ನವದೆಹಲಿ : ಯಾವುದೇ ಹಬ್ಬ ಬಂತೆಂದರೆ ಸಾಕು ಸಿಹಿ ತಿಂಡಿ ಖರೀದಿ ಮಾಡುವುದು ವಾಡಿಕೆ. ಅದರಲ್ಲಿ ಸೋನ್ ಪಾಪ್ಡಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸೋನ್ ಪಾಪ್ಡಿ( Soan Papdi) ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಆದರೆ ಇತ್ತೀಚೆಗೆ ವಿಡಿಯೋವೊಂದು ವೈರಲ್ (Viral Video) ಆಗಿದ್ದು ಸಿಹಿ ಪ್ರಿಯರಿಗೆ ಶಾಕ್ ಕೊಟ್ಟಿದೆ.
ವಿಡಿಯೋದಲ್ಲಿ ಸೋನ್ ಪಾಪ್ಡಿ ಮಾಡುವ ವಿಧಾನವನ್ನು ಬಹಿರಂಗಪಡಿಸಿದ್ದು ವಿಡಿಯೋ ನೋಡಿದವರು ಸಾಕಪ್ಪಾ ಸೋನ್ ಪಾಪ್ಡಿ ಸಹವಾಸ ಎನ್ನುತ್ತಿದ್ದಾರೆ. ಸೋನ್‌ಪಾಪ್ಡಿ ಹಿಟ್ಟು ತಯಾರಿಸುವುದರೊಂದಿಗೆ ಪ್ರಾರಂಭವಾಗುವ ಈ ವಿಡಿಯೋ ಅತ್ಯಂತ ಗಲೀಜಾದ ಜಾಗದಲ್ಲಿ ಸೋನ್ ಪಾಪ್ಡಿ ತಯಾರು ಮಾಡುವುದನ್ನು ತೋರಿಸುತ್ತದೆ. ವ್ಯಕ್ತಿಯೊಬ್ಬ ಬರಿ ಕೈಯಲ್ಲಿ ಹಿಟ್ಟಿನ ಒಂದು ಭಾಗವನ್ನು ಹೊರಗೆ ತೆಗೆದುಕೊಂಡು, ಅದನ್ನು ಹಾಳೆಯ ಮೇಲೆ ಚಪ್ಪಟೆಗೊಳಿಸುತ್ತಾರೆ. ನಂತರ ಅದನ್ನು ಬೇಯಿಸಲಾಗುತ್ತದೆ. ಬೇಯಿಸಿದ ಮಿಶ್ರಣವನ್ನು ಎಣ್ಣೆ ಅಥವಾ ತುಪ್ಪದಲ್ಲಿ ಅದ್ದಲಾಗಿದೆ.ನಂತರ ಅದನ್ನು ಗೋಡೆಗೆ ಮೇಲೆ ಇಟ್ಟು ಅದು ಹೊಳಪು ಬರುವರೆಗೂ ಹದಮಾಡಲು ಶುರು ಮಾಡುತ್ತಾನೆ. ಅದು ಸರಿಯಾದ ಪಾಕ ಬಂದಾಗ ಅದನ್ನು ದಾರದ ಎಳೆಗಳಂತೆ ಮಾಡಲು ಕೋಲಿನಿಂದ ಹದ ಮಾಡಲಾಗುತ್ತದೆ. ನಂತರ ಅದನ್ನು ಪಾತ್ರೆಗೆ ಸುರಿದು ಅದನ್ನು ತುಂಡು ಮಾಡಿ ಬಾಕ್ಸ್‌ಗಳಲ್ಲಿ ತುಂಬಿದ್ದಾರೆ.
ಸಿಹಿ ತಾಯಾರು ಮಾಡುವ ಸಂದರ್ಭದಲ್ಲಿ ಎಲ್ಲಿಯೂ ಸ್ವಚ್ಛತೆ ಕಾಣಿಸುವುದಿಲ್ಲ. ಕೊಳಕಾದ ಗೋಡೆ ಮೇಲೆ ಹಾಕಿ ಹದ ಮಾಡಲಾಗುತ್ತದೆ. ವರ್ಷಗಳಿಂದ ತೊಳಿಯದ ಪಾತ್ರೆಯಲ್ಲಿ ತಯಾರು ಮಾಡುವುದನ್ನು ನೋಡಿದವರಿಗೆ ಇನ್ನು ಇದರ ಸಹವಾಸವೇ ಬೇಡ ಎಂದೆನಿಸುತ್ತದೆ.
ಇದನ್ನೂ ಓದಿ : Health Tips: ದೀಪಾವಳಿ ಸಿಹಿ ಭೋಜನದ ಬಳಿಕ ನಮ್ಮ ಶರೀರವನ್ನು ಮೊದಲ ಸ್ಥಿತಿಗೆ ತರುವುದು ಹೇಗೆ?
ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆ
ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿಯಲ್ಲಿ ಕಮೆಂಟ್ ಮಾಡಿದ್ದಾರೆ. ಈ ದೇವಮಾನವ ದೇಶದಲ್ಲಿ ನೈರ್ಮಲ್ಯವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಕಮೆಂಟ್ ಮಾಡಿ ನಾನು ಇವತ್ತಷ್ಟೇ ಒಂದು ಇಡೀ ಬಾಕ್ಸ್ ಸೋನ್ ಪಾಪ್ಡಿ ತಿಂದೆ ಎಂದು ತಲೆ ಚಚ್ಚಿಕೊಂಡಿದ್ದಾರೆ. ಇನ್ನೊಬ್ಬರು, ಅದಕ್ಕಾಗಿಯೇ ಇರಬೇಕು ನೆರೆ ಹೊರೆಯವರಿಗೆ ಸೋನ್ ಪಾಪ್ಡಿ ಹಂಚುವ ಪದ್ಧತಿಯಿರುವುದು ಎಂದಿದ್ದಾರೆ. ಇತ್ತೀಚೆಗೆ ಈ ತರಹದ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ.