Friday, 22nd November 2024

Job Guide: 10, 12ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್; ಯುರೇನಿಯಂ ಕಾರ್ಪೋರೇಷನ್‌ನಲ್ಲಿದೆ 115 ಹುದ್ದೆ

Job Guide

ಬೆಂಗಳೂರು: ಸರ್ಕಾರಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಯುರೇನಿಯಂ ಕಾರ್ಪೋರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (Uranium Corporation of India Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮೈನಿಂಗ್‌ ಮೇಟ್‌, ಬ್ಲಾಸ್ಟರ್‌ ಸೇರಿ ಒಟ್ಟು 115 ಹುದ್ದೆಗಳಿವೆ (UCIL Recruitment 2024). ಭಾರತದ ಎಲ್ಲಿಯಾದರೂ ಕಾರ್ಯ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು. 10 ಮತ್ತು 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಲು ಅರ್ಹರು. ಅಸಕ್ತರು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿ ನ. 30ರೊಳಗೆ ಕೈ ಸೇರಬೇಕು ಎಂದು ಯುರೇನಿಯಂ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ನ ಅದಿಸೂಚನೆ ತಿಳಿಸಿದೆ (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಮೈನಿಂಗ್‌ ಮೇಟ್‌ – ಸಿ – 64 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ
ಬ್ಲಾಸ್ಟರ್‌ – ಬಿ – 8 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ವೈಂಡಿಂಗ್ ಎಂಜಿನ್ ಡ್ರೈವರ್-ಬಿ – 10 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ಮೈನಿಂಗ್‌ ಮೇಟ್‌ – 33 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ

ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 32 ವರ್ಷದಿಂದ 50 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಶುಲ್ಕವಾಗಿ ಸಾಮಾನ್ಯ/ಇಡಬ್ಲ್ಯುಎಸ್‌/ಒಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳು 500 ರೂ. ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಸುಲ್ಕ ಪಾವತಿಸಬೇಕಾಗಿಲ್ಲ. ಪಾವತಿ ವಿಧಾನ: ಡಿಮ್ಯಾಂಡ್‌ ಡ್ರಾಫ್ಟ್‌. ಲಿಖಿತ ಪರೀಕ್ಷೆ, ಟ್ರೇಡ್‌ ಟೆಸ್ಟ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಮಾಸಿಕ ವೇತನ

ಮೈನಿಂಗ್‌ ಮೇಟ್‌ – ಸಿ – 29,190 ರೂ. – 45480 ರೂ.
ಬ್ಲಾಸ್ಟರ್‌ – ಬಿ – 28,790 ರೂ. – 44850 ರೂ.
ವೈಂಡಿಂಗ್ ಎಂಜಿನ್ ಡ್ರೈವರ್-ಬಿ – 28,790 ರೂ. – 44850 ರೂ.
ಮೈನಿಂಗ್‌ ಮೇಟ್‌ – 40,866 ರೂ. ಮಾಸಿಕ ವೇತನ ದೊರೆಯಲಿದೆ.

UCIL Recruitment 2024 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಫಾರಂ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (https://ucil.gov.in/pdf/job/Advt_08_2024.pdf)
  • ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಭರ್ತಿ ಮಾಡಿದ ಅಪ್ಲಿಕೇಷನ್‌ ಫಾರಂ ಅನ್ನು: Deputy General Manager (Personnel & IRs.), Uranium Corporation of India Limited, (A Government of India Enterprise), P.O. Jaduguda Mines, Distt-Singhbhum East, Jharkhand-832102- ಈ ವಿಳಾಸಕ್ಕೆ ಕಳುಹಿಸಿ. ಗಮನಿಸಿ ನಿಮ್ಮ ಅಪ್ಲಿಕೇಷನ್‌ ನ. 30ರೊಳಗೆ ತಲುಪುವಂತಿರಲಿ. ನಿಮ್ಮ ಅರ್ಜಿಯನ್ನು ರಿಜಿಸ್ಟರ್‌ ಪೋಸ್ಟ್‌, ಸ್ಪೀಡ್‌ ಪೋಸ್ಟ್‌ ಇತ್ಯಾದಿ ಮೂಲಕ ಕಳುಹಿಸಬೇಕು.

ಈ ಸುದ್ದಿಯನ್ನೂ ಓದಿ: Job Guide: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿದೆ 77 ಹುದ್ದೆ; ಹೀಗೆ ಅರ್ಜಿ ಸಲ್ಲಿಸಿ