Sunday, 24th November 2024

CM Siddaramaiah: ಲೋಕಾಯುಕ್ತ ಕಚೇರಿಗೆ ಖಾಸಗಿ ಕಾರಿನಲ್ಲಿ ತೆರಳಿದ ಸಿಎಂ, ವಿಚಾರಣೆಯಲ್ಲಿ ಏನಾಯ್ತು?

cm siddaramaiah

ಮೈಸೂರು: ಮುಡಾ ಹಗರಣದ (MUDA case, MUDA scam) ಕುರಿತ ವಿಚಾರಣೆಗಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇಂದು ಬೆಳಗ್ಗೆ ಮೈಸೂರಿನಲ್ಲಿರುವ (Mysuru news) ಲೋಕಾಯುಕ್ತ (Lokayukta) ಕಚೇರಿಗೆ ತೆರಳಿದರು. ಈ ಸಂದರ್ಭದಲ್ಲಿ ಅವರು ಸರ್ಕಾರಿ ಕಾರು, ಬೆಂಗಾವಲು ಪಡೆ ವಾಹನಗಳನ್ನು ಕೈಬಿಟ್ಟು ಖಾಸಗಿ ವಾಹನದಲ್ಲಿ ತೆರಳಿದ್ದು ಕಂಡುಬಂತು.

ಮುಡಾ ಹಗರಣದಲ್ಲಿ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ಬುಧವಾರ ವಿಚಾರಣೆಗೆ ಹಾಜರಾದರು. ಅವರ ಜೊತೆಗೆ ಕಾನೂನು ಸಲಹೆಗಾರ ಪೊನ್ನಣ್ಣ ಮಾತ್ರ ಇದ್ದರು. ಸಿಎಂ ಯಾವುದೇ ಸರ್ಕಾರಿ ಸವಲತ್ತುಗಳನ್ನು ಬಳಸಲಿಲ್ಲ.

ಮಂಗಳವಾರ ಕಾನೂನು ಸಲಹೆಗಾರರು ಹಾಗೂ ಪ್ರಮುಖರ ಜತೆ ಸಭೆ ನಡೆಸಿದ ನಂತರ ಸಿಎಂ ಈ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಮುಡಾ ಹಗರಣದ ಸಂಬಂಧ ಲೋಕಾಯುಕ್ತ ತನಿಖೆಯ ಪ್ರಾಮಾಣಿಕತೆಯ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆ ಮಾಡಿವೆ. ತನಿಖೆ ಮೇಲೆ ಸರ್ಕಾರ ಪ್ರಭಾವ ಬೀರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದೆ. ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರಿ ವಾಹನ, ಬೆಂಗಾವಲು ಪಡೆಯೊಂದಿಗೆ ವಿಚಾರಣೆಗೆ ತೆರಳಿದರೆ ಪ್ರತಿಪಕ್ಷಗಳು ಟೀಕೆ ಮಾಡಲು ಮತ್ತಷ್ಟು ಆಹಾರ ಒದಗಿಸಿದಂತಾಗುವ ಸಾಧ್ಯತೆ ಇದೆ. ಹೀಗಾಗಿ ವಿಪಕ್ಷಗಳನ್ನು ನಿಶ್ಶಸ್ತ್ರರಾಗಿಸಲು ಸಿದ್ದರಾಮಯ್ಯ ಈ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.

ಲೋಕಾಯುಕ್ತ ವಿಚಾರಣೆಯನ್ನು ಸಿಎಂ ಕೂಲ್‌ ಆಗಿ ಎದುರಿಸಿದರು ಎಂದು ತಿಳಿದುಬಂದಿದೆ. ಸಿಎಂಗೆ ಕೇಳಲು 20ಕ್ಕೂ ಹೆಚ್ಚು ಪ್ರಶ್ನೆಗಳನ್ನು ಲೋಕಾಯುಕ್ತ ಪೊಲೀಸರು ಸಿದ್ಧ ಮಾಡಿಕೊಂಡಿದ್ದರು. ಪ್ರಕರಣದ ಬಗ್ಗೆ ಏನೆಲ್ಲ ಮಾಹಿತಿ ನಿಮ್ಮ ಬಳಿ ಇದೆ, 14 ನಿವೇಶನಗಳನ್ನು ನಿಮ್ಮ ಪತ್ನಿ ಮುಡಾದಿಂದ ಪಡೆದಿರುವುದರ ಹಿಂದೆ ನಿಮ್ಮ ಪ್ರಭಾವ ಬಳಕೆ ಆಗಿದೆಯೇ, ಭೂಮಿ ಕಳೆದುಕೊಂಡ ಬಡಾವಣೆಗೆ ಬದಲಾಗಿ ವಿಜಯನಗರದಲ್ಲಿ ನಿವೇಶನ ಬೇಕು ಅಂತ ಅರ್ಜಿ ಹಾಕಿದ್ದಿರಾ, ನಿಮ್ಮ ಪುತ್ರ ಯತೀಂದ್ರ ನಿವೇಶನ ಹಂಚಿಕೆ ಸಂಧರ್ಭದಲ್ಲಿ ಮುಡಾ ಸಭೆಯಲ್ಲಿ ಇದ್ದರು ಎಂಬುದು ನಿಜವೇ ಮುಂತಾದ ಪ್ರಶ್ನೆಗಳನ್ನು ಸಿಎಂಗೆ ಕೇಳಲಾಗಿದೆ.

ಇದನ್ನೂ ಓದಿ: Muda Case: ಮುಡಾ ಹಗರಣದ ಸಿಬಿಐ ತನಿಖೆ ಕೋರಿ ಅರ್ಜಿ; ಸಿಎಂಗೆ ಹೈಕೋರ್ಟ್ ನೋಟಿಸ್‌, ವಿಚಾರಣೆ ನ.26ಕ್ಕೆ ಮುಂದೂಡಿಕೆ