ಇಸ್ಲಮಾಬಾದ್: ತನ್ನ ಗೆಳತಿಯರೊಂದಿಗೆ ದೀಪಾವಳಿ ಸಂಭ್ರಮಾಚರಣೆ (Diwali Celebration) ನಡೆಸಿದ ಪಾಕಿಸ್ತಾನಿ (Pakistan) ನಟಿ ಸೋನ್ಯಾ ಹುಸೈನ್ (Sonya Hussaiyn) ಇದೀಗ ತನ್ನ ದೆಶದಲ್ಲಿ ತೀವ್ರ ಟೀಕೆಗೆ (Shameful, Wannabe) ಗುರಿಯಾಗಿದ್ದಾರೆ(Viral Video). ‘ನಮ್ಮ ನಾಗರಿಕರೆಲ್ಲರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸೋಣ ಮತ್ತು ಆ ಮೂಲಕ ಅವರಿಗೆಲ್ಲಾ ಪಾಕಿಸ್ತಾನವೆಂಬುದು ಮನೆಯ ವಾತಾವರಣ ನೀಡುವ ದೇಶವಾಗಲಿ’ ಎಂಬ ಸಂದೇಶವನ್ನು ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು,
ಈ ಪೋಸ್ಟ್ ಗೆ ಇದೀಗ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣವೇ ಅವರ ಸೋಷಿಯಲ್ ಮೀಡಿಯಾ ಅಕೌಂಟನ್ನು ಹಲವರು ಅನ್ ಫಾಲೋ ಮಾಡಿದ್ದಾರೆ. ಸೋನ್ಯಾ ಅವರು ಈ ಪೋಸ್ಟ್ ನಲ್ಲಿ ದೀಪಾವಳಿ ಸಂಭ್ರಮಾಚರಣೆಯ ವಿಡಿಯೋ ಮತ್ತು ತಾನು ಬಿಂದಿ ಧರಿಸಿದ್ದ ಫೊಟೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಅಲ್ಲಿನ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ ಮಾತ್ರವಲ್ಲದೇ ಕೆಲವರಂತೂ ‘ನೀವು ದೇಶ ಬಿಟ್ಟು ಹೋಗಿ..’ ಎಂಬ ಕಮೆಂಟ್ ಗಳನ್ನು ಮಾಡಿದ್ದಾರೆ.
ಸೋನ್ಯಾ ಅವರು ಕಳೆದ ಶನಿವಾರದಂದು ತನ್ನ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ದೀಪಾವಳಿ ಸಂಭ್ರಮಾಚರಣೆಯ ಕೆಲವೊಂದು ಫೊಟೋಗಳನ್ನು ಹಂಚಿಕೊಂಡಿದ್ದರು, ಇದರಲ್ಲಿ ಅವರು ಕೆಂಪು ಸೀರೆ ಮತ್ತು ಅದಕ್ಕೆ ಮ್ಯಾಚ್ ಆಗುವ ಬಿಂದಿ ಧರಿಸಿದ್ದರು. “ಪಾಕಿಸ್ತಾನ ಹಲವಾರು ಸಂಸ್ಕೃತಿ ಮತ್ತು ನಂಬಿಕೆಗಳು ಸಮ್ಮಿಲಿತಗೊಂಡಿರುವ ಒಂದು ಸುಂದರವಾದ ವೈವಿಧ್ಯಮಯ ದೇಶವಾಗಿದೆ, ಹಾಗಾಗಿ ನಾವೆಲ್ಲರೂ ಈ ದೇಶದ ಮುಖ್ಯ ಭಾಗವೇ ಆಗಿರುವ ಅಲ್ಪಸಂಖ್ಯಾತರ ಸಂಭ್ರಮದಲ್ಲೂ ನಾವು ಪಾಲ್ಗೊಳ್ಳಬೇಕು. ಮಹಮ್ಮದ್ ಆಲಿ ಜಿನ್ನಾ (Muhammad Ali Jinnah) ಅವರು ಹೇಳಿರುವಂತೆ, “ನೀವು ನಿಮ್ಮ ದೇವಾಲಯಗಳಿಗೆ ಮುಕ್ತವಾಗಿ ಹೋಗಬಹುದು. ನೀವು ಯಾವುದೇ ಧರ್ಮಕ್ಕೆ, ಜಾತಿಗೆ ಅಥವಾ ಜನಾಂಗಕ್ಕೆ ಸೇರಿರಬಹುದು – ಇದಕ್ಕೂ ಈ ದೇಶದ ತತ್ವ-ಸಿದ್ಧಾಂತಗಳಿಗೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆಯನ್ನು ಆಕೆ ತನ್ನ ಪೋಸ್ಟ್ ಗೆ ಕ್ಯಾಪ್ಷನ್ ಆಗಿ ಬರೆದುಕೊಂಡಿದ್ದರು.
“ಈ ಹೇಳಿಕೆಯು ಇಲ್ಲಿರುವ ಎಲ್ಲಾ ಸಮುದಾಯಗಳೂ ನಮ್ಮ ಸಮಾಜವನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತವೆ ಎಂಬುದನ್ನು ನಮಗೆ ನೆನಪಿಸುತ್ತದೆ. ನಮ್ಮೆಲ್ಲಾ ನಾಗರಿಕರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸೋಣ, ಆ ಮೂಲಕ ಅವರೆಲ್ಲರೂ ಪಾಕಿಸ್ಥಾನದಲ್ಲಿ ಒಂದು ಮನೆ ವಾತಾವರಣವನ್ನು ಅನುಭವಿಸುವಂತಾಗಲಿ. ಇದು ಅವರ ದೇಶವೂ ಹೌದು, ಮತ್ತು ನಾವು ಎಲ್ಲಾ ಸಂಸ್ಕೃತಿಗಳನ್ನೂ ಮುಕ್ತ ಹೃದಯದಿಂದ ಸಂಭ್ರಮಿಸುತ್ತೇವೆ ಮತ್ತು ಆ ಮೂಲಕ ಗೌರವ, ಒಗ್ಗಟ್ಟು ಮತ್ತು ಪ್ರೀತಿ ಭರಿತ ಭವಿಷ್ಯವೊಂದನ್ನು ನಾವೆಲ್ಲರೂ ಜೊತೆಯಾಗಿ ರೂಪಿಸಲು ಸಾಧ್ಯ” ಎಂಬ ವಿವೇಚಾನಾತ್ಮಕ ಬರಹವನ್ನು ತನ್ನ ಪೋಸ್ಟ್ ನಲ್ಲಿ ಸೋನ್ಯಾ ಬರೆದುಕೊಂಡಿದ್ದರು.
ಆದರೆ, ಸೋನ್ಯಾ ಇದನ್ನು ಪೋಸ್ಟ್ ಮಾಡಿದ ಕೂಡಲೇ ಅವರ ಕಮೆಂಟ್ ಬಾಕ್ಸ್ ತುಂಬಾ ದ್ವೇಷದ ಮತ್ತು ನೆಗೆಟಿವ್ ಕಮೆಂಟ್ ಗಳಿಂದ ತುಂಬಿಹೋಯಿತು. ಹಲವರು ಆಕೆಯನ್ನು ಅನ್ ಫಾಲೋ ಸಹ ಮಾಡಲಾರಂಭಿಸಿದರು. “ನಾನು ಅನ್ ಫಾಲೋ ಮಾಡಿದ್ದೇನೆ.. ಈ ನಾನ್ ಸೆನ್ಸನ್ನು ಸಹಿಸಲು ಸಾಧ್ಯವಿಲ್ಲ..’ ಎಂದು ಒಬ್ಬ ಕಮೆಂಟ್ ಮಾಡಿದ್ದರೆ, “ಯಾವೊಬ್ಬ ಹಿಂದು ನಾಗರಿಕನು ಮುಸ್ಲಿಂ ಹಬ್ಬಗಳನ್ನು ಇಷ್ಟು ಸಂಭ್ರಮದಿಂದ ಅಚರಿಕೊಳ್ಳುವುದನ್ನು ನಾನು ನೋಡಿಲ್ಲ. ಇದು ಮೂರ್ಖತನ್ ಪರಮಾವಧಿ, ಅವರೆಲ್ಲರೂ ಜೋಕರ್ ಗಳಂತೆ ಕಾಣುತ್ತಿದ್ದಾರೆ.. ಅನ್ ಫಾಲೋ ಮಾಡುತ್ತಿದ್ದೇನೆ..’ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
“ಇದೊಂದು ನಾಚಿಕೆಗೇಡಿನ ಸಂಗತಿ.. ನೀನ್ಯಾಕೆ ಬಿಂದಿ ಹಾಕ್ಕೊಂಡಿದ್ದೀಯಾ?” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಆಕೆಯನ್ನು “ಇನ್ನೊಬ್ಬರಂತೆ ಕಾಣಿಸಿಕೊಳ್ಳಲು ಬಯಸುವವಳು..” ಎಂದು ನಿಂದಿಸಿದ್ದರೆ, ಮತ್ತೊಬ್ಬರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಭಾರತಕ್ಕೆ ಹೋಗಿ..” ಎಂದು ಕಮೆಂಟ್ ಮಾಡಿದ್ದಾರೆ.
ಈ ರೀತಿಯಾಗಿ, ದಾರೀಚಾ, ಮುಝೇ ಸಂಡಾಲ್ ಕರ್ ದೋ, ಮೈ ಹರೀ ಪಿಯಾ, ಮೇರೇ ಹಮಾರಿ ಮೊದಲಾದ ಹಲವಾರು ಜನಪ್ರಿಯ ಟಿವಿ ಶೋಗಳ ಮೂಲಕ ಹೆಸರುವಾಸಿಯಾಗಿದ್ದ ಸೋನ್ಯಾ ಇದೀಗ ದೀಪಾವಳಿ ಸಂಭ್ರಮಾಚರಣೆಯ ಪರವಾಗಿ ಪೋಸ್ಟ್ ಹಾಕುವ ಮೂಲಕ ಪಾಕಿಸ್ತಾನೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Pawan Kalyan : ಆಂಧ್ರದ ಮೈತ್ರಿ ಸರ್ಕಾರದಲ್ಲಿ ಬಿರುಕು? ಭಾರೀ ವೈರಲ್ ಆಗ್ತಿದೆ ಪವನ್ ಕಲ್ಯಾಣ್ ಈ ವಿಡಿಯೋ