ಮೈಸೂರು: ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ರಾಷ್ಟ್ರಕವಿ ಕುವೆಂಪುರವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ನ. 9 ರಂದು ಸಂಜೆ 5.30 ಕ್ಕೆ ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ (Mysuru News) ಏರ್ಪಡಿಸಲಾಗಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸುವರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸುವರು. ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಅಧ್ಯಕ್ಷತೆ ವಹಿಸುವರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರಿನ ಮಠದ ಗೌರವ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮಿಗಳು ಉಪಸ್ಥಿತರಿರುವರು.
ಈ ಸುದ್ದಿಯನ್ನೂ ಓದಿ | Rajyotsava In Germany: ಜರ್ಮನಿಯ ಮ್ಯೂನಿಕ್‌ನ ಸಿರಿಗನ್ನಡ ಕೂಟದಿಂದ ಕನ್ನಡ ಕಹಳೆ ಸಾಹಿತ್ಯ ಸಂಜೆ
ಮುಖ್ಯ ಅತಿಥಿಗಳಾಗಿ ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ್, ಶಾಸಕರಾದ ಡಾ.ಮಂಥರ್ ಗೌಡ, ಕೆ. ಹರೀಶ್ ಗೌಡ, ರಾಜಸ್ತಾನದ ಐಜಿಪಿ ರಾಘವೇಂದ್ರ ಸುಹಾಸ್, ರಾಜ್ಯ ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ದಕ್ಷಿಣ ಪ್ರಾಂತ್ಯ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ನಿರ್ದೇಶಕ ಕೆ ನಾಗರಾಜ್, ಆಂತರಿಕ ಭದ್ರತಾ ವಿಭಾಗದ ಎಸ್ಪಿ ಡಾ.ಎ.ಎನ್. ಪ್ರಕಾಶಗೌಡ ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಡಾ. ನಾಗಾರ್ಜುನ್ ಬಿ. ಗೌಡ, ಐಆರ್‌ಎಸ್ ಅಧಿಕಾರಿ ಪಿ.ವಿ. ಭೈರಪ್ಪ, ಎಎಫ್‌ಎಚ್‌ಕ್ಯೂ ಅಧಿಕಾರಿ ಭವ್ಯಶ್ರೀ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಾ. ಕೆ. ಚಿದಾನಂದಗೌಡ ಹಾಗೂ ತಾರಿಣಿ ಚಿದಾನಂದ ಅವರನ್ನು ವಿಶೇಷವಾಗಿ ಅಭಿನಂದಿಸಲಾಗುವುದು.
ಈ ಸುದ್ದಿಯನ್ನೂ ಓದಿ | MB Patil: ಹೂಡಿಕೆ ಯೋಜನೆಗಳ ಕ್ಷಿಪ್ರ ಅನುಮೋದನೆಗೆ ಮೈಕ್ರೋಸಾಫ್ಟ್ ಕಂಪನಿಯಿಂದ ಸಾಫ್ಟ್‌ವೇರ್ ಅಭಿವೃದ್ಧಿ
ಅತಿಥಿಗಳಾಗಿ ಮೈಸೂರು ವಿವಿಯ ಉಪಕುಲಪತಿ ಪ್ರೊ. ಎನ್.ಕೆ. ಲೋಕನಾಥ್, ಡಾ. ಚಂದ್ರಶೇಖರ್, ರಾಜ್ಯ ಉಪನೋಂದಣಾಧಿಕಾರಿಗಳ ಸಂಘದ ನಿರ್ದೇಶಕ ವೆಂಕಟೇಶ್, ಡಾ. ಎಂ.ಆರ್. ಅನಿಲ್ ಕುಮಾರ್, ಉದ್ಯಮಿ ಎಸ್. ಸಚ್ಚಿದಾನಂದ ಅವರು ಪಾಲ್ಗೊಳ್ಳುವರು ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.