Friday, 22nd November 2024

Zambia People: ಈ ದೇಶದಲ್ಲಿ ಹೆಂಗಸರನ್ನು ಕಂಡರೆ ಸಾಕು, ಗಂಡಸರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ!

Zambia People

ಕೆಲವರಿಗೆ ನಾಚಿಕೆ ಸ್ವಭಾವ ಜಾಸ್ತಿ. ಇನ್ನು ಕೆಲವರಿಗೆ ಏನೇ ಹೇಳಿದರೂ ನಾಚಿಕೆಯೇ ಇಲ್ಲ. ಆದರೆ ಇಲ್ಲೊಂದು ದೇಶದಲ್ಲಿ ಜನರಿಗೆ ನಾಚಿಕೆ ಸ್ವಭಾವ ಜಾಸ್ತಿಯಂತೆ. ಅವರು ಅಪರಿಚಿತರನ್ನು ನೋಡಿದರೆ ಬಿಡಿ ತಮ್ಮ ಮನೆಯವರ ಮುಂದೆಯೂ ನಾಚಿಕೆ ವ್ಯಕ್ತಪಡಿಸುತ್ತಾರೆ. ಈ ದೇಶದಲ್ಲಿ ಗಂಡ ಮತ್ತು ಹೆಂಡತಿ ಒಟ್ಟಿಗೆ ತಿನ್ನಲು ಸಹ ನಾಚಿಕೆಪಡುತ್ತಾರಂತೆ. ಜಾಂಬಿಯಾ (Zambia People) ದೇಶದ ಜನರ ವಿಚಿತ್ರ ಸ್ವಭಾವದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಜಾಂಬಿಯಾ ಆಫ್ರಿಕಾ ಖಂಡದ ಪೂರ್ವ ಭಾಗದಲ್ಲಿದೆ. ಲುಸಾಕಾ ಈ ದೇಶದ ರಾಜಧಾನಿ. ಇದು ಅತ್ಯಂತ ದೊಡ್ಡ ನಗರವಾಗಿದೆ. ಜಾಂಬಿಯಾದ ಒಟ್ಟು ವಿಸ್ತೀರ್ಣ 752,614 ಚದರ ಕಿಲೋಮೀಟರ್. ಈ ದೇಶವು ಉತ್ತರದಲ್ಲಿ ಕಾಂಗೋ ಮತ್ತು ಟಾಂಜಾನಿಯಾ, ಪೂರ್ವದಲ್ಲಿ ಮಲವಿ, ಆಗ್ನೇಯದಲ್ಲಿ ಮೊಜಾಂಬಿಕ್, ದಕ್ಷಿಣದಲ್ಲಿ ಜಿಂಬಾಬ್ವೆ, ದಕ್ಷಿಣದಲ್ಲಿ ನಮೀಬಿಯಾದ ಬೋಟ್ಸ್ವಾನಾ ಮತ್ತು ಕ್ಯಾಪ್ರಿವಿಯಾ ಮತ್ತು ಪಶ್ಚಿಮದಲ್ಲಿ ಅಂಗೋಲಾವನ್ನು ಹೊಂದಿದೆ.

Zambia People

ಈ ದೇಶದಲ್ಲಿ, ಪುರುಷರು ಈಜುಕೊಳಕ್ಕೆ ಹೋಗಿ  ಸ್ನಾನ ಮಾಡುತ್ತಾರೆ. ಒಂದು ವೇಳೆ ಅಲ್ಲಿಗೆ ಯಾರಾದರೂ ಮಹಿಳೆ ಬಂದರೆ ಸಾಕು ಎಲ್ಲಾ ಪುರುಷರು ನಾಚಿಕೆಯಿಂದ ಎದ್ದು ಹೋಗುತ್ತಾರೆ. ಹಾಗಾಗಿ ಮಹಿಳೆಯರು ಆ ಸ್ಥಳಗಳಿಗೆ ಹೋಗುವುದಿಲ್ಲ. ಅಷ್ಟೇ ಅಲ್ಲದೇ ಹೆಂಡತಿಯರು ಸಹ ತಮ್ಮ ಗಂಡಂದಿರೊಂದಿಗೆ ಸ್ನಾನ ಮಾಡಲು ನಾಚಿಕೆಪಡುತ್ತಾರೆ. ಮತ್ತು ತಮ್ಮ  ಗಂಡ ಸ್ನಾನ ಮಾಡುವ ಸ್ಥಳಕ್ಕೆ ಹೆಂಡತಿ ಹೋಗುವುದಿಲ್ಲವಂತೆ.

ಇನ್ನು ಈ ದೇಶದಲ್ಲಿ ಜನರು ಹಸಿವಾದವರಿಗೆ ಆಹಾರ ನೀಡುವುದನ್ನು ಕೂಡ ಅಗೌರವವೆಂದು ಪರಿಗಣಿಸುತ್ತಾರಂತೆ. ಹಾಗಾಗಿ ಇಲ್ಲಿ ಯಾರು ಹಸಿವಾಗುತ್ತದೆ ಊಟ ಕೊಡಿ ಎಂದು ಹೇಳುವ ಹಾಗಿಲ್ಲ. ಒಂದೇ ಅವರು ಹಸಿವಿನಿಂದ ಬಳಲಬೇಕು ಅಥವಾ ತಮ್ಮ ಸ್ವಂತ ಆಹಾರವನ್ನು ತಾವೇ ತಯಾರಿಸಿ ತಿನ್ನಬೇಕು.  ಹಾಗೇ ಮನೆಗೆ ಅತಿಥಿಗಳು ಬಂದರೆ ಅವರನ್ನು ಆದರದಿಂದ ಸ್ವಾಗತಿಸುತ್ತಾರೆ. ಅಷ್ಟೇ ಅಲ್ಲ, ಅವರು ಹೊರಡುವ ಮೊದಲು ಉಡುಗೊರೆಗಳನ್ನು ಸಹ ನೀಡುತ್ತಾರೆ. ಈ ದೇಶದಲ್ಲಿ  ಬಹುತೇಕವಾಗಿ ಎಲ್ಲಾ ಹುಡುಗಿಯರು ವಿಗ್‍ಗಳನ್ನು ಬಳಸುತ್ತಾರೆ. ಏಕೆಂದರೆ ಅವರಿಗೆ ತಮ್ಮ ಕೂದಲು ಚಿಕ್ಕದಾಗಿರುವುದು  ಇಷ್ಟವಿರುವುದಿಲ್ಲ. ಹಾಗಾಗಿ ಮನೆಯಿಂದ ಹೊರಗೆ ಹೋಗಲು ನಾಚಿಕೆ ಪಡುತ್ತಾರೆ. ಅದಕ್ಕಾಗಿಯೇ ಇಲ್ಲಿ ಬಟ್ಟೆ ಅಂಗಡಿಗಳಿಗಿಂತ ಹೆಚ್ಚು ವಿಗ್ ಅಂಗಡಿಗಳಿವೆ. ವಿಗ್‍ಗಳನ್ನು ವಿದೇಶದಿಂದ ಆಮದು ಕೂಡ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ:ಬಿಡಿಗಾಸಿಲ್ಲದಿದ್ರೂ ಮೂರು-ಮೂರು ಜನ ಗರ್ಲ್‌ಫ್ರೆಂಡ್ಸ್‌… ಇಂಪ್ರೆಸ್‌ ಮಾಡೋಕೆ ಕೊಡ್ಲೇ ಬೇಕು ಕಾಸ್ಟ್ಲಿ ಗಿಫ್ಟ್‌- ತಲೆಕೆಟ್ಟ ಯುವಕ ಮಾಡಿದ್ದೇನು ಗೊತ್ತಾ?

ನೊಸಿಮಾ ಈ ದೇಶದ ಪ್ರಧಾನ ಆಹಾರವಾಗಿದೆ. ಇದನ್ನು ಜೋಳದಿಂದ ತಯಾರಿಸಲಾಗುತ್ತದೆ. ಇಲ್ಲಿನ ಜನರು ತಿನ್ನುವ ಏಕೈಕ ಆಹಾರ ಇದು. ಯಾವುದೇ ಆಚರಣೆಯ ಸಮಯದಲ್ಲಿ, ಎಲ್ಲರೂ ಒಟ್ಟಿಗೆ ಕುಳಿತು ತಿನ್ನಬೇಕು. ಊಟವಾದ ನಂತರವೂ ಒಬ್ಬೊಬ್ಬರೆ ಎದ್ದೇಳುವ ಹಾಗೇ ಇಲ್ಲ.  ಎಲ್ಲರೂ ಊಟ ಮಾಡಿದ ನಂತರವೇ ಎದ್ದೇಳಬೇಕು. ಅಲ್ಲದೇ ಎರಡೂ ಕೈಗಳಿಂದ ತಿನ್ನುವುದನ್ನು ಇಲ್ಲಿನ ಜನರು  ಪಾಪವೆಂದು ಪರಿಗಣಿಸುತ್ತಾರೆ. ಇದು ಆಹಾರಕ್ಕೆ ಮಾಡಿದ ಅವಮಾನ ಎಂದು ಹೇಳಲಾಗುತ್ತದೆ.