ಅಯೋಧ್ಯೆ: ರಾಮ ಮಂದಿರ ಉದ್ಘಾಟನೆಯಾದ ನಂತರ ಅಯೋಧ್ಯೆಯಲ್ಲಿ(Ayodhya Ram Mandir) ಮೊದಲಬಾರಿಗೆ ದೀಪೋತ್ಸವದ ಸಂಭ್ರಮ ಮನೆಮಾಡಿತ್ತು. ಸರಯೂ ನದಿಯ ದಡದಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. ಡ್ರೋನ್ ಬಳಸಿ ಈ ಅದ್ಭುತ ದೃಶ್ಯವನ್ನು ಸೆರೆ ಹಿಡಿಯಲಾಯಿತು.
ಪ್ರಸಿದ್ಧ ರಾಮ್ ಕಿ ಪೈಡಿ ಸೇರಿದಂತೆ 55 ಘಾಟ್‌ಗಳಲ್ಲಿ ಅದ್ಭುತವಾದ ದೀಪೋತ್ಸವ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಏಕತೆಯ ಪ್ರದರ್ಶನಕ್ಕಾಗಿ, 1,121 ವೇದಾಚಾರ್ಯರು ಏಕಕಾಲದಲ್ಲಿ ಆರತಿ ಮಾಡಿದ್ದಾರೆ. ಈ ಐತಿಹಾಸಿಕ ಸಾಧನೆಯಲ್ಲಿ ಬೆಳಗಿಸಿದ ದೀಪಗಳನ್ನು ಸರಿಯಾಗಿ ಎಣಿಕೆ ಮಾಡಲು ಡ್ರೋನ್‍ಗಳನ್ನು ಬಳಸಲಾಗಿತ್ತು.
New record: Largest display of oil lamps 🪔 2,512,585 in Ayodhya, Uttar Pradesh, India #happydiwali pic.twitter.com/m7pb5FUN96
— Guinness World Records (@GWR) November 1, 2024
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಈ ಕಾರ್ಯಕ್ರಮದ ಅದ್ಭುತವಾದ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಳ್ಳಲಾಗಿದ್ದು, “ಹೊಸ ದಾಖಲೆ: ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿಗೆ 2,512,585 ಹಣತೆ ದೀಪಗಳ ಅತಿದೊಡ್ಡ ಪ್ರದರ್ಶನ” ಎಂದು ಘೋಷಿಸಲಾಗಿದೆ. ನಂತರದ ಪೋಸ್ಟ್‌ನಲ್ಲಿ ಜನರು ಏಕಕಾಲದಲ್ಲಿ ದೀಪವನ್ನು ಬೆಳಗಿ ಹೊಸ ದಾಖಲೆಯನ್ನು ಸಹ ಮಾಡಿದ್ದಾರೆ ಎಂದು ವಿವರಣೆ ನೀಡಲಾಗಿದೆ.
ಅಯೋಧ್ಯೆಯು ಹಣತೆ ದೀಪಗಳ ಅತಿದೊಡ್ಡ ಪ್ರದರ್ಶನಕ್ಕಾಗಿ ದಾಖಲೆಯನ್ನು ನಿರ್ಮಿಸುತ್ತಿರುವುದು ಇದು ಏಳನೇ ಬಾರಿಯಾಗಿದೆ. ಮೊದಲ ದಾಖಲೆಯನ್ನು 2021ರ ನವೆಂಬರ್‌ನಲ್ಲಿ ಮಾಡಲಾಗಿತ್ತು. ಅಂದು ಆ ವರ್ಷದ ಕಾರ್ಯಕ್ರಮದ ಯಶಸ್ಸಿಗೆ 30,000ಕ್ಕೂ ಹೆಚ್ಚು ಸ್ವಯಂಸೇವಕರು, ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಪ್ರಯತ್ನಗಳು ಕಾರಣವಾಗಿದ್ದು, ಅವರು ಸಾಲು ಸಾಲಾಗಿ ಆಕರ್ಷಕವಾಗಿ ದೀಪಗಳನ್ನು ಜೋಡಿಸಿ, ಅದನ್ನು ಬೆಳಗುವುದರ ಮೂಲಕ ದಾಖಲೆ ನಿರ್ಮಿಸಿದ್ದರು.
ಎರಡನೇ ಬಾರಿ, ‘ಹೆಚ್ಚಿನ ಜನರು ಏಕಕಾಲದಲ್ಲಿ ದೀಪವನ್ನು ಬೆಳಗಿಸುವ ಕಾರ್ಯಕ್ರಮದಲ್ಲಿ ಒಟ್ಟು 1,211 ಮಂದಿ ಭಾಗವಹಿಸಿದ್ದರು. ಈ ಎಲ್ಲಾ ಸ್ಪರ್ಧಿಗಳಿಗೆ ಮುಂಚಿತವಾಗಿ ದೀಪ ಬೆಳಗಿಸುವ ವಿಧಾನವನ್ನು ಅಭ್ಯಾಸ ಮಾಡಿಸಲಾಗಿತ್ತು. ಮತ್ತು ಕಾರ್ಯಕ್ರಮದ ರಾತ್ರಿ, ಕ್ಯೂಆರ್ ಕೋಡ್‍ಗಳನ್ನು ಬಳಸಿ ಸ್ಪರ್ಧಿಗಳನ್ನು ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿತ್ತು. ಈ ದಾಖಲೆಗಳನ್ನು ಪರಿಶೀಲಿಸಿದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಪ್ರಮಾಣಪತ್ರವನ್ನು ನೀಡಿವೆ.
ಇದನ್ನೂ ಓದಿ:ಪೋಷಕರೇ ಎಚ್ಚರ… ಎಚ್ಚರ…! ಚೂಯಿಂಗ್ ಗಮ್ ಗಂಟಲಿಗೆ ಸಿಲುಕಿ 4 ವರ್ಷದ ಮಗು ಸಾವು
ಪ್ರಧಾನಿ ನರೇಂದ್ರ ಮೋದಿ ಅವರು ಈ ದೃಶ್ಯವನ್ನು “ಅದ್ಭುತವಾದ, ಸಾಟಿಯಿಲ್ಲದ ಮತ್ತು ಊಹಿಸಲಾಗದ ದೃಶ್ಯ” ಎಂದು ಬಣ್ಣಿಸಿದ್ದಾರೆ. ಈ ಭವ್ಯ ದೀಪೋತ್ಸವಕ್ಕಾಗಿ ಸಹಕರಿಸಿದ ಅಯೋಧ್ಯೆಯ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ಅಯೋಧ್ಯೆಯಿಂದ ಹೊರಹೊಮ್ಮುವ ಈ ಬೆಳಕು ದೇಶಾದ್ಯಂತದ ವಾಸಿಸುವ ಕುಟುಂಬಗಳಿಗೆ ಹೊಸ ಶಕ್ತಿಯೊಂದಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.