Friday, 22nd November 2024

BBK 11: ಟ್ರೋಲ್ ಮಾಡಿದವರಿಗೆ ಮುಟ್ಟಿನೋಡುವಂತಹ ಉತ್ತರ ಕೊಟ್ಟ ಮಾನಸಾ: ಏನು ಹೇಳಿದ್ರು?

Manasa

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಐದನೇ ವಾರ ತುಕಾಲಿ ಮಾನಸ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಕಳೆದ ಕೆಲ ವಾರಗಳಿಂದ ಮಾನಸಾ ವಿರುದ್ಧ ಮನೆಮಂದಿ ಸಾಕಷ್ಟು ದೂರುಗಳನ್ನು ನೀಡಿದ್ದರು. ಇದೇ ಇವರ ಎಲಿಮಿನೇಷನ್​ಗೆ ಕಾರಣವಾಯಿತು ಎನ್ನಬಹುದು. ತನ್ನದಲ್ಲದ ವಿಷಯಗಳಿಗೆ ಮೂಗು ತೂರಿಸಿಕೊಂಡು ಬಂದು ಜಗಳ ಆಡುವುದು, ಇತರರ ಚರ್ಚೆಗಳಲ್ಲಿ ತಾನಾಗಿಯೇ ಭಾಗವಹಿಸಿ ಆ ಚರ್ಚೆಯ ದಿಕ್ಕನ್ನೇ ತಪ್ಪಿಸುವುದು, ಮಾತಾಡುವಾಗ ತಮಗಿಷ್ಟ ಬಂದಂತೆ ಅಗೌರವವಾಗಿ ಮಾತಾಡೋದು, ನಾಲಿಗೆ ಮೇಲೆ ಹಿಡಿತ ಕಡಿಮೆ ಎಂದು ಮಾನಸಾ ವಿರುದ್ಧ ಸ್ಪರ್ಧಿಗಳು ದೂರಿದ್ದರು.

ಮಾನಸಾ ಮನೆಯಿಂದ ಹೊರಬಂದ ಬೆನ್ನಲ್ಲೇ ಇವರ ಪತಿ ತುಕಾಲಿ ಸಂತು ಕ್ಷಮ ಕೇಳಿದ್ದರು. ಮಾನಸಾ ಎಲಿಮಿನೇಟ್​ ಆಗಿದ್ದಕ್ಕೆ ಬೇಸರ ಇದೆ. ಖುಷಿ ಕೂಡ ಇದೆ. ಹಳ್ಳಿಯಲ್ಲಿ ಹುಟ್ಟಿ, ಕಡು ಬಡತನದಲ್ಲಿ ಕುಟುಂಬ ಸಾಗಿಸುತ್ತಿದ್ದಳು. ಅವಳ ಬದುಕಿಗೆ ನಾನು ಬಂದೆ. ಅವಳು ಇಷ್ಟು ದೊಡ್ಡ ರಿಯಾಲಿಟಿ ಶೋಗೆ ಬಂದಿದ್ದಾಳೆ ಎಂದರೆ ಅದೇ ಅವಳ ದೊಡ್ಡ ಗೆಲುವು. ಆಕೆಯ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವಳ ಪರವಾಗಿ ಕ್ಷಮೆ ಕೇಳುತ್ತೇನೆ. ಮಾನಸನಾ ಯಾವತ್ತೂ ನಾನು ಬಿಟ್ಟುಕೊಡಲ್ಲ ಎಂದು ಹೇಳಿದ್ದರು.

ಮನೆಯೊಳಗೆ ಇದ್ದಾಗ ಮಾನಸಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಕೂಡ ಆಗಿದ್ದರು. ಬೇರೆ ಬೇರೆ ಪ್ರಾಣಿಗಳ ಪಕ್ಕ ಮಾನಸ ಅವರ ಫೋಟೋವನ್ನು ಹಾಕಿ ಟ್ರೋಲ್​ ಮಾಡಿದ್ದರು. ಆ ಟ್ರೋಲ್​ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದ್ದವು. ಇದೇ ವಿಚಾರವಾಗಿ ಬಿಗ್​ ಬಾಸ್​ ಮನೆಯಿಂದ ಆಚೆ ಬಂದ ಮೇಲೆ ಮಾನಸಾ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಯಾವುದೇ ಕಾರಣಕ್ಕೂ ನನಗೆ ಬೇಸರ ಆಗಿಲ್ಲ. ಆದ್ರೆ ನನಗಾಗಿ ಟೈಮ್​ ಕೊಟ್ಟು ಫೋಟೋ ಹಾಕಿದ್ದಾರೆ. ಮೊದ ಮೊದಲು ನನಗೆ ಫೋಟೋ ನೋಡಿ ಜಿಗುಪ್ಸೆ ಬಂತು. ಅದನ್ನೂ ನೋಡಿ ಅಳ್ತಾ ಇದ್ದೆ. ಆಮೇಲೆ ಸಂತು ನನಗೆ ಸಮಧಾನ ಮಾಡಿದ್ದರು. ಆದರೆ ಕೆಲವರು ತುಂಬಾ ಅಸಹ್ಯವಾಗಿ ಟ್ರೋಲ್​ ಮಾಡಿದವರ ಮನೆಯವರು ಸುಂದರವಾಗಿ ಇದ್ದಾರಾ? ಪ್ರಪಂಚದಲ್ಲಿ ಚೆನ್ನಾಗಿ ಇಲ್ಲದೇ ಇರೋರು ಕೂಡ ಇರ್ತಾರೆ ಅಲ್ವಾ ಎಂದು ಹೇಳಿದ್ದಾರೆ. ಅತ್ತ ಸಂತು ಅವರು, ನನ್ನ ಹೆಂಡತಿ ಸೋಷಿಯಲ್​ ಮೀಡಿಯಾದಲ್ಲಿ ಇಷ್ಟೋಂದು ಫೇಮಸ್ ಆಗೋದಕ್ಕೆ  ಟ್ರೋಲರ್ಸ್​ಗಳೇ ಕಾರಣ ಎಂದಿದ್ದಾರೆ.

BBK 11: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್: ಈ ವಾರ ಮನೆಯಿಂದ ಹೊರಹೋಗಲು 5 ಬಲಿಷ್ಠ ಸ್ಪರ್ಧಿಗಳು ನಾಮಿನೇಟ್