Sunday, 24th November 2024

Viral News: ಕಾಶ್ಮೀರದ ದೀಪಾವಳಿ ನೋಡಿ ನೋವಾಯ್ತು; ಭಾರಿ ಸದ್ದು ಮಾಡುತ್ತಿರುವ ಮುಸ್ಲಿಂ ಬಾಲಕನ ವಿಡಿಯೊ ಇಲ್ಲಿದೆ ನೋಡಿ

ಶ್ರೀನಗರ: ಭಾರತ ಸೇರಿದಂತೆ ವಿಶ್ವದ ನಾನಾ ಕಡೆ ಸಂಭ್ರಮದಿಂದ ದೀಪಾವಳಿ (Deepavali)ಯನ್ನು ಆಚರಿಸಲಾಗುತ್ತಿದೆ. ಕತ್ತಲನ್ನು ಕಳೆದು ಬೆಳಕನ್ನು ತರುವ ಈ ಹಬ್ಬವನ್ನು ಅರ್ಥಪೂರ್ಣವಾಗಿ ಕೊಂಡಾಡಲಾಗುತ್ತಿದೆ. ನಮ್ಮ ಮನದಲ್ಲಿ ಕವಿದಿರುವ ಅಜ್ಞಾನ, ಅಹಂಕಾರ, ಸಂಕುಚಿತ ಮನೋಭಾವವೆಂಬ ಕತ್ತಲನ್ನು ಕಳೆದು ಜ್ಞಾನವೆಂಬ ಬೆಳಕು ಮೂಡಲಿ ಎನ್ನುವ ಅರ್ಥದಲ್ಲಿಯೂ ಎಲ್ಲಡೆ ಹಣತೆ ಬೆಳಗುತ್ತೇವೆ. ಆದರೆ ಕಾಶ್ಮೀರದ ಮುಸ್ಲಿಂ ಬಾಲಕ ಹಿಂದೂಗಳು ತಮ್ಮ ಪವಿತ್ರ ಹಬ್ಬ ದೀಪಾವಳಿ ಆಚರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಇದನ್ನು ನೋಡಿ ನೋವಾಗಿದೆ ಎಂದೂ ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ. ಬಾಲಕನೊಬ್ಬನ ಮನದಲ್ಲಿ ತುಂಬಿರುವ ಈ ಕೋಮು ಭಾವನೆಯ ಕತ್ತಲೆಯನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಆತನ ವಿರುದ್ಧ ಕಿಡಿ ಕಾರಿದ್ದಾರೆ (Viral News).

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಲಾಲ್ ಚೌಕ್‌ನಲ್ಲಿ ಈ ಬಾರಿ ಅದ್ದೂರಿಯಾಗಿ ದೀಪಾವಳಿ ಆಚರಣೆ ನಡೆದಿದೆ. ಇದೇ ಮೊದಲ ಬಾರಿಗೆ ಲಾಲ್‌ ಚೌಕ್‌ನಲ್ಲಿರುವ ಐತಿಹಾಸಿಕ ಗಡಿಯಾರ ಗೋಪುರದ ಬಳಿ ಅ. 31ರಂದು ನೂರಾರು ಸ್ಥಳೀಯರು ಹಾಗೂ ಪ್ರವಾಸಿಗರು ದೀಪಗಳನ್ನು ಬೆಳಗಿ ಸಂಭ್ರಮಿಸಿದ್ದಾರೆ. ಈ ವಿಚಾರವೇ ಅಲ್ಲಿನ ಮುಸ್ಲಿಂ ಬಾಲಕನಿಗೆ ಅಪಥ್ಯವಾಗಿದೆ. ಹಿಂದೂಗಳ ದೀಪಾವಳಿ ಆಚರಣೆ ವಿರುದ್ಧ ಕಿಡಿಕಾರಿದ್ದಾನೆ. ಇದನ್ನು ನೋಡಿ ತುಂಬ ನೋವಾಯ್ತು ಎಂದು ವಿಡಿಯೊ ಮಾಡಿ ಬಹಿರಂಗವಾಗಿ ಹೇಳಿಕೊಂಡಿದ್ದಾನೆ.

ವಿಡಿಯೊದಲ್ಲಿ ಏನಿದೆ?

“ಮನೆಯಲ್ಲಿಯೇ ಇದ್ದು ಇದ್ದು ಬೇಸರವಾಗಿತ್ತು. ಆದ್ದರಿಂದ ನಾನು ಹೊರಗೆ ಬಂದೆ. ಆದರೆ ಕಾಶ್ಮೀರದಲ್ಲಿ ಹಲವು ಹಿಂದೂ ವಿಗ್ರಹವನ್ನು ನೋಡಿದಾಗ ನನ್ನ ಮೂಡ್‌ ಮತ್ತೆ ಹಾಳಾಯ್ತು. ಇಲ್ಲಿ ದೀಪಾವಳಿ ಆಚರಿಸಿದ್ದು ನೋಡಿ ನನಗೆ ಬಹಳ ನೋವಾಗಿದೆ. ಇದು ಮುಸ್ಲಿಮರ ನಾಡು. ಇಲ್ಲಿ ಹಿಂದೂ ವಿಗ್ರಹವನ್ನು ಸ್ಥಾಪಿಸುವುದು ಮತ್ತು ದೀಪಾವಳಿಯಂತಹ ಹಬ್ಬಗಳನ್ನು ಆಚರಿಸುವುದು ಸರಿಯಲ್ಲ. ಈ ಕೂಡಲೇ ಇದನ್ನು ನಿಲ್ಲಿಸಬೇಕುʼʼ ಆತ ಹೇಳಿದ್ದಾನೆ. ಮಾತ್ರವಲ್ಲ ʼʼದಯವಿಟ್ಟು ನನ್ನ ವಿಡಿಯೊವನ್ನು ಹಂಚಿಕೊಳ್ಳಿ. ಇದನ್ನು ಆದಷ್ಟು ವೈರಲ್‌ ಮಾಡಿ. ಹಿಂದೂಗಳಿಗೆ ಇದು ಅರ್ಥವಾಗಲಿʼʼ ಎಂದೂ ದ್ವೇಷ ಕಾರಿದ್ದಾನೆ.

ನೆಟ್ಟಿಗರ ಆಕ್ರೋಶ

ಸದ್ಯ ಈ ಸೋಷಿಯಲ್‌ ಮೀಡಿಯಾ ಇನ್ಫ್ಲೂಯೆನ್ಸರ್‌ ವಿಡಿಯೊ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡಿದೆ, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಾಲಕನ ವಿರುದ್ದ ಕಿಡಿ ಕಾರಿದ್ದಾರೆ. ʼʼಬಾಲಕ? ಇವನನ್ನು ಬ್ರೈನ್‌ ವಾಶ್‌ ಆಗಿರುವ ಬಾಲಕ ಎಂದು ಕರೆಯಬೇಕು. ಹಿಂದೂ ಆಚರಣೆಗಳನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ. ಆದರೆ ಮತಾಂತರಗೊಂಡ ಹಿಂದೂಗಳಂತಹ ಎಡಬಿಡಂಗಿಗಳಿರುವ ಭಾರತದಲ್ಲಿ ಮಾತ್ರ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಪುಟ್ಟ ಬಾಲಕನೊಬ್ಬನಲ್ಲಿ ಇಂತಹ ವಿದ್ವೇಷಕಾರಿ ಮನೋಭಾವ ಹೊಂದಿರುವುದು ನೋಡಿ ಅಚ್ಚರಿಯಾಗಿದೆ. ಈ ವಿಡಿಯೊವನ್ನು ಜ್ಯಾತತೀತರೆಂದು ಹೇಳಿಕೊಳ್ಳುವ ಹಿಂದೂಗಳಿಗೆ ತೋರಿಸಿʼʼ ಎಂದು ಇನ್ನೊಬ್ಬರು ಕರೆ ನೀಡಿದ್ದಾರೆ. ʼʼಇಂತಹವರಿಂದಲೇ ದೇಶದ ಕೋಮು ಸೌಹಾರ್ದತೆ ಹಾಳಾಗುತ್ತಿದೆʼʼ ಎಂದು ಮತ್ತೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಾಲಕನ ಈ ವಿಡಿಯೊ ದೇಶಾದ್ಯಂತ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಈ ಸುದ್ದಿಯನ್ನೂ ಓದಿ: Viral News: ಕರ್ನಾಟಕವನ್ನು ಮರ್ಮಾಂಗಕ್ಕೆ ಹೋಲಿಸಿದ ಇನ್ಫ್ಲೂಯೆನ್ಸರ್‌ನ ಮರ್ಮಕ್ಕೆ ಬಿಸಿ ಮುಟ್ಟಿಸಿದ ಕನ್ನಡಿಗರು