ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಪ್ರೇಕ್ಷಕರನ್ನು ರಂಜಿಸುವಲ್ಲಿ ಎಡವುತ್ತಿದೆ ಎಂಬ ಮಾತಿತ್ತು. ಈ ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಡಲ್ ಆದಂತೆ ಕಾಣುತ್ತಿದೆ ಎನ್ನಲಾಗುತ್ತಿತ್ತು. ಬಿಬಿಕೆ 11 ಶುರುವಾಗಿ ಮೂರು ವಾರಗಳು ಕಳೆದರು ಬರೀ ಜಗಳಗಳೇ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಈಗ ಇದೇ ಜನರಿಗೆ ಇಷ್ಟವಾದಂತಿದೆ. ಹಿಂದಿನ ವಾರದ ಟಿಆರ್ಪಿ ಹೊರಬಿದ್ದಿದ್ದು, ಕಿಚ್ಚನ ಎಪಿಸೋಡ್ ದಾಖಲೆ ನಿರ್ಮಿಸಿದೆ.
ಗ್ರ್ಯಾಂಡ್ ಓಪನಿಂಗ್ ದಿನ ಬಿಗ್ ಬಾಸ್ಗೆ 9.9 ಟಿಆರ್ಪಿ ಸಿಕ್ಕಿತ್ತು. ಬಿಗ್ ಬಾಸ್ ಲಾಂಚ್ ದಿನ ಇಷ್ಟು ದೊಡ್ಡ ಮಟ್ಟದ ಟಿಆರ್ಪಿ ಸಿಕ್ಕಿದ್ದು ಇದೇ ಮೊದಲು. ಮೊದಲ ವಾರ ಬಿಗ್ ಬಾಸ್ಗೆ ವಾರದ ದಿನಗಳಲ್ಲಿ 6.9 ಟಿಆರ್ಪಿ ದೊರೆತಿತ್ತು. ಆ ಬಳಿಕ ಬಿಗ್ ಬಾಸ್ಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಇರಲಿಲ್ಲ. ಆದರೀಗ ದಾಖಲೆಯ 12.3 ಟಿವಿಆರ್ ಗಳಿಸಿದೆ. ಜಗದೀಶ್ ಅವರು ಎಲಿಮಿನೇಟ್ ಆದ ವಾರ ಶನಿವಾರ ಪ್ರಸಾರವಾದ ವಾರದ ಕತೆ ಕಿಚ್ಚನ ಜೊತೆ ಸಂಚಿಕೆ ಕರ್ನಾಟಕದ 15+ ವೀಕ್ಷಕರ ವಿಭಾಗದಲ್ಲಿ 12.3 ಟಿವಿಆರ್ ಗಳಿಸಿ ದಾಖಲೆ ನಿರ್ಮಿಸಿದೆ.
ದಾಖಲೆಯ 12.3 ಟಿವಿಆರ್ ಗಳಿಸಿದ ಬಿಗ್ ಬಾಸ್
— Colors Kannada (@ColorsKannada) November 4, 2024
ಕಲರ್ಸ್ ಕನ್ನಡದಲ್ಲಿ ಕಳೆದ ಶನಿವಾರ ಪ್ರಸಾರವಾದ ವಾರದ ಕತೆ ಕಿಚ್ಚನ ಜೊತೆ ಸಂಚಿಕೆ ಕರ್ನಾಟಕದ 15+ ವೀಕ್ಷಕರ ವಿಭಾಗದಲ್ಲಿ 12.3 ಟಿವಿಆರ್ ಗಳಿಸಿದೆ#ColorsKannada #BannaHosadaagideBandhaBigiyaagide #colorfulstory #BiggBossKannada11 #BBK11 #HosaAdhyaya #Kicchasudeepa pic.twitter.com/1y7UYY6cew
ಜಗದೀಶ್ ಅವರು ಅರ್ಧಕ್ಕೆ ಬಿಗ್ ಬಾಸ್ನಿಂದ ಹೊರ ನಡೆದ ವಾರ ಕಿಚ್ಚ ಸುದೀಪ್ ಅವರು ಮನೆ ಮಂದಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಆ ವಾರ ಬಿಗ್ ಬಾಸ್ಗೆ ವಾರದ ದಿನಗಳಲ್ಲಿ 7 ಟಿವಿಆರ್ ಸಿಕ್ಕಿದೆ. ಧಾರಾವಾಹಿ ವಿಚಾರಕ್ಕೆ ಬರೋದಾದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಈ ಮೊದಲು ಒಂದನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಸಮಯ ಬದಲಾವಣೆಯ ನಂತರ ಟಿಆರ್ಪಿ ಕುಸಿದಿತ್ತು. ಈಗ ಮತ್ತೆ ಈ ಧಾರಾವಾಹಿ ಮೊದಲ ಸ್ಥಾನಕ್ಕೆ ಬಂದಿದೆ.
ಮೂರನೇ ಸ್ಥಾನದಲ್ಲಿದ್ದ ಅಮೃತಧಾರೆ ಧಾರಾವಾಹಿ ಇದೀಗ ಎರಡನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಈ ಮೊದಲು ಈ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿತ್ತು. ಆದರೆ, ಈಗ ಧಾರಾವಾಹಿಯ ಟಿಆರ್ಪಿ ಸ್ವಲ್ಪ ಕುಗ್ಗಿದೆ. ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ, ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯ ಲಕ್ಷ್ಮೀ ಐದನೇ ಸ್ಥಾನದಲ್ಲಿ ಇವೆ.
BBK 11: ತನ್ನೆಲ್ಲ ನೋವನ್ನು ಬಚ್ಚಿಟ್ಟು ಬಿಗ್ ಬಾಸ್ ಸ್ಪರ್ಧಿಗಳಿಗೆ ನಗು ಹಂಚಿದ ಸುದೀಪ್