ಲಿಮಾ: ಸಾವು ಯಾರಿಗೆ ಹೇಗೆ ಎಲ್ಲಿ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ನಿದರ್ಶನ ಎಂಬಂತೆ ಮೈದಾನದಲ್ಲಿ ಫುಟ್ಬಾಲ್ (Football) ಆಡುತ್ತಿದ್ದ ಆಟಗಾರರಿಗೆ ಸಿಡಿಲು ಬಡಿದು ಒಬ್ಬ ಆಟಗಾರ ಮೃತಪಟ್ಟಿರುವ ಆಘಾತಕಾರಿ ಘಟನೆ ಪೆರುವಿನಲ್ಲಿ(Peru) ನಡೆದಿದೆ. ಸದ್ಯ ಸಿಡಿಲು ಬಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ.
ಪೆರುವಿನಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಸಿಡಿಲು ಬಡಿದ ಪರಿಣಾಮ ಒಬ್ಬ ಆಟಗಾರ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಜುವೆಂಟುಡ್ ಬೆಲ್ಲವಿಸ್ಟಾ ಮತ್ತು ಫ್ಯಾಮಿಲಿಯಾ ಚೋಕಾ ಎಂಬ ಹೆಸರಿನ 2 ಕ್ಲಬ್ಗಳ ನಡುವಿನ ಪಂದ್ಯದ ವೇಳೆ ಈ ದುರಂತ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
In Peru, a soccer player died after being struck by lightning during a match
— NEXTA (@nexta_tv) November 4, 2024
The tragedy occurred on November 3 during a match between clubs Juventud Bellavista and Familia Chocca, held in the Peruvian city of Huancayo.
During the game, a heavy downpour began and the referee… pic.twitter.com/yOqMUmkxaJ
ಸದ್ಯ ಗಾಯಗೊಂಡಿರುವ ಆಟಗಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟಗಾರರ ಬಗ್ಗೆ ಮಾಹಿತಿ ತಿಳಿದು ಬರಬೇಕಾಗಿದೆ. ಆಟಗಾರರು ಮೈದಾನದಲ್ಲಿದ್ದಾಗ ಜೋರಾಗಿ ಮಳೆ ಬರಲು ಪ್ರಾರಂಭವಾಗಿತ್ತು. ಈ ವೇಳೆ ರೆಫ್ರಿ ಆಟಗಾರರಿಗೆ ಮೈದಾನದಿಂದ ಹೊರಬರಲು ಸೂಚಿಸಿದ್ದಾರೆ. ಆಟಗಾರರು ಅಲ್ಲಿಂದ ಹೊರ ಬರುತ್ತಿದ್ದಾಗ ಸಿಡಿಲು ಬಡಿದು ಈ ಘಟನೆ ಸಂಭವಿಸಿದೆ. ಸ್ಥಳಿಯ ಮಾಧ್ಯಮಗಳ ವರದಿಯ ಪ್ರಕಾರ ಈ ಘಟನೆ ಸಂಜೆ 4 ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಯ ನಂತರ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ : ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರ ಸಾವು
ಜಾರ್ಖಂಡನಲ್ಲೂ ನಡೆದಿತ್ತು ಇಂತಹುದೇ ಘಟನೆ
ಆಗಸ್ಟ್ನಲ್ಲಿ ಜಾರ್ಖಂಡ್ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಮೈದಾನದಲ್ಲಿದ್ದಾಗಲೇ ಆಟಗಾರರು ಮೃತಪಟ್ಟಿದ್ದರು. ಫುಟ್ಬಾಲ್ ಆಡುತ್ತಿದ್ದಾಗ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಲತೇಹರ್ ಜಿಲ್ಲೆಯಲ್ಲಿ ನಡೆದಿತ್ತು. ಮೃತರನ್ನು ದೀಪಕ್ ಕುಮಾರ್ ಮತ್ತು ವೀರೇಂದ್ರ ಗಂಜು ಎಂದು ಗುರುತಿಸಲಾಗಿದ್ದು, ಇಬ್ಬರೂ ಬರಿಯಾಟು ನಿವಾಸಿಗಳು ಎಂದು ತಿಳಿದು ಬಂದಿದೆ. ಸಿಡಿಲು ಬಡಿದ ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾದರೂ ಇಬ್ಬರು ಮೃತಪಟ್ಟಿದ್ದರು.