Thursday, 21st November 2024

Actor Darshan: ಜೀವ ಬೆದರಿಕೆ; ನಟ ದರ್ಶನ್‌, ಅಭಿಮಾನಿಗಳ ವಿರುದ್ಧ ಲಾಯರ್‌ ಜಗದೀಶ್‌ ದೂರು

Actor Darshan

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ (Actor Darshan) ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ನಟ ದರ್ಶನ್ ಹಾಗೂ ಅಭಿಮಾನಿಗಳ ವಿರುದ್ಧ ಬಿಗ್‌ಬಾಸ್‌ ಖ್ಯಾತಿಯ ಲಾಯರ್ ಜಗದೀಶ್ ದೂರು ದಾಖಲಿಸಿದ್ದಾರೆ.

ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ವಕೀಲ ದೂರು ದಾಖಲಿಸಿದ್ದಾರೆ. ಬಿಗ್ ಬಾಸ್ ಶೋನಿಂದ ಹೊರಬಂದಿರುವ ಲಾಯರ್ ಜಗದೀಶ್, ಸಾಮಾಜಿಕ ಜಾಲತಾಣಗಳಲ್ಲಿ ಎಂದಿನಂತೆ ಆ್ಯಕ್ಟೀವ್‌ ಆಗಿದ್ದಾರೆ. ನಟ ದರ್ಶನ್ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಅವರು ದರ್ಶನ್ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾ ಟೀಕಿಸಿದ್ದರು. ಇದೇ ವಿಚಾರವಾಗಿ ಲಾಯರ್ ಜಗದೀಶ್‌ಗೆ ದರ್ಶನ್ ಕೆಲ ಅಭಿಮನಿಗಳು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ದರ್ಶನ್ ಹಾಗೂ ಅಭಿಮಾನಿಗಳ ವಿರುದ್ಧ ಜಗದೀಶ್ ದೂರು ನೀಡಿದ್ದಾರೆ.

ನಾನು ದರ್ಶನ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ನನಗೆ ಬೆದರಿಕೆ ಹಾಕಿದ್ದಾರೆ. ಎರಡು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಕರೆಗಳನ್ನು ಮಾಡಿ ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ. ದರ್ಶನ್ ಅಭಿಮಾನಿ ರಿಷಿ ಎಂಬಾತ ಹಲವು ಬಾರಿ ನನಗೆ ಕರೆ ಮಾಡಿ ಕೊಲೆ ಮಾಡುವುದಾಗಿ ಹೆದರಿಸಿದ್ದಾನೆ. ಇದನ್ನೆಲ್ಲ ದರ್ಶನ್ ಮಾಡಿಸುತ್ತಿದ್ದು, ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಜಗದೀಶ್‌ ಉಲ್ಲೇಖಿಸಿದ್ದಾರೆ.

ದರ್ಶನ್‌ ನೆಟ್‌ವರ್ಕ್ ದೊಡ್ಡದಿದೆ. ಅವರಿಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ನಟ ದರ್ಶನ್ ಹಾಗೂ ರಿಷಿ ಇಬ್ಬರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಗದೀಶ್‌ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಲೋಕಾಯುಕ್ತ ಕಚೇರಿಗೆ ಖಾಸಗಿ ಕಾರಿನಲ್ಲಿ ತೆರಳಿದ ಸಿಎಂ, ವಿಚಾರಣೆಯಲ್ಲಿ ಏನಾಯ್ತು?

ಶಾಸಕ ಮುನಿರತ್ನ ವಿರುದ್ಧ ಅವಹೇಳನಕಾರಿ ಪೋಸ್ಟರ್

munirathna poster

ಬೆಂಗಳೂರು: ಅತ್ಯಾಚಾರ (Physical Abuse) ಆರೋಪದಡಿ ಬಂಧನಕ್ಕೀಡಾಗಿ, ಜಾಮೀನು ಪಡೆದು ಹೊರಗಿರುವ ಬಿಜೆಪಿ ಶಾಸಕ ಮುನಿರತ್ನ (BJP MLA Munirathna) ಅವರ ಕುರಿತ ಅವಹೇಳನಕಾರಿ ಪೋಸ್ಟರ್‌ಗಳು ಬೆಂಗಳೂರಿನ ಆರ್‌ಆರ್‌ ನಗರದಲ್ಲಿ (Bengaluru news) ಕಂಡುಬಂದಿವೆ. ಮುನಿರತ್ನ ಅವರು ಆರ್‌ಆರ್‌ ನಗರದ ಶಾಸಕರಾಗಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೆಲವು ಗೋಡೆಗಳಲ್ಲಿ ಪೋಸ್ಟರ್‌ಗಳು ಕಂಡುಬಂದಿವೆ. ಕಿಡಿಗೇಡಿಗಳು ರಾತ್ರೋರಾತ್ರಿ ಗೋಡೆಗಳ ಮೇಲೆ ಪೋಸ್ಟರ್​ ಅಂಟಿಸಿ ಪರಾರಿಯಾಗಿದ್ದಾರೆ. “AIDS Trap and Rape ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ” ಎಂದು ಪೋಸ್ಟರ್‌ಗಳ ಮೇಲೆ ಮುನಿರತ್ನ ಚಿತ್ರದ ಸಹಿತ ಮುದ್ರಿಸಲಾಗಿದೆ.

ಕೆಲವು ಪೋಸ್ಟರ್‌ಗಳು ಆರ್.ಆರ್.ನಗರ ಪ್ರವೇಶ ದ್ವಾರದ ತಡೆಗೋಡೆಗಳಲ್ಲಿ ಕಂಡುಬಂದಿವೆ. ಆರ್‌ಆರ್‌ ನಗರದ ಕೆಲವು ಪ್ರಮುಖ ಭಾಗಗಳಲ್ಲಿ ಇವು ಕಂಡುಬಂದಿವೆ. ಅವಹೇಳಕಾರಿಯಾಗಿದ್ದ ಈ ಪೋಸ್ಟರ್‌ಗಳನ್ನು ಸದ್ಯ ತೆಗೆದುಹಾಕಲಾಗಿದೆ.

ಇದು ಮುನಿರತ್ನ ಅವರ ವಿರುದ್ಧದ ಷಡ್ಯಂತ್ರದ ಒಂದು ಭಾಗ ಎಂದು ಮುನಿರತ್ನ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ. ಇದರ ಕುರಿತು ಪೊಲೀಸ್‌ ತನಿಖೆಗೆ ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕ ಮುನಿರತ್ನ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಇದನ್ನು ಆಧರಿಸಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಎರಡು ವಾರಗಳ ಕಾಲ ಜೈಲಿನಲ್ಲಿದ್ದ ಮುನಿರತ್ನ, ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ವೈಯಾಲಿಕಾವಲ್‌ ಹಾಗೂ ಕಗ್ಗಲಿಪುರ ಪೊಲೀಸ್‌ ಠಾಣೆಗಳಲ್ಲಿ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Laxmi Hebbalkar: ಮಾಡಿದ್ದುಣ್ಣೋ ಮಾರಾಯ; ಮುನಿರತ್ನ ಬಂಧನದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ