Saturday, 23rd November 2024

Viral Video: ರಿಬ್ಬನ್‌ ಕತ್ತರಿಸಿ ಯು ಟರ್ನ್‌, ರೋಡ್‌ ಹಂಪ್‌ ಉದ್ಘಾಟಿಸಿದ ಮಿನಿಸ್ಟರ್‌! ಅಭಿವೃದ್ದಿ ಹರಿಕಾರ ಎಂದು ನೆಟ್ಟಿಗರಿಂದ ಫುಲ್‌ ಟ್ರೋಲ್‌

Viral Video

ಕೊಚ್ಚಿ: ಸಾಮಾನ್ಯವಾಗಿ ಹೊಸ ಯೋಜನೆಗಳು ಇಲ್ಲವೇ ಹೊಸ ಕಟ್ಟಡ ಉದ್ಘಾಟನೆ ಮಾಡುವಾಗ ರಿಬ್ಬನ್‌ ಕತ್ತರಿಸುವುದನ್ನು ನೋಡಿರುತ್ತೇವೆ. ಅಥವಾ ಸಚಿವರು ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವುದು ವಾಡಿಕೆ. ಆದರೆ ಇಲ್ಲೊಬ್ಬ ಸಚಿವರು ರಸ್ತೆಯ ಯು ಟರ್ನ್‌ ಮತ್ತು ರೋಡ್‌ ಹಂಪ್‌ ಉದ್ಘಾಟನೆ ಮಾಡಿ ಫುಲ್‌ ಟ್ರೋಲ್‌ ಆಗಿದ್ದಾರೆ. ಹೌದು ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದ್ದು, ಕೇರಳದ ಕೈಗಾರಿಕಾ (Kerala’s industry minister) ಸಚಿವ ಪಿ ರಾಜೀವ್‌ (P Rajeev) ಯು ಟರ್ನ್‌ (U Turn) ಉದ್ಘಾಟನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ (Viral Video) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ವೈರಲ್‌ ಆಗ್ತಿದೆ.

ಪಿ ರಾಜೀವ್‌ ಅವರು ರಸ್ತೆಯ ಯು ಟರ್ನ್‌ ಅನ್ನು ರಿಬ್ಬನ್‌ ಕತ್ತರಿಸಿ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೈರಲ್‌ ಆಗಿರುವ ವಿಡಿಯೋವನ್ನುಬಿಜೆಪಿ ಯುವ ಮೋರ್ಚಾದ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕೇರಳದ ಬಿಜೆಪಿ ಮುಖಂಡ ಅನೂಪ್ ಆಂಥೋನಿ ಜೋಸೆಫ್ ತಮ್ಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ಕಿಡಿ ಕಾರಿದ ಅವರು ವಿಡಿಯೋದಲ್ಲಿ ಕೇರಳದ ಕೈಗಾರಿಕಾ ಸಚಿವ ಪಿ ರಾಜೀವ್ ಅವರು ಕೊಚ್ಚಿಯಲ್ಲಿ ಹೊಸ ಯು-ಟರ್ನ್ ಅನ್ನು ಉದ್ಘಾಟಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸಚಿವರಿಗೆ ಉದ್ಘಾಟನೆ ಮಾಡಲು ಬೇರೆ ಯೋಜನೆಗಳು ಇಲ್ಲಾ, ಅಭಿವೃದ್ಧಿ ಇಲ್ಲದೆ ಉದ್ಘಾಟನೆ ಮಾಡಲು ಹೇಗೆ ಸಾಧ್ಯ ಅದಕ್ಕಾಗಿಯೇ ಯು ಟರ್ನ್‌ಗಳು ಹಾಗೂ ಮುಚ್ಚಿಸಿರುವ ಗುಂಡಿಗಳನ್ನು ಉದ್ಘಾಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : Rahul Gandhi: ದಿಲ್ಲಿಯ ಸಲೂನ್‌ಗೆ ರಾಹುಲ್‌ ಗಾಂಧಿ ಭೇಟಿ- ಗಡ್ಡ ಟ್ರಿಮ್‌ ಮಾಡಿಸ್ಕೊಂಡು ಕ್ಷೌರಿಕನ ಜೊತೆ ಚಿಟ್‌ಚಾಟ್‌-ವಿಡಿಯೋ ವೈರಲ್‌

ಇನ್ನು ವೈರಲ್‌ ಆಗಿರುವ ವಿಡಿಯೋಗೆ ತರಹೇವಾರಿ ಕಮೆಂಟ್‌ ಮಾಡುತ್ತಿರುವ ನೆಟ್ಟಿಗರು ʼಅಭಿವೃದ್ದಿಯ ಹರಿಕಾರʼ ಎಂದಿದ್ದಾರೆ. ಒಬ್ಬ ಇದೊಂದು ರೀತಿಯ ವಿಶಿಷ್ಟ ಜನಸೇವೆಯಾಗಿದೆ ಎಂದಿದ್ದಾನೆ. ಮತ್ತೊಬ್ಬರು ಈ ವರ್ಷ ನಾನು ನೋಡಿರುವ ಅತ್ಯದ್ಭುತ ದೃಶ್ಯವಾಗಿದೆ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ ಕೇರಳ ಇಷ್ಟು ಅಭಿವೃದ್ದಿಯಾಗಿರುವುದನ್ನು ನೋಡಿ ಖುಷಿಯಾಗುತ್ತಿದೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.