ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆ (Jharkhand Assembly Election)ಗೆ ಮುಹೂರ್ತ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಇದೀಗ ʼಇಂಡಿಯಾʼ ಮೈತ್ರಿಕೂಟ (INDIA bloc) ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಯುವ ಜನತೆಗಾಗಿ 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಮತ್ತು ಬಡವರಿಗೆ 15 ಲಕ್ಷ ರೂ. ಆರೋಗ್ಯ ವಿಮೆ ಒದಗಿಸುವುದಾಗಿ ತಿಳಿಸಿದೆ. ಆ ಮೂಲಕ ವಿವಿಧ ವರ್ಗಗಳ ಮತದಾರರನ್ನು ಸೆಳೆಯಲು ಮುಂದಾಗಿದೆ.
ಜಾರ್ಖಂಡ್‌ನ ಆಡಳಿತಾರೂಢ ʼಇಂಡಿಯಾʼ ಮೈತ್ರಿಕೂಟವು ಪ್ರಣಾಳಿಕೆಯಲ್ಲಿ 7 ಗ್ಯಾರಂಟಿಗಳನ್ನು ಘೋಷಿಸಿದ್ದು, ಈ ವೇಳೆ ಮುಖ್ಯಮಂತ್ರಿ ಹೇಮಂತ್ ಸೊರೇನ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.
#WATCH | Kanke, Jharkhand | Congress president Mallikarjun Kharge says, "…A few people forget that the reservation that has been given, be it to SC, ST or OBC, or the rights that have been constitutionally given – for this the credit goes to those who gave us the freedom -… pic.twitter.com/UO2LVHoYJG
— ANI (@ANI) November 5, 2024
ʼಇಂಡಿಯಾʼ ಮೈತ್ರಿಕೂಟ ಘೋಷಿಸಿದ 7 ಗ್ಯಾರಂಟಿಗಳು
ಖತಿಯಾನ್ ಗ್ಯಾರಂಟಿ: ಸ್ಥಳೀಯ ಹಕ್ಕುಗಳನ್ನು ರಕ್ಷಿಸಲು 1932ರ ಖತಿಯಾನ್ ಆಧಾರದ ಮೇಲೆ ಸ್ಥಳೀಯ ನೀತಿಯನ್ನು ಜಾರಿಗೆ ತರಲಾಗುವುದು. ಶರಣ ಧರ್ಮ ಸಂಹಿತೆಯನ್ನು ಪರಿಚಯಿಸಲಾಗುವುದು ಮತ್ತು ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು.
ಮಹಿಳಾ ಸಮ್ಮಾನ್: ಮೈನಿಯಾ ಸಮ್ಮಾನ್ ಯೋಜನೆಯಡಿ ಡಿಸೆಂಬರ್‌ನಿಂದ ಮಹಿಳೆಯರ ಖಾತೆಗೆ 2,500 ಗೌರವದನ ಜಮೆ.
ಸಾಮಾಜಿಕ ನ್ಯಾಯದ ಗ್ಯಾರಂಟಿ: ಈ ಯೋಜನೆಯಡಿ ವಿವಿಧ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳ. ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಶೇ. 28ರಷ್ಟು, ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಶೇ. 12 ಮತ್ತು ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ಶೇ. 27ರಷ್ಟು ಮೀಸಲಾತಿ ನೀಡಲಾಗುವುದು. ಹೆಚ್ಚುವರಿಯಾಗಿ, ಹಿಂದುಳಿ ವರ್ಗಗಳಿಗೆ ಪ್ರತ್ಯೇಕ ಕಲ್ಯಾಣ ಸಚಿವಾಲಯ ರಚನೆ.
7 ಕೆಜಿ ಆಹಾರ ಧಾನ್ಯ: ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೆ ನೀಡಲಾಗುವ ಆಹಾರ ಧಾನ್ಯದ ಪ್ರಮಾಣವನ್ನು 5 ಕೆಜಿಯಿಂದ 7 ಕೆಜಿಗೆ ಹೆಚ್ಚಿಸಲಾಗುತ್ತದೆ. ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು 450. ರೂ.ಗೆ ಒದಗಿಸಲಾಗುತ್ತದೆ.
ಉದ್ಯೋಗದ ಗ್ಯಾರಂಟಿ: ಯುವ ಜನತೆಗಾಗಿ 10 ಲಕ್ಷ ಹುದ್ದೆಗಳನ್ನು ಸೃಷ್ಟಿಸುವುದಾಗಿ ಮತ್ತು ಬಡವರಿಗೆ 15 ಲಕ್ಷ ರೂ. ಆರೋಗ್ಯ ವಿಮೆ ಒಗದಿಸುವುದಾಗಿಯೂ ಭರವಸೆ ನೀಡಲಾಗಿದೆ.
ಶಿಕ್ಷಣದ ಗ್ಯರಂಟಿ: ಪ್ರತಿ ಬ್ಲಾಕ್‌ನಲ್ಲಿ ಪದವಿ ಕಾಲೇಜು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು. ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೀತಿಗಳನ್ನು ರೂಪಿಸಲಾಗುವುದು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ 500 ಎಕರೆ ಕೈಗಾರಿಕಾ ಪಾರ್ಕ್‌ಗಳನ್ನು ನಿರ್ಮಿಸುವ ಯೋಜನೆ ಇದೆ.
ಕೃಷಿಕರಿಗಾಗಿ ಗ್ಯಾರಂಟಿ: ರೈತರ ಜೀವನ ಮಟ್ಟ ಸುಧಾರಿಸಲು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲಾಗುತ್ತದೆ. ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 2,400 ರೂ.ಗಳಿಂದ 3,200 ರೂ.ಗೆ ಹೆಚ್ಚಿಸಲಾಗುವುದು. ಹೆಚ್ಚುವರಿಯಾಗ, ಕೃಷಿ ಉತ್ಪನ್ನಗಳಾದ ಲ್ಯಾಕ್, ಟಸ್ಸರ್, ಕಾರಂಜಾ, ಹುಣಸೆ, ಮಹುವಾ, ಚಿರೋಂಜಿ ಮತ್ತು ಸಾಲ್ ಬೀಜಗಳ ಬೆಂಬಲ ಬೆಲೆಯನ್ನು ಶೇ. 50ರವರೆಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದೆ.
झारखंड के लिए INDIA की 7 गारंटी
— Congress (@INCIndia) November 5, 2024
🔷 गारंटी खाद्य सुरक्षा की
• 450 रुपए में गैस सिलेंडर
• हर व्यक्ति को 7 किलो राशन
🔷 गारंटी 1932 आधारित खतियान की
• 1932 आधारित खतियान पर स्थानीयता नीति लाई जाएगी
• सरना धर्म कोड लागू होगा
🔷 गारंटी मैया सम्मान की
• महिलाओं को 2,500… pic.twitter.com/lU8NsYEqW3
ಈ ಸುದ್ದಿಯನ್ನೂ ಓದಿ: Jharkhand Assembly Election: ಸೀಟು ಹಂಚಿಕೆ ಬಗ್ಗೆ ಅಸಮಾಧಾನ; ಜಾರ್ಖಂಡ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಆರ್‌ಜೆಡಿ ನಿರ್ಧಾರ