Friday, 22nd November 2024

Hindu Devotees attacked: ಹಿಂದೂ ದೇಗುಲಕ್ಕೆ ನುಗ್ಗಿ ಭಕ್ತರ ಮೇಲೆ ಡೆಡ್ಲಿ ಅಟ್ಯಾಕ್‌; ಕೆನಡಾದಲ್ಲಿ ಖಲಿಸ್ತಾನಿಗಳ ಪುಂಡಾಟ-ವಿಡಿಯೋ ಇದೆ

canada

ಕೆನಡಾ: ಖಲಿಸ್ತಾನಿಗಳ(Pro-Khalistani mob) ಮತ್ತೆ ಕೆನಡಾ(Canada)ದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ(Hindu Devotees attacked) ಮಾಡಿದ್ದು, ಅಲ್ಲಿದ್ದ ಹಿಂದೂ ಭ‍‍ಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಇಲ್ಲಿ ಪೂಜೆಗೆ ಬಂದಿದ್ದ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ವಿಡಿಯೋದಲ್ಲಿ ಕೆಲವರು ಹಿಂದೂ ಸಭಾ ಮಂದಿರದ ಹೊರಗೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಕೆನಡಾದಲ್ಲಿರುವ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅವರು ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ ಬ್ರಾಂಪ್ಟನ್ ದೇವಾಲಯದಲ್ಲಿ ಹಿಂದೂ ಭಕ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದು, ದೇಶದಲ್ಲಿ ಹಿಂಸಾಚಾರವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಭಾನುವಾರ, ಹಿಂದೂ ಸಭಾ ಮಂದಿರದಲ್ಲಿ ಭಕ್ತರ ಗುಂಪನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಟ್ರುಡೊ, ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ನಡೆಯುತ್ತಿರುವ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಾದವರಿಗೂ ತಮ್ಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕಿದೆ. ಸಮುದಾಯವನ್ನು ರಕ್ಷಿಸಲು ಮತ್ತು ಈ ಘಟನೆಯ ತನಿಖೆಗೆ ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಪೊಲೀಸರಿಗೆ ಧನ್ಯವಾದʼʼ ಎಂದಿದ್ದಾರೆ.

ಇದಕ್ಕೂ ಮೊದಲು, ಕೆನಡಾದ ಪ್ರತಿಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ದಾಳಿ ಖಂಡಿಸಿ, “ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ಆರಾಧಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಯಾರೂ ಇಷ್ಟಪಡುವಂಥದ್ದಲ್ಲ. ಎಲ್ಲಾ ಕೆನಡಿಯನ್ನರು ಶಾಂತಿ ಮತ್ತು ನಂಬಿಕೆ ಉಳಿಸಿಕೊಳ್ಳಲು ಮುಕ್ತರು” ಎಂದಿದ್ದಾರೆ.

ಕೆನಡಾ ಸಂಸದ ಚಂದ್ರ ಆರ್ಯ ಖಂಡನೆ

ಇನ್ನು ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಕೂಡ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದಾರೆ. “ಕೆನಡಾದಲ್ಲಿ ಹಿಂದೂ ಸಭಾ ಮಂದಿರದ ಮೇಲೆ ಖಲಿಸ್ತಾನಿ ದಾಳಿ ನಡೆಸುವುದು ಬೇಸರದ ಸಂಗತಿ. ಖಲಿಸ್ತಾನಿ ಉಗ್ರಗಾಮಿಗಳು ಇಂದು ಕೆಂಪು ಗೆರೆ ದಾಟಿದ್ದಾರೆ. ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಹಿಂದೂ-ಕೆನಡಾದ ಭಕ್ತರ ಮೇಲೆ ನಡೆಸಿದ ದಾಳಿ ಕೆನಡಾದಲ್ಲಿ ಖಲಿಸ್ತಾನಿ ಹಿಂಸಾತ್ಮಕ ಉಗ್ರಗಾಮಿತ್ವವು ಎಷ್ಟು ಲಜ್ಜೆಗೆಟ್ಟಿದೆ ಎಂಬುದನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Gursimran Kaur: ಕೆನಡಾದಲ್ಲಿ ವಾಲ್‌ಮಾರ್ಟ್‌ ಓವನ್‌ನೊಳಗೆ ಮೃತಪಟ್ಟ ಗುರ್‌ಸಿಮ್ರಾನ್ ಕೌರ್ ಯಾರು? ಏನಿವರ ಹಿನ್ನೆಲೆ?