Friday, 22nd November 2024

Stock Market: ಟ್ರಂಪ್‌ ಜಯಭೇರಿ ಬೆನ್ನಲ್ಲೇ ಷೇರುಪೇಟೆಯಲ್ಲಿ ಸಂಚಲನ; ಸೆನ್ಸೆಕ್ಸ್‌ನಲ್ಲಿ 1,000 ಪಾಯಿಂಟ್ಸ್ ಜಂಪ್‌

stock market

ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election 2024) ಮತ ಎಣಿಕೆ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ತಲುಪಿ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಪ್ರಚಂಡ ಗೆಲುವು ಸಾಧಿಸಿದ್ದಾರೆ. ಎರಡನೇ ಬಾರಿ ಡೊನಾ‍ಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಏರಲಿರುವುದು ಸ್ಪಷ್ಟವಾಗುತ್ತಿರುವಾಗಲೇ ಷೇರುಪೇಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಬುಧವಾರ (ನ.06) ಮಧ್ಯಾಹ್ನ ಹೊರಬೀಳುತ್ತಿದ್ದಂತೆಯೇ ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ ಸೂಚ್ಯಂಕ ಬರೋಬ್ಬರಿ 1,000 ಅಂಕಗಳ ಏರಿಕೆಯೊಂದಿಗೆ ವಹಿವಾಟು ನಡೆದಿದೆ(Stock Market).

ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಟ್ರಂಪ್‌ ಘೋಷಿಸುತ್ತಿದ್ದಂತೆಯೇ ದಲಾಲ್‌ ಸ್ಟ್ರೀಟ್‌ ವಹಿವಾಟಿನ ಮೇಲೆ ಭರ್ಜರಿ ಪರಿಣಾಮ ಬೀರಿದೆ. ಷೇರುಪೇಟೆ ಸೆನ್ಸೆಕ್ಸ್‌ ಸೂಚ್ಯಂಕ 1,055.31 ಅಂಕಗಳ ಏರಿಕೆಯೊಂದಿಗೆ 80,531.94 ಅಂಕಗಳಲ್ಲಿ ವಹಿವಾಟು ನಡೆಸಿದೆ. ನಿಫ್ಟಿ 50, 311.95 ಅಂಕಗಳಲ್ಲಿ ಏರಿಕೆಯೊಂದಿಗೆ 24,525.25 ಅಂಕಗಳ ಗಡಿ ತಲುಪಿದೆ.

ಅಮೆರಿಕ ಚುನಾವಣ ಫಲಿತಾಂಶದ ಪೂರ್ಣ ಚಿತ್ರಣ ಹೊರಬೀಳುತ್ತಿದ್ದಂತೆಯೇ ಷೇರುಪೇಟೆ ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡುಬಂದಿದೆ. ಇನ್ನು ಐಟಿ, ಎಚ್‌ ಸಿಎಲ್‌ ಟೆಕ್‌, ಇನ್ಫೋಸಿಸ್‌, ಟೆಕ್‌ ಮಹೀಂದ್ರ ಮತ್ತು ವಿಪ್ರೋ ಷೇರುಗಳು ಲಾಭಗಳಿಸಿದೆ. ಟ್ರಂಪ್‌ ಗೆಲುವಿನ ಸುದ್ದಿ ಅಮೆರಿಕದ ಈಕ್ವಿಟಿ ಮಾರುಕಟ್ಟೆ ಚೇತರಿಕೆ ಕಂಡಿದ್ದು, ಭಾರತದ ಷೇರುಪೇಟೆ ಲಾಭಗಳಿಸುವಂತೆ ಮಾಡಿದೆ. ರಿಪಬ್ಲಿಕನ್ ಗೆಲುವು ತಾತ್ಕಾಲಿಕವಾಗಿ US ಷೇರುಗಳನ್ನು ಹೆಚ್ಚಿಸಬಹುದು ಮತ್ತು ಭಾರತೀಯ IT ಸ್ಟಾಕ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ

ಟ್ರಂಪ್‌ರ ಗೆಲುವು ಎಲೋನ್ ಮಸ್ಕ್‌ನ ಟೆಸ್ಲಾ ಸೇರಿದಂತೆ ಹೆವಿವೇಯ್ಟ್ ಯುಎಸ್ ಇಕ್ವಿಟಿಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರಬಹುದು, ಇದು ಪ್ರಬಲವಾದ ರ್ಯಾಲಿಯನ್ನು ಸಮರ್ಥವಾಗಿ ಚಾಲನೆ ಮಾಡುತ್ತದೆ. ಈಕ್ವಿರಸ್ ಅರ್ಥಶಾಸ್ತ್ರಜ್ಞೆ ಅನಿತಾ ರಂಗನ್ ಪ್ರಕಾರ, “ಡೊನಾಲ್ಡ್ ಟ್ರಂಪ್ ಅವರ ವಿಜಯವು ಅಮೆರಿಕದಲ್ಲಿ ವೆಚ್ಚದ ಪ್ರಮಾಣವನ್ನು ಹೆಚ್ಚಿಸಬಹುದು. ಹಣದುಬ್ಬರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಬಹುದು.

ಈ ಸುದ್ದಿಯನ್ನೂ ಓದಿ: US presidential elections 2024: ಭಾರತೀಯ ನಟಿ ಅಮೆರಿಕದಲ್ಲಿ ವೋಟಿಂಗ್‌; ನೆಟ್ಟಿಗರು ಫುಲ್‌ ಸರ್ಪ್ರೈಸ್‌!

ಇಡೀ ಪ್ರಪಂಚವೇ ಕಣ್ಣು ನೆಟ್ಟಿದ್ದ ಅಮೆರಿಕ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿದ್ದು, ಎರಡನೇ ಬಾರಿ ಡೊನಾಲ್ಡ್‌ ಟ್ರಂಪ್‌ ಗದ್ದುಗೆ ಏರುವುದು ಖಚಿತವಾಗಿದೆ. ಮಂಗಳವಾರದಿಂದ ನಡೆದ ಚುನಾವಣೆಯ ಮತ ಎಣಿಕೆ ಕೊನೆಯ ಹಂತದಲ್ಲಿದ್ದು, ರಿಪಬ್ಲಿಕ್‌ ಪಕ್ಷ ಅಭ್ಯರ್ಥಿಯಾಗಿರುವ ಡೊನಾಲ್ಡ್‌ ಟ್ರಂಪ್‌ ಮ್ಯಾಜಿಕ್‌ ನಂಬರ್‌ 270ರ ಸನಿಹದಲ್ಲಿದ್ದಾರೆ. ಇನ್ನು ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ 214 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ.