Friday, 22nd November 2024

Salman Khan: ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ! 5 ಕೋಟಿ ರೂ.ಗೆ ಬೇಡಿಕೆ

Salman Khan

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ (Salman Khan) ಪದೇಪದೆ ಜೀವ ಬೆದರಿಕೆ ಕರೆಗಳು ( Death Threat) ಬರುತ್ತಿವೆ. ಮಾಜಿ ಸಚಿವ ಬಾಬಾ ಸಿದ್ಧಿಕಿ (baba siddique murder) ಹತ್ಯೆಯ ನಂತರ ಸಲ್ಮಾನ್‌ಗೆ ಕೊಲೆ ಬೆದರಿಕೆಗಳು ಜೋರಾಗಿವೆ. ಈಗ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಲಾರೆನ್ಸ್‌ ಬಿಷ್ಣೋಯ್‌ ( Lawrence Bishnoi) ಸಹೋದರ ಎಂದು ಹೇಳಿಕೊಳ್ಳುವ ವ್ಯಕ್ತಿ ಐದು ಕೋಟಿ ಬೇಡಿಕೆ ಹಾಗೂ ದೇವಸ್ಥಾನಕ್ಕೆ ಬಂದು ಸಲ್ಮಾನ್‌ ಕ್ಷಮೆ ಕೇಳಬೇಕೆಂದು ಮುಂಬೈನ ಸಂಚಾರ ನಿಯಂತ್ರಣ ಕೊಠಡಿಗೆ (Mumbai traffic control room) ಸಂದೇಶ ಕಳುಹಿಸಿದ್ದಾನೆ.

ಮುಂಬೈನ ಸಂಚಾರ ನಿಯಂತ್ರಕ ಕೊಠಡಿಗೆ ಸಂದೇಶ ಕಳುಹಿಸಿರುವ ವ್ಯಕ್ತಿ ತಾನು ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಎಂದು ಹೇಳಿದ್ದಾನೆ. ಸಲ್ಮಾನ್‌ ಜೀವಂತವಾಗಿರಬೇಕೆಂದರೆ ಆತ ನಮಗೆ ಐದು ಕೋಟಿ ನೀಡಬೇಕು ಹಾಗೂ ದೇವಸ್ಥಾನಕ್ಕೆ ಬಂದು ನಮ್ಮ ಸಮಾಜದವರೊಂದಿಗೆ ಕ್ಷಮೆ ಕೇಳಬೇಕು. ಅವನು ಹಾಗೆ ಮಾಡದೆ ಇದ್ದಲ್ಲಿ ಅವನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಸಂದೇಶದ ತನಿಖೆ ಮಾಡುತ್ತಿರುವ ಮುಂಬೈನ ಅಪರಾಧ ವಿಭಾಗದ ಪೊಲೀಸರು, ಬೆದರಿಕೆ ಹಾಕಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಬಾಬಾ ಸಿದ್ದಿಕಿ ಹತ್ಯೆಯ ನಂತರ ಸಲ್ಮಾನ್‌ಗೆ ಕೊಲೆ ಬೆದರಿಕೆ ಕರೆಗಳು ಮತ್ತೆಮತ್ತೆ ಬರುತ್ತಿವೆ. ಈ ಮೊದಲು ವ್ಯಕ್ತಿಯೊಬ್ಬ ತಾನು ಲಾರೆನ್ಸ್‌ ಬಿಷ್ಣೋಯ್‌ ಎಂದು ಬೆದರಿಕೆ ಹಾಕಿ ಐದು ಕೋಟಿ ಬೇಡಿಕೆ ಇಟ್ಟಿದ್ದ. ಬೆದರಿಕೆ ಹಾಕಿದವನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಆತ ಮುಂಬೈನಲ್ಲಿ ಟ್ಯಾಟೂ ಹಾಕುತ್ತಿದ್ದ ಎಂದು ತಿಳಿದು ಬಂದಿದೆ. ಅದಾದ ಕೆಲ ದಿನಗಳ ನಂತರ ಮತ್ತೊಬ್ಬ ವ್ಯಕ್ತಿ ಸಲ್ಮಾನ್‌ ಖಾನ್ ಕೊಲ್ಲುವುದಾಗಿ ಹೇಳಿ ಎರಡು ಕೋಟಿ ಬೇಡಿಕೆ ಇಟ್ಟಿದ್ದ. ಬೆದರಿಕೆ ಹಾಕಿದವನು ಜಾರ್ಖಂಡ್‌ನ ವ್ಯಕ್ತಿ ಎಂದು ತಿಳಿದು ಬಂದಿದೆ. ಜೆಮ್‌ಶೆಡ್‌ಪುರದಲ್ಲಿ ತರಕಾರಿ ಮಾರಾಟಮಾಡುತ್ತಿದ್ದ ಎಂದು ಗೊತ್ತಾಗಿದೆ. ಮುಂಬೈ ಪೊಲೀಸರು ಜೆಮ್‌ಶೆಡ್‌ಪುರದ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: Salman Khan: ʻಸಲ್ಮಾನ್‌ ಖಾನ್‌ಗಿಂತ ಲಾರೆನ್ಸ್‌ ಬಿಷ್ಣೋಯ್‌ ಬೆಟರ್‌ʼ- ಮಾಜಿ ಪ್ರೇಯಸಿ ಬಿಚ್ಚಿಟ್ಳು ಭಾಯ್‌ಜಾನ್‌ ಕುರಿತ ಶಾಕಿಂಗ್‌ ಸಂಗತಿ

ಅಕ್ಟೋಬರ್‌ 12ರಂದು ಎನ್‌ಸಿಪಿ ನಾಯಕ ಬಾಬಾ ಸಿದ್ದಕಿಯನ್ನು ಅವರ ಮಗನ ಕಚೇರಿಯ ಎದರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಲ್ಮಾನ್‌ ಆಪ್ತರಾಗಿದ್ದ ಬಾಬಾ ಸಿದ್ಧಿಕಿಯ ಕೊಲೆಯಾದ ನಂತರ ಸಲ್ಮಾನ್‌ ಖಾನ್‌ಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿತ್ತು. ʼಹಮ್‌ ಸಾಥ್‌ ಸಾಥ್‌ ಹೈʼ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ಸಲ್ಮಾನ್‌ ಕೃಷ್ಣ ಮೃಗ ಕೊಂದಿದ್ದರು ಎಂಬ ಆರೋಪವಿದೆ. ಬಿಷ್ಣೋಯ್‌ ಸಮಾಜವು ಪವಿತ್ರ ಎಂದು ಪೂಜಿಸುವ ಕೃಷ್ಣಮೃಗವನ್ನು ಸಲ್ಮಾನ್‌ ಖಾನ್‌ ಕೊಂದಿದ್ದು ಲಾರೆನ್ಸ್‌ ಬಿಷ್ಣೋಯ್‌ ಮತ್ತು ಬಿಷ್ಣೋಯ್‌ ಸಮಾಜದವರನ್ನು ಕೆರಳಿಸಿತ್ತು. ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ ಮೇಲೆ ಕೊಲೆ ಪ್ರಯತ್ನ ಮಾಡಿದ್ದು ಕೆಲ ವರ್ಷಗಳ ಹಿಂದೆ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿತ್ತು. ಸದ್ಯ ಲಾರೆನ್ಸ್‌ ಬಿಷ್ಣೋಯ್‌ ಹಲವು ಪ್ರರಣಗಳ ಆರೋಪದಲ್ಲಿ ಗುಜರಾತಿನ ಸಬರಮತಿ ಜೈಲಿನಲ್ಲಿದ್ದಾನೆ.