ್ತು ಗುಂಡು ಹಾರಿಸಿದ್ದರು. ದಾಳಿಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿತ್ತು.
ಅಕ್ಟೋಬರ್ 26 ರಂದು ರಾತ್ರಿ 8.40 ರ ಸುಮಾರಿಗೆ ವಾಯುವ್ಯ ದೆಹಲಿಯ ರಾಣಿ ಬಾಗ್ನಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ಬಾಂಬಿಹಾ ಗ್ಯಾಂಗ್ನ ಸದಸ್ಯರೆಂದು ತಿಳಿದು ಬಂದಿದೆ. ಉದ್ಯಮಿಯೊಬ್ಬರಿಗೆ 15 ಕೋಟಿ ರೂ. ಬೇಡಿಕೆ ಇಟ್ಟಿದ್ದರೆಂದು ತಿಳಿದು ಬಂದಿದೆ. ಬಾಂಬಿಹಾ ಗ್ಯಾಂಗ್ನನ್ನು ಗ್ಯಾಂಗ್ಸ್ಟರ್ ಬಿಷ್ಣೋಯಿ ಗ್ಯಾಂಗ್ನ ವಿರೋಧಿ ಗ್ಯಾಂಗ್ ಎನ್ನಲಾಗಿದೆ. ಸದ್ಯ ಗುಂಡಿನ ದಾಳಿ ನಡೆಸಿದವರನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
बिजनेस मैन के घर शूटरों ने की फायरिंग
— NDTV India (@ndtvindia) November 3, 2024
लॉरेंस बिश्नोई के एंटी बम्बिहा गैंग ने 15 करोड़ की रंगदारी के लिए 26 अक्टूबर को दिल्ली के रानी बाग इलाके में बिजनेस मैन के घर फायरिंग करवाई थी. शूटर ने फायरिंग का वीडियो भी बनाया और ये वीडियो शूटर ने अमेरिका भेजा था. स्पेशल सेल ने दोनों… pic.twitter.com/XmmAJHJ3YI
ಆರೋಪಿಗಳ ಚಲನವಲದ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಅಕ್ಟೋಬರ್ 28 ಮತ್ತು 29 ರ ಮಧ್ಯದಲ್ಲಿ ಆರೋಪಿಗಳು ತಮ್ಮ ಸಹಚರನ್ನು ಭೇಟಿಯಾಗಲು ಕಾಕ್ರೋಲಾ ಪ್ರದೇಶಕ್ಕೆ ಹೋಗುತ್ತಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಕ್ರೋಲಾ ಡ್ರೈನೇಜ್ ರಸ್ತೆಯ ಬಳಿ ಮಧ್ಯರಾತ್ರಿ 2:15 ರ ಸುಮಾರಿಗೆ ದಾಳಿ ನಡೆಸಿದ್ದರು. ಬೈಕ್ನಲ್ಲಿ ಬಂದ ಆರೋಪಿಗಳಿಗೆ ಪೊಲೀಸರು ನಿಲ್ಲುವಂತೆ ಸೂಚನೆ ನೀಡಿದರು. ಆಗ ಆರೋಪಿಗಳು ಎಸ್ಕೇಪ್ ಆಗಲು ಯತ್ನಸಿದ್ದರು. ನಂತರ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಲು ಪ್ರಯತ್ನಪಟ್ಟಿದ್ದು, ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯೊಬ್ಬನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : Anmol Boshnoi: ಅಮೆರಿಕದಲ್ಲಿ ತಲೆಮರೆಸಿಕೊಂಡಿರುವ ಲಾರೆನ್ಸ್ ಬಿಷ್ಣೋಯ್ ಸಹೋದರನಿಗೆ ಭಾರೀ ಸಂಕಷ್ಟ- ಶುರುವಾಯ್ತು ಹಸ್ತಾಂತರ ಪ್ರಕ್ರಿಯೆ
ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಯುತ್ತಿದೆ. ಬಂಧಿತ ಅರೋಪಿಗಳನ್ನು ಬಿಲಾಲ್ ಅನ್ಸಾರಿ (22) ಮತ್ತು ಶುಹೇಬ್ (21) ಎಂದು ಗುರುತಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಾಗಿದೆ. ಸದ್ಯ ಜೈಲಿನಲ್ಲಿರುವ ಕೌಶಲ್ ಚೌಧರಿ ನೇತೃತ್ವದಲ್ಲಿ ಈ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ. ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಹ್ಯತೆಗೆ ಇವರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.